ರಾಯರ ಬಗ್ಗೆ ಆಲ್ಬಂ ಸಾಂಗ್ ಮಾಡಲು ಕಾರಣ ಏನು? ವಿವರಿಸಿದ ಅಜನೀಶ್
ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆಯಲ್ಲಿ ರಾಯರ ಆಲ್ಬಂ ಸಾಂಗ್ ಮೂಡಿ ಬಂದಿದೆ. ಇದರ ಟೀಸರ್ ಅನ್ನು ತಂಡ ಬಿಡುಗಡೆ ಮಾಡಿದೆ. ಈ ಬಗ್ಗೆ ಮಾತನಾಡುವಾಗ ಅಜನೀಶ್ ಅವರು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಹಾಡನ್ನು ಮಾಡಲು ಕಾರಣ ಆದ ವಿಷಯ ಏನು ಎಂಬುದನ್ನು ಅವರು ಹೇಳಿದ್ದಾರೆ.
ಮಂತ್ರಾಲಯ ಗುರು ರಾಯರ ಬಗ್ಗೆ ಅಜನೀಶ್ ಲೋಕನಾಥ್ ಆಲ್ಬಂ ಸಾಂಗ್ ಒಂದನ್ನು ಮಾಡಿದ್ದಾರೆ. ಈ ಹಾಡಿನ ಟೀಸರ್ ಬಿಡುಗಡೆ ಆಗಿದೆ. ‘ಕಾಂತರ ಚಾಪ್ಟರ್ 1’ ಚಿತ್ರದಲ್ಲಿ ‘ಬ್ರಹ್ಮ ಕಳಶ’ ಹಾಡು ಹಾಡಿರುವ ಅಬ್ಬಿ ಇದೀಗ ರಾಯರ ಹಾಡನ್ನ ಹಾಡಿದ್ದಾರೆ. ಲಕ್ಷ್ಮಿ ಗಣೇಶ್ ಪ್ರೊಡಕ್ಷನ್ ನಲ್ಲಿ ರಘು ಭಟ್ ನಿರ್ಮಾಣ ಮಾಡಿದ್ದಾರೆ. ಈ ಹಾಡನ್ನು ಮಾಡಲು ಕಾರಣ ಏನು ಎಂಬುದನ್ನು ಅಜನೀಶ್ ವಿವರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: May 23, 2026 08:33 AM
Follow Us


