ರಾಬರ್ಟ್ ನಂತ್ರ ಕನ್ನಡದ ಕರಿಯಾ ಐ ಲವ್ ಯು ಗೆ ಮಂಗ್ಲಿ ಹಾಡು

ರಾಬರ್ಟ್ ತೆಲಗು ಚಿತ್ರದಲ್ಲಿ ಕನ್ನೆ ಅದಿರಿಂದ ಅನ್ನೋ ಹಾಡನ್ನ ಹಾಡಿ ಕನ್ನಡ ಸಿನಿಪ್ರಿಯರನ್ನ ಫಿದಾ ಮಾಡಿದ್ದ ಸಿಂಗರ್ ಮಂಗ್ಲಿ ಕನ್ನಡದ ಕರಿಯಾ ಐ ಲವ್ ಯು ಗೆ ಮಂಗ್ಲಿ ಧ್ವನಿ ನೀಡಿದ್ದಾರೆ. ಬಿಟ್ಟ್ ಬಂದ್ ಹಳ್ಳಿಯಿಂದ ಬಿಟ್ಯಾಕ್ ಬಂದೆ ಅನ್ನೋ ಹಾಡನ್ನ ಹಾಡಿದ್ದಾರೆ. ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿಯ ಮಂಜುನಾಥ್ ಮಂಗ್ಲಿಯನ್ನ ಕನ್ನಡಕ್ಕೆ ಕರೆತಂದು ಹಾಡಿಸಿದ್ದಾರೆ. ಕರಿಯಾ ಐ ಲವ್ ಯು ಸಿನಿಮಾಗೆ ಮಂಜುನಾಥ್ ನಾಯಕನಾಗಿದ್ದು ತಿಪ್ಪೆಶ್ ಆಕ್ಷನ್ ಕಟ್ ಹೇಳಿರೋ ಸಿನಿಮಾ ಇದಾಗಿದೆ.

  • TV9 Web Team
  • Published On - 17:25 PM, 7 Apr 2021