ಗುರುವಾರದ ಘಟನೆಯಿಂದ ಎಚ್ಚೆತ್ತ ಪೊಲೀಸರು, ಚಿಕ್ಕಮಗಳೂರಿನಲ್ಲಿ ಸಿದ್ದರಾಮಯ್ಯಗೆ ಬಿಗಿ ಭದ್ರತೆ
ಖುದ್ದು ಚಿಕ್ಕಮಗಳೂರಿನ ಎಸ್ ಪಿ ಯವರೇ ಭದ್ರತಾ ವ್ಯವಸ್ಥೆಯ ಉಸ್ತುವಾರಿ ವಹಿಸಿಕೊಂಡಿದ್ದರು. 3 ಡಿವೈಎಸ್ ಪಿ, 5 ಸರ್ಕಲ್ ಇನ್ಸ್ಪೆಕ್ಟರ್, 30 ಪಿಎಸ್ ಐ ಮತ್ತು 20 ಎ ಎಸ್ ಐ ಸೇರಿದಂತೆ ಒಟ್ಟು 300 ಪೊಲೀಸ್ ಸಿಬ್ಬಂದಿಯ ಭದ್ರತೆಯನ್ನು ಸಿದ್ದರಾಮಯ್ಯನವರಿಗೆ ಒದಗಿಸಲಾಗಿತ್ತು.
ಚಿಕ್ಕಮಗಳೂರು: ಗುರುವಾರದ ಮೊಟ್ಟೆ ಎಸೆತ ಪ್ರಕರಣದಿಂದ ಸರ್ಕಾರ ಮತ್ತು ರಾಜ್ಯ ಪೊಲೀಸ್ ವ್ಯವಸ್ಥೆ ಎಚ್ಚೆತ್ತುಕೊಂಡಿದೆ. ಅದರ ಪರಿಣಾಮವಾಗೇ ಶುಕ್ರವಾರದಂದು ಚಿಕ್ಕಮಗಳೂರು ಜಿಲ್ಲೆಗೆ ನೆರೆ ವೀಕ್ಷಣೆಗೆಂದು ತೆರಳಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ (Siddaramaiah) ಬಿಗಿ ಪೊಲೀಸ್ ಭದ್ರತೆಯನ್ನು (security) ಕಲ್ಪಿಸಲಾಯಿತು. ಖುದ್ದು ಚಿಕ್ಕಮಗಳೂರಿನ ಎಸ್ ಪಿ ಯವರೇ ಭದ್ರತಾ ವ್ಯವಸ್ಥೆಯ ಉಸ್ತುವಾರಿ ವಹಿಸಿಕೊಂಡಿದ್ದರು. 3 ಡಿವೈಎಸ್ ಪಿ, 5 ಸರ್ಕಲ್ ಇನ್ಸ್ಪೆಕ್ಟರ್, 30 ಪಿಎಸ್ ಐ ಮತ್ತು 20 ಎ ಎಸ್ ಐ ಸೇರಿದಂತೆ ಒಟ್ಟು 300 ಪೊಲೀಸ್ ಸಿಬ್ಬಂದಿಯ ಭದ್ರತೆಯನ್ನು ಸಿದ್ದರಾಮಯ್ಯನವರಿಗೆ ಒದಗಿಸಲಾಗಿತ್ತು.
Latest Videos