ಆಳಂದ ಮತಗಳ್ಳತನ: ಬಿಜೆಪಿ ಮಾಜಿ ಶಾಸಕ ಮಾಲೀಕತ್ವದ ಬಾರ್​​ ನಲ್ಲಿ ಮತದಾರರ ಪಟ್ಟಿ ಪತ್ತೆ

Updated on: Oct 18, 2025 | 2:44 PM

ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ಪ್ರಕರಣಕ್ಕೆ (Aland Vote Theft Case) ಸಂಬಂಧಿಸಿದಂತೆ ಎಸ್​​ಐಟಿ ಅಧಿಕಾರಿಗಳು ತನಿಖೆ ತೀವ್ರಗೊಳಡಿಸಿದ್ದು, ನಿನ್ನೆ(ಅಕ್ಟೋಬರ್ 18) ಆಳಂದ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ (subhash guttedar) ಮನೆ ಸೇರಿದಂತೆ ಮೂರು ಕಡೆ ದಾಳಿ ಮಾಡಿದೆ. ಇದರ ಬೆನ್ನಲ್ಲೇ ಅವರ ಮನೆ ಹತ್ತಿರ ಕೆಲ ದಾಖಲೆಗಳನ್ನು ಸುಟ್ಟು ಹಾಕಿರುವುದು ಕಂಡುಬಂದಿದೆ. ಇದರಿಂದ ಎಸ್​​ಐಟಿ ಅಧಿಕಾರಿಗಳಿಗೆ ಅನುಮಾನ ವ್ಯಕ್ತವಾಗಿದ್ದು, ಸಾಕ್ಷ್ಯ ಮಾಡಿದ್ರಾ ಎನ್ನುವ ಶಂಕೆ ವ್ಯಕ್ತವಾಗಿದೆ.

ಕಲಬುರಗಿ, (ಅಕ್ಟೋಬರ್ 18): ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ಪ್ರಕರಣಕ್ಕೆ (Aland Vote Theft Case) ಸಂಬಂಧಿಸಿದಂತೆ ಎಸ್​​ಐಟಿ ಅಧಿಕಾರಿಗಳು ತನಿಖೆ ತೀವ್ರಗೊಳಡಿಸಿದ್ದು, ನಿನ್ನೆ(ಅಕ್ಟೋಬರ್ 18) ಆಳಂದ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ (subhash guttedar) ಮನೆ ಸೇರಿದಂತೆ ಮೂರು ಕಡೆ ದಾಳಿ ಮಾಡಿದೆ. ಇದರ ಬೆನ್ನಲ್ಲೇ ಅವರ ಮನೆ ಹತ್ತಿರ ಕೆಲ ದಾಖಲೆಗಳನ್ನು ಸುಟ್ಟು ಹಾಕಿರುವುದು ಕಂಡುಬಂದಿದೆ. ಇದರಿಂದ ಎಸ್​​ಐಟಿ ಅಧಿಕಾರಿಗಳಿಗೆ ಅನುಮಾನ ವ್ಯಕ್ತವಾಗಿದ್ದು, ಸಾಕ್ಷ್ಯ ಮಾಡಿದ್ರಾ ಎನ್ನುವ ಶಂಕೆ ವ್ಯಕ್ತವಾಗಿದೆ. ಇನ್ನು ಇನ್ನು ಕಲಬುರಗಿಯಲ್ಲಿರು ಸುಭಾಷ್ ಗುತ್ತೇದಾರ್ ಅವರ ಮಾಲೀಕತ್ವದ ಅಪ್ನಾ ಬಾರ್ ಮೇಲೂ ಎಸ್​​ಐಟಿ ದಾಳಿ ಮಾಡಿದ್ದು ಈ ವೇಳೆ ಬಾರ್​​ ನಲ್ಲೂ ಸಹ ವೋಟರ್ ಲಿಸ್ಟ್ ಪತ್ತೆಯಾಗಿದೆ. ಅಲ್ಲದೇ ಆರೇಳು ಬಾರಿ ಇದೇ ಬಾರ್ ನಲ್ಲಿಯೇ ಕೆಲವರು ಸಭೆ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಬಾರ್ ನಲ್ಲಿ ಕುಳಿತೇ ವೋಟ್ ಡಿಲಿಟ್ ಗೆ ಫ್ಲ್ಯಾನ್ ಹಾಕಲಾಗಿತ್ತಾ? ಎನ್ನುವ ಅನುಮಾನಗಳು ವ್ಯಕ್ತವಾಗಿದ್ದು, ಎಸ್​ಐಟಿ ತನಿಖೆ ತೀವ್ರಗೊಳಸಿದೆ.