ಗ್ಯಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಪೂಜಾ ಕೈಂಕರ್ಯಗಳು ಆರಂಭ, ವಿಡಿಯೋ ಶೇರ್ ಮಾಡಿದ ವಕೀಲ ಜೈನ್
ನೆಲಮಾಳಿಗೆ ಪ್ರದೇಶದಲ್ಲಿ ವಿಗ್ರಹಗಳನ್ನು ತಂದಿರಿಸಿದ ಬಳಿಕ ಕಾಶಿ ವಿಶ್ವನಾಥ ಟ್ರಸ್ಟ್ ನ ಅರ್ಚಕರೊಬ್ಬರು ಶಯನ್ ಆರತಿ ನೆರವೇರಿಸಿದರು. ವಿಗ್ರಹಗಳ ಮುಂದೆ ಅಖಂಡ ಜ್ಯೋತಿಯನ್ನು ಬೆಳಗಿಸಲಾಯಿತು. ದೇವರ ವಿಗ್ರಹಗಳ ಬೆಳಗಿನ ಮಂಗಳ ಆರತಿ, ಭೋಗ್ ಆರತಿ, ಸಂಧ್ಯಾಕಾಲದ ಅರತಿ, ಸೂರ್ಯಾಸ್ತದ ಆರತಿ ಮತ್ತು ಶಯನ ಆರತಿಯನ್ನು ಪ್ರತಿದಿನ ನೆರವೇರಿಸಲಾಗುವುದು,’ ಎಂದು ವಕೀಲ ವಿಷ್ಟು ಜೈನ್ ಹೇಳಿದ್ದಾರೆ.
ಲಖನೌ: ಗ್ಯಾನವಾಪಿ ಮಸೀದಿಯ (Gyanvapi mosque) ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜಾ ಕೈಂಕರ್ಯಗಳನ್ನು ನಡೆಸಲು ವಾರಣಾಸಿ ಜಿಲ್ಲಾ ನ್ಯಾಯಾಲಯ (Varanasi district court) ಅನುಮತಿ ನೀಡಿದ ಬಳಿಕ ಕಾಶಿ ವಿಶ್ವನಾಥ ಟ್ರಸ್ಟ್ ವತಿಯಿಂದ ಗುರುವಾರದ ಬೆಳಗಿನ ಜಾವದಿಂದಲೇ ಆರಾಧನೆಗಳು ಆರಂಭಗೊಂಡವು. ಪೂಜೆ ನಡೆಯುತ್ತಿರುವ ದೃಶ್ಯ ತೋರುವ ವಿಡಿಯೋವನ್ನು ಸುಪ್ರೀಮ್ ಕೋರ್ಟ್ ವಕೀಲ ವಿಷ್ಣು ಶಂಕರ್ ಜೈನ್ (Vishnu Shankar Jain) ತಮ್ಮ ಎಕ್ಸ್ ಹ್ಯಾಂಡಲ್ ನಲ್ಲಿ ಶೇರ್ ಮಾಡಿದ್ದು, ಮಂದಿರದ ಟ್ರಸ್ಟ್ ನವರು ಕೋರ್ಟ್ ಆದೇಶವನ್ನು ಪಾಲಿಸಿದ್ದಾರೆ ಎಂದು ಹೇಳಿದ್ದಾರೆ. ಇದೇ ವಕೀಲರು ಗ್ಯಾನವಾಪಿ ಮಸೀದಿ ಪ್ರಕರಣದಲ್ಲಿ ಹಿಂದೂಗಳ ಪರ ವಕಾಲತ್ತನ್ನು ವಹಿಸಿಕೊಂಡಿದ್ದಾರೆ. ‘ಸಾಲಿಸಿಟರ್ ಜನರಲ್ ಅವರು ಕೋರ್ಟ್ ಆದೇಶ ಪಾಲನೆ ಆಗಿರುವುದನ್ನು ತಿಳಿಸಿದ್ದಾರೆ. ನೆಲಮಾಳಿಗೆ ಪ್ರದೇಶದಲ್ಲಿ ವಿಗ್ರಹಗಳನ್ನು ತಂದಿರಿಸಿದ ಬಳಿಕ ಕಾಶಿ ವಿಶ್ವನಾಥ ಟ್ರಸ್ಟ್ ನ ಅರ್ಚಕರೊಬ್ಬರು ಶಯನ್ ಆರತಿ ನೆರವೇರಿಸಿದರು. ವಿಗ್ರಹಗಳ ಮುಂದೆ ಅಖಂಡ ಜ್ಯೋತಿಯನ್ನು ಬೆಳಗಿಸಲಾಯಿತು. ದೇವರ ವಿಗ್ರಹಗಳ ಬೆಳಗಿನ ಮಂಗಳ ಆರತಿ, ಭೋಗ್ ಆರತಿ, ಸಂಧ್ಯಾಕಾಲದ ಅರತಿ, ಸೂರ್ಯಾಸ್ತದ ಆರತಿ ಮತ್ತು ಶಯನ ಆರತಿಯನ್ನು ಪ್ರತಿದಿನ ನೆರವೇರಿಸಲಾಗುವುದು,’ ಎಂದು ವಕೀಲ ವಿಷ್ಟು ಶಂಕರ್ ಜೈನ್ ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.
Puja started at gyanvyapi pic.twitter.com/ZjcWYnklCG
— Vishnu Shankar Jain (@Vishnu_Jain1) February 1, 2024
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ