ಅಯಾಸಗೊಂಡಿದ್ದ ಡಿಕೆ ಶಿವಕುಮಾರ್ರನ್ನು ಮತ್ತಷ್ಟು ದಣಿಸಿದ ಪುಲಿಕೇಶಿನಗರ ಶಾಸಕ ಮತ್ತು ಕಾರ್ಯಕರ್ತರು!
DK Shivakumar in Pulikeshi Nagar: ಬೆಳಗ್ಗೆಯಷ್ಟೇ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಶಿವಕುಮಾರ್ ಸಹಜವಾಗೇ ದಣಿದಿದ್ದರು. ವೇದಿಕೆ ಮೇಲೆ ಅವರ ಸತ್ಕಾರ ಸಾವಕಾಶವಾಗಿ ನಡೆದಿದ್ದರೆ ಉಪ ಮುಖ್ಯಮಂತ್ರಿಗೆ ಕಿರಿಕಿರಿ ಅನಿಸುತ್ತಿರಲಿಲ್ಲ.
ಬೆಂಗಳೂರು: ನಗರದ ಪುಲಿಕೇಶಿನಗರದಲ್ಲಿ (Pulikeshinagar) ಕಾಂಗ್ರೆಸ್ ಕಚೇರಿ ಉದ್ಘಾಟಿಸಲು ಆಗಮಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಪಕ್ಷದ ಕಾರ್ಯಕರ್ತರ ಗದ್ದಲದಲ್ಲಿ ಹೈರಾಣಾದರು. ಎಲ್ಲ ಕಾರ್ಯಕರ್ತರಿಗೆ ಶಿವಕುಮಾರ್ ಜೊತೆ ವೇದಿಕೆ ಮೇಲೆ ಕಾಣಿಸಿಕೊಳ್ಳುವಾಸೆ. ಮೂರು ದಿನಗಳ ದೆಹಲಿ ಪ್ರವಾಸದ ಬಳಿಕ ಇಂದು ಬೆಳಗ್ಗೆಯಷ್ಟೇ ಬೆಂಗಳೂರಿಗೆ ಆಗಮಿಸಿದ ಶಿವಕುಮಾರ್ ಸಹಜವಾಗೇ ದಣಿದಿದ್ದರು. ವೇದಿಕೆ ಮೇಲೆ ಅವರ ಸತ್ಕಾರ ಸಾವಕಾಶವಾಗಿ ನಡೆದಿದ್ದರೆ ಉಪ ಮುಖ್ಯಮಂತ್ರಿಗೆ ಕಿರಿಕಿರಿ ಅನಿಸುತ್ತಿರಲಿಲ್ಲ. ಆದರೆ, ಹಾರ ಹಾಕಲು, ಪೇಟ ತೊಡಿಸಲು, ಶಾಲು ಹೊದಿಸಲು ಮತ್ತ ನೆನಪಿನ ಕಾಣಿಕೆ ನೀಡುವಾಗ ಸ್ಥಳೀಯ ಶಾಸಕ ಎಸಿ ಶ್ರೀನಿವಾಸ (AC Srinivas), ಮಾಜಿ ಮೇಯರ್ ಸಂಪತ್ ಕುಮಾರ್ ಹಾಗೂ ಕೆಲ ಮಾಜಿ ಕಾರ್ಪೋರೇಟೆರ್ ಗಳು ಅವಸರದ ಪ್ರವೃತ್ತಿ ತೋರಿದ್ದು ಯಾಕೆ ಅಂತ ಶಿವಕುಮಾರ್ ಗೂ ಅರ್ಥವಾಗಲಿಲ್ಲ. ಪಕ್ಷದ ನೂತನ ಕಚೇರಿ ಉದ್ಘಾಟಿಸಿ ಅವರು ಅಲ್ಲಿಂದ ವಾಪಸ್ಸಾದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ