ಇಂದು ಅಧಿಕಾರ ವಹಿಸಿಕೊಂಡ ದೆಹಲಿ ಸಿಎಂ, ಸಚಿವರಿಂದ ಯಮುನಾ ಘಾಟ್‌ನಲ್ಲಿ ಆರತಿ
ದೆಹಲಿಯ ಮುಖ್ಯಮಂತ್ರಿ, ಸಚಿವರಿಂದ ಯಮುನಾ ನದಿಯ ವಾಸುದೇವ್ ಘಾಟ್‌ನಲ್ಲಿ ಯಮುನಾ ಆರತಿ ನೆರವೇರಿಸಲಾಗುತ್ತಿದೆ. ಈ ವೇಳೆ ದೆಹಲಿ ಮುಖ್ಯಮಂತ್ರಿ, ಅವರ ಸಂಪುಟ ಸಚಿವರು ಮತ್ತು ದೆಹಲಿಯ ಬಿಜೆಪಿ ಸಂಸದರು ಸಹ ಹಾಜರಿದ್ದರು. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಅವರ ಸಚಿವರು ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ ಹರಿದ್ವಾರ ಮತ್ತು ವಾರಾಣಸಿಯ ಗಂಗಾ ಘಾಟ್‌ಗಳಲ್ಲಿ ದೈನಂದಿನ ಸಂಜೆ ಸಮಾರಂಭದಿಂದ ಪ್ರೇರಿತರಾಗಿ ವಾಸುದೇವ್ ಘಾಟ್‌ನಲ್ಲಿ ಯಮುನಾ ನದಿಯ "ಆರತಿ"ಯಲ್ಲಿ ಭಾಗವಹಿಸಿದ್ದಾರೆ.
ನವದೆಹಲಿ: ದೆಹಲಿಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ರೇಖಾ ಗುಪ್ತಾ ತಮ್ಮ ಸಂಪುಟದ ನೂತನ ಸಚಿವರೊಂದಿಗೆ ಯಮುನಾ ತೀರದ ವಾಸುದೇವ ಘಾಟ್‌ನಲ್ಲಿ ಯಮುನಾ ಆರತಿ ಮಾಡಿದ್ದಾರೆ. 27 ವರ್ಷಗಳ ನಂತರ ದೆಹಲಿಯಲ್ಲಿ ಬಿಜೆಪಿಯ ಪುನರಾಗಮನದ ಜೊತೆಗೆ, ಶತಮಾನಗಳಷ್ಟು ಹಳೆಯ ನಗರದ ಜೀವನಾಡಿಯಾಗಿದ್ದ, ಈಗ ಅದು ಚರಂಡಿಯಾಗಿ ಮಾರ್ಪಟ್ಟಿರುವ ಯಮುನಾ ನದಿಯನ್ನು ಸ್ವಚ್ಛಗೊಳಿಸುವ ಭರವಸೆಯನ್ನು ರೇಖಾ ಗುಪ್ತಾ ನೇತೃತ್ವದ ಸರ್ಕಾರ ನೀಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ