ದಾವಣಗೆರೆ ಸಮಾವೇಶದಲ್ಲಿ ಯಡಿಯೂರಪ್ಪ, ವಿಜಯೇಂದ್ರ ಬಿಟ್ಟು ಉಳಿದೆಲ್ಲ ನಾಯಕರು ಭಾಗಿಯಾಗುತ್ತಾರೆ: ಯತ್ನಾಳ್
ಮಾಧ್ಯಮದವರು ಭಾವಿಸಿರುವಂತೆ ತನ್ನ ಉಚ್ಛಾಟನೆಯೇನೂ ಆಗೋದಿಲ್ಲ, ಶೋಕಾಸ್ ನೋಟೀಸ್ ಜಾರಿಯಾದಾಗಿನಿಂದ ತಮ್ಮ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿದೆ ಎಂದ ಯತ್ನಾಳ್ ಹೇಳಿದರು. ಯಡಿಯೂರಪ್ಪ ಒಂದು ಮುಗಿದುಹೋದ ಅಧ್ಯಾಯ ಎಂದು ಹೇಳುವ ಯತ್ನಾಳ್ ಅವರೀಗ ಲಿಂಗಾಯತ ನಾಯಕನೂ ಅಲ್ಲ, ಬಿಜೆಪಿಯನ್ನು ಬಿಟ್ಟುಹೋಗಿ ಕೆಜೆಪಿ ಮಾಡಿದಾಗ ಎಷ್ಟು ಸೀಟು ಸಿಕ್ಕವು ಅಂತ ಎಲ್ಲರಿಗೂ ಗೊತ್ತಿದೆ ಎಂದು ಶಾಸಕ ಹೇಳಿದರು.
ದೆಹಲಿ: ಪಕ್ಷದ ಕೇಂದ್ರೀಯ ಸಮಿತಿಯಿಂದ ಶೋಕಾಸ್ ನೋಟೀಸ್ ಜಾರಿಯಾಗಿರುವುದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ರನ್ನು ಅಧೀರರಾಗಿಸಿಲ್ಲ. ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ದಾವಣಗೆರೆಯಲ್ಲಿ ತಾವು ಸಮಾವೇಶ ಮಾಡಿದಾಗ ಬಿಎಸ್ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ಅವರಿಬ್ಬರನ್ನು ಹೊರತುಪಡಿಸಿ ಬಿಜೆಪಿಯ ಉಳಿದೆಲ್ಲ ನಾಯಕರು ಅಲ್ಲಿರುತ್ತಾರೆ ಎಂದು ಹೇಳಿದರು. ವಿಜಯೇಂದ್ರ ತನ್ನ ತಂದೆಯ ಹಾಗೆ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸುತ್ತಿದ್ದಾರೆ, ಅದರೆ ತಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದೆ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಯತ್ನಾಳ್ರನ್ನು ವರಿಷ್ಠರು ಉಚ್ಛಾಟಿಸುತ್ತಾರೋ ಅಥವಾ ರಾಜ್ಯದಲ್ಲಿ ಉನ್ನತ ಸ್ಥಾನಕ್ಕೇರಿಸುತ್ತಾರೋ? ಕುಮಾರ ಬಂಗಾರಪ್ಪ