Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ವರ್ಷದಲ್ಲಿ ‘ಚೇಸರ್’ ಸಿನಿಮಾ ಮಾಡಿದ್ದಕ್ಕೆ ಶಾಕ್ ಆದ ಧ್ರುವ ಸರ್ಜಾ; ಕಾರಣ?

ಒಂದೇ ವರ್ಷದಲ್ಲಿ ‘ಚೇಸರ್’ ಸಿನಿಮಾ ಮಾಡಿದ್ದಕ್ಕೆ ಶಾಕ್ ಆದ ಧ್ರುವ ಸರ್ಜಾ; ಕಾರಣ?

ಮದನ್​ ಕುಮಾರ್​
|

Updated on: Feb 20, 2025 | 8:28 PM

ಸುಮಂತ್ ಶೈಲೇಂದ್ರ ನಟನೆಯ ‘ಚೇಸರ್’ ಚಿತ್ರದ ಟೀಸರ್​ ಅನ್ನು ಧ್ರುವ ಸರ್ಜಾ ರಿಲೀಸ್ ಮಾಡಿದ್ದಾರೆ. ರವಿಶಂಕರ್​, ಸಾಧುಕೋಕಿಲ, ಸುಚೇಂದ್ರ ಪ್ರಸಾದ್, ರಂಗಾಯಣ ರಘು, ಚಿಕ್ಕಣ್ಣ, ಕುರಿ ಪ್ರತಾಪ್, ಉಗ್ರಂ ಮಂಜು ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಟೀಸರ್​ ನೋಡಿ ಧ್ರುವ ಸರ್ಜಾ ಅವರು ಮೆಚ್ಚುಗೆ ಸೂಚಿಸಿದ್ದಾರೆ.

‘ಚೇಸರ್’ ಸಿನಿಮಾದ ಟೀಸರ್ ಲಾಂಚ್ ಆಗಿದೆ. ನಟ ಧ್ರುವ ಸರ್ಜಾ ಅವರು ಈ ಟೀಸರ್​ ಬಿಡುಗಡೆ ಮಾಡಿದ್ದಾರೆ. ಬಳಿಕ ಅವರು ವೇದಿಕೆಯಲ್ಲಿ ಮಾತನಾಡಿದರು. ಈ ಸಿನಿಮಾದಲ್ಲಿ ಅನೇಕ ಕಲಾವಿದರು ನಟಿಸಿದ್ದಾರೆ. ಅವರೆಲ್ಲರ ಡೇಟ್ಸ್ ಹೊಂದಿಸುವುದು ತುಂಬ ಕಷ್ಟ. ಆದರೂ ಕೂಡ ಒಂದೇ ವರ್ಷದಲ್ಲಿ ಈ ಸಿನಿಮಾ ಮಾಡಿ ಮುಗಿಸಿದ್ದಾರೆ ಎಂಬುದನ್ನು ತಿಳಿದು ತಮಗೆ ಶಾಕ್ ಆಯಿತು ಎಂದು ಧ್ರುವ ಸರ್ಜಾ ಹೇಳಿದರು. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.