ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ! ವೀಡಿಯೋ ವೈರಲ್
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ಶಂಕರಲಿಂಗೇಶ್ವರ ಸಂಸ್ಥಾನದ ಹಿರೇಮಠದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಗಾಳಿಯಲ್ಲಿ ಗುಂಡು ಹಾರಿಸಿದ್ದು, ವಿಡಿಯೋ ವೈರಲ್ ಆಗಿದೆ. ಕೆಲ ತಿಂಗಳು ಮಠದಿಂದ ದೂರವಾಗಿದ್ದ ಸ್ವಾಮೀಜಿ ಇತ್ತೀಚೆಗೆ ವಾಪಸ್ಸಾಗಿದ್ದರು.ಕುಡಿದು ರಂಪಾಟ ಮಾಡಿದ್ದಕ್ಕೆ ಗ್ರಾಮಸ್ಥರು ಸ್ವಾಮೀಜಿಯನ್ನು ಮಠದಿಂದ ಹೊರಗೆ ಹಾಕಿದ್ದರು. ಮಠಕ್ಕೆ ಹೊಸ ಪೀಠಾಧಿಪತಿ ನೇಮಕ ಚರ್ಚೆ ನಡೆದ ಬೆನ್ನಲ್ಲೇ ವಾಪಸಾದ ಸ್ವಾಮೀಜಿ, ಮಠದ ಆವರಣದಲ್ಲಿ ನಿಂತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ವಿರೋಧಿಗಳನ್ನು ಭಯಪಡಿಸಲು ಗುಂಡು ಹಾರಿಸಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ.
ಕಲಬುರಗಿ, ಡಿಸೆಂಬರ್ 22: ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ಶಂಕರಲಿಂಗೇಶ್ವರ ಸಂಸ್ಥಾನದ ಹಿರೇಮಠದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಗಾಳಿಯಲ್ಲಿ ಗುಂಡು ಹಾರಿಸಿದ್ದು, ವಿಡಿಯೋ ವೈರಲ್ ಆಗಿದೆ. ಕೆಲ ತಿಂಗಳು ಮಠದಿಂದ ದೂರವಾಗಿದ್ದ ಸ್ವಾಮೀಜಿ ಇತ್ತೀಚೆಗೆ ವಾಪಸ್ಸಾಗಿದ್ದರು. ಕುಡಿದು ರಂಪಾಟ ಮಾಡಿದ್ದಕ್ಕೆ ಗ್ರಾಮಸ್ಥರು ಸ್ವಾಮೀಜಿಯನ್ನು ಮಠದಿಂದ ಹೊರಗೆ ಹಾಕಿದ್ದರು. ಮಠಕ್ಕೆ ಹೊಸ ಪೀಠಾಧಿಪತಿ ನೇಮಕ ಚರ್ಚೆ ನಡೆದ ಬೆನ್ನಲ್ಲೇ ವಾಪಸಾದ ಸ್ವಾಮೀಜಿ, ಮಠದ ಆವರಣದಲ್ಲಿ ನಿಂತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ವಿರೋಧಿಗಳನ್ನು ಭಯಪಡಿಸಲು ಗುಂಡು ಹಾರಿಸಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.