ಪಿರಿಯಾಪಟ್ಟಣದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ಮೊದಲು ತಡವಾಗಿ ಬಂದಿದ್ದಕ್ಕೆ ವಿಷಾದಿಸಿದ ಸಿದ್ದರಾಮಯ್ಯ

Updated on: Apr 26, 2025 | 8:30 PM

ಸುಮಾರು ₹ 440 ಕೋಟಿ ವೆಚ್ಚದ ಕಾಮಗಾರಿಗಳನ್ನು ಉದ್ಘಾಟಿಸಿದ ಸಿದ್ದರಾಮಯ್ಯ ಪಶು ಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವರಾಗಿರುವ ಅಜಾನುಬಾಹು ವೆಂಕಟೇಶ್ ಅವರನ್ನು ವಿಶೇಷ ಹೊಗಳಿಕೆಗೆ ಪಾತ್ರರಾಗಿಸಿದರು. ವೆಂಕಟೇಶ್ ಕಡಿಮೆ ಮಾತಾಡುವ ವ್ಯಕ್ತಿಯಾದರೂ ಕೆಲಸಗಾರ, ಪಿರಿಯಾಪಟ್ಟಣದ ಕ್ಷೇತ್ರದ ಪ್ರತಿಯೊಬ್ಬ ವ್ಯಕ್ತಿಯನ್ನು ಅವರು ವೈಯಕ್ತಿಕವಾಗಿ ಬಲ್ಲರು, ಎಂದು ಸಿದ್ದರಾಮಯ್ಯ ಹೇಳಿದರು.

ಮೈಸೂರು, ಏಪ್ರಿಲ್ 26: ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ವಿವಿಧ ಕಾಮಗಾರಿಗಳಿಗೆ (development works) ಚಾಲನೆ ನೀಡಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಕಾರ್ಯಕ್ರಮಕ್ಕೆ ಬರಲು ತಡವಾಗಿದಕ್ಕೆ ವಿಷಾದ ವ್ಯಕ್ತಪಡಿಸಿದರು. ತಡವಾಗಿದ್ದಕ್ಕೆ ಕಾರಣ ಹೇಳಿದ ಸಿಎಂ, ತಮ್ಮ ಮತ್ತು ಸಚಿವ ಕೆ ವೆಂಕಟೇಶ್ ಮೇಲಿನ ಅಭಿಮಾನಕ್ಕೆ ಕಟ್ಟುಬಿದ್ದು ಅಲ್ಲಿಯವರೆಗೆ ಕಾಯ್ದಿದ್ದಕ್ಕಾಗಿ ಜನರಿಗೆ ಧನ್ಯವಾದ ಸಲ್ಲಿಸಿದರು. ವೆಂಕಟೇಶ್ ಅವರ ಹೆಸರು ಪ್ರಸ್ತಾಪಿಸಿದಾಗ ಜನ ಚಪ್ಪಾಳೆ ಹೊಡೆದು, ಶಿಳ್ಳೆ ಹಾಕುತ್ತಾ ತಮ್ಮ ಸಂತೋಷ ವ್ಯಕ್ತಪಡಿಸಿದರು.

ಇದನ್ನೂ ಓದಿ:   ಮಲೆ ಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆ ನಡೆಸಿ ಮಾದಪ್ಪನ ಸನ್ನಿಧಿಗೆ ತೆರಳಿದ ಸಿಎಂ ಸಿದ್ದರಾಮಯ್ಯ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Apr 26, 2025 08:30 PM