ವಾರಗಳ ನಂತರ ಬೆಂಗಳೂರಲ್ಲಿ ಸುರಿದ ಮಳೆ, ರಸ್ತೆ ಮತ್ತು ಅಂಡರ್​ಪಾಸ್​ಗಳು ಜಲಾವೃತ, ವಾಹನ ಸವಾರರಿಗೆ ತಪ್ಪದ ಗೋಳು!

ವಾರಗಳ ನಂತರ ಬೆಂಗಳೂರಲ್ಲಿ ಸುರಿದ ಮಳೆ, ರಸ್ತೆ ಮತ್ತು ಅಂಡರ್​ಪಾಸ್​ಗಳು ಜಲಾವೃತ, ವಾಹನ ಸವಾರರಿಗೆ ತಪ್ಪದ ಗೋಳು!

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 01, 2023 | 10:54 AM

ದಿನದ ಕೆಲಸ ಮುಗಿಸಿಕೊಂಡು ಮನೆಗಳ ಕಡೆ ಹೊರಟ ಜನರ ವಾಹನಗಳು ಜಾಮ್ ನಲ್ಲಿ ಸಿಲುಕಿ ಪರದಾಡುವ ಸ್ಥಿತಿ. ಅಲ್ಲೇ ಸುಗಮ ಖಾಸಗಿ ಸಂಸ್ಥೆಗೆ ಸೇರಿದ ಬಸ್ಸೊಂದು ಅಂಡರ್ ಪಾಸ್ ಬಳಿ ಕೆಟ್ಟು, ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡಿದೆ. ಕೇವಲ ಶಿವಾನಂದ ಸರ್ಕಲ್ ಮಾತ್ರ ಅಲ್ಲ, ನಗರದ ಹಲವಾರು ರಸ್ತೆಗಳು ಜಲಾವೃತಗೊಂಡು ವಾಹನ ಸವಾರರಿಗೆ ಆಸಹನೀಯ ಸ್ಥಿತಿ ಉಂಟಾಗಿತ್ತು.

ಬೆಂಗಳೂರು: ನಮ್ಮ ರಾಜ್ಯದಲ್ಲಿ ಸರ್ಕಾರಗಳು ಬದಲಾಗುತ್ತವೆ ಆದರೆ ರಾಜ್ಯ ರಾಜಧಾನಿಯ ರಸ್ತೆಗಳು, ಕೆಟ್ಟ ಇನ್ಫ್ರಾಸ್ಟ್ರಕ್ಚರ್ (infrastructure) ಮಾತ್ರ ಬದಲಾಗದು! ಅಧಿಕಾರಕ್ಕೆ ಬರುವ ಸರ್ಕಾರಗಳು ಬೆಂಗಳೂರನ್ನು ಸಿಂಗಪೂರ್ ಮಾಡ್ತೀವಿ, ಮಲೇಷ್ಯಾ ಮಾಡ್ತೀವಿ, ಬ್ರ್ಯಾಂಡ್ ಬೆಂಗಳೂರನ್ನು (Brand Bengaluru) ಇಡೀ ವಿಶ್ವವೇ ಬೆರಗುಗಣ್ಣುಗಳಿಂದ ನೋಡುವಂತೆ ಮಾಡ್ತೀವಿ ಅನ್ನುತ್ತವೆ. ಹೇಳಿಕೆಗಳಲ್ಲೇ 5 ವರ್ಷ ಕಳೆದುಹೋಗುತ್ತವೆ, ಬೆಂಗಳೂರು 50 ವರ್ಷಗಲ ನಗರವಾಗಿ ಉಳಿದುಬಿಡುತ್ತದೆ. ನಗರದ ಶಿವಾನಂದ ಸರ್ಕಲ್ ನಲ್ಲಿ (Shivananda Circle) ಕಳೆದ ರಾತ್ರಿ ಸುರಿದ ಮಳೆಯ ಬಳಿಕ ಉಂಟಾದ ಸನ್ನಿವೇಶ ನೋಡಿ. ಸರ್ಕಲ್ ಸುತ್ತಲಿನ ರಸ್ತೆಗಳೆಲ್ಲ ಜಲಾವೃತ. ದಿನದ ಕೆಲಸ ಮುಗಿಸಿಕೊಂಡು ಮನೆಗಳ ಕಡೆ ಹೊರಟ ಜನರ ವಾಹನಗಳು ಜಾಮ್ ನಲ್ಲಿ ಸಿಲುಕಿ ಪರದಾಡುವ ಸ್ಥಿತಿ. ಅಲ್ಲೇ ಸುಗಮ ಖಾಸಗಿ ಸಂಸ್ಥೆಗೆ ಸೇರಿದ ಬಸ್ಸೊಂದು ಅಂಡರ್ ಪಾಸ್ ಬಳಿ ಕೆಟ್ಟು, ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡಿದೆ. ಕೇವಲ ಶಿವಾನಂದ ಸರ್ಕಲ್ ಮಾತ್ರ ಅಲ್ಲ, ನಗರದ ಹಲವಾರು ರಸ್ತೆಗಳು ಜಲಾವೃತಗೊಂಡು ವಾಹನ ಸವಾರರಿಗೆ ಆಸಹನೀಯ ಸ್ಥಿತಿ ಉಂಟಾಗಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ