ರಾಹುಲ್ ಗಾಂಧಿಗೆ ಗುಜರಾತ್ ಕೋರ್ಟ್​ ವಿಧಿಸಿದ್ದ ಶಿಕ್ಷೆಗೆ ಸುಪ್ರೀಮ್ ಕೋರ್ಟ್​​ನಿಂದ ತಡೆಯಾಜ್ಞೆ; ಎಐಸಿಸಿ ಕಚೇರಿಯಲ್ಲಿ ಸಂಭ್ರಮಾಚರಣೆ!

ಖರ್ಗೆಗೆ ರಾಹುಲ್ ಸ್ವೀಟ್ ತಿನ್ನಿಸಲು ಮುಂದಾದಾಗ ಅವರು ಬೇಡವೆನ್ನುತ್ತಾರೆ, ತಿನ್ನಿಸುವ ಭರದಲ್ಲಿ ತಿಂಡಿ ಕೈಯಿಂದ ಜಾರುತ್ತದೆ, ಆದರೆ ಅದು ಕೆಳಗೆ ಬೀಳುವ ಮೊದಲೇ ರಾಹುಲ್ ಜಗ್ಲಿಂಗ್ ಮಾಡುತ್ತಾ ಹಿಡಿದು ಖರ್ಗೆ ಅವರಿಗೆ ತಿನ್ನಿಸುತ್ತಾರೆ.

ರಾಹುಲ್ ಗಾಂಧಿಗೆ ಗುಜರಾತ್ ಕೋರ್ಟ್​ ವಿಧಿಸಿದ್ದ ಶಿಕ್ಷೆಗೆ ಸುಪ್ರೀಮ್ ಕೋರ್ಟ್​​ನಿಂದ ತಡೆಯಾಜ್ಞೆ; ಎಐಸಿಸಿ ಕಚೇರಿಯಲ್ಲಿ ಸಂಭ್ರಮಾಚರಣೆ!
|

Updated on: Aug 04, 2023 | 6:39 PM

ದೆಹಲಿ: ಮಾನನಷ್ಟ ಮೊಕದ್ದಮೆಯೊಂದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ (Rahul Gandhi) ಗುಜರಾತಿ ಕೋರ್ಟೊಂದು ನೀಡಿದ 2-ವರ್ಷ ಜೈಲು ಶಿಕ್ಷೆಗೆ ಸುಪ್ರೀಮ್ ಕೋರ್ಟ್ ತಡೆಯಾಜ್ಞೆ ನೀಡಿರುವುದು ದೆಹಲಿಯ ಎಐಸಿಸಿ ಕಚೇರಿಯಲ್ಲಿ (AICC office) ಸಂಭ್ರಮದ ವಾತಾವರಣ ಸೃಷ್ಟಿಸಿದೆ. ತೀರ್ಪಿನ ಬಳಿಕ ಕಚೇರಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ನೇತೃತ್ವದಲ್ಲಿ ಸಭೆ ಸೇರಿದ ಕಾಂಗ್ರೆಸ್ ನಾಯಕರು ರಾಹುಲ್ ರನ್ನು ಅಭಿನಂದಿಸಿದರು. ಖರ್ಗೆ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ರಾಹುಲ್ ಗೆ ಬೋಕೆ ನೀಡಿ ಸಿಹಿ ತಿನ್ನಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಕೇರಳದ ಸಂಸದರೊಬ್ಬರು ರಾಹುಲ್ ಗೆ ಶಾಲು ಹೊದಿಸಿ ಅಭಿನಂದಿಸುತ್ತಾರೆ. ರಾಹುಲ್, ಖರ್ಗೆಗೆ ಅವರಿಗೆ ಸ್ವೀಟ್ ತಿನ್ನಿಸಲು ಮುಂದಾದಾಗ ಹಿರಿಯ ನಾಯಕ ಬೇಡವೆನ್ನುತ್ತಾರೆ, ತಿನ್ನಿಸುವ ಭರದಲ್ಲಿ ತಿಂಡಿ ಕೈಯಿಂದ ಜಾರುತ್ತದೆ, ಆದರೆ ಅದು ಕೆಳಗೆ ಬೀಳುವ ಮೊದಲೇ ರಾಹುಲ್ ಜಗ್ಲಿಂಗ್ ಮಾಡುತ್ತಾ ಅದನ್ನು ಹಿಡಿದು ಖರ್ಗೆ ಅವರಿಗೆ ತಿನ್ನಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow us