ಕರ್ನಾಟಕ ಬಂದ್: ಬೆಂಗಳೂರು ನಗರದಿಂದ ಎಲ್ಲ ಬಸ್​​ಗಳು ಎಂದಿನಂತೆ ಓಡಾಡುತ್ತಿವೆ, ಪ್ರಯಾಣಿಕರ ಸಂಖ್ಯೆ ಮಾತ್ರ ಕಮ್ಮಿ

|

Updated on: Mar 22, 2025 | 3:33 PM

ಬಸ್ಸಿನ ಚಾಲಕನೊಬ್ಬರು ಬಸ್​ಗಳ ಓಡಾಟಕ್ಕೆ ಯಾವುದೇ ಸಮಸ್ಯೆ ಆಗಿಲ್ಲ, ಮಹಾರಾಷ್ಟ್ರದವರು ಗಲಾಟೆ ಮಾಡುತ್ತಿದ್ದಾರೆಂದು ನಾವೂ ಮಾಡಿದರೆ ಅವರ ಮತ್ತು ನಮ್ಮ ನಡುವೆ ವ್ಯತ್ಯಾಸ ಉಳಿಯಲ್ಲ, ನಾವು ಬಂದ್ ಮಾಡಿದಂತೆ ಅವರು ಸಹ ಬಂದ್ ಮಾಡಿದರೆ ಸಾರ್ವಜನಿಕಕರಿಗೆ ತೊಂದರೆ ಅಗುತ್ತದೆ, ಬಂದ್ ಮಾಡುವುದರಿಂದ ಯಾವ ಪ್ರಯೋಜನವೂ ಆಗಲ್ಲ ಎಂದು ಹೇಳುತ್ತಾರೆ.

ಬೆಂಗಳೂರು, ಮಾರ್ಚ್ 22: ಕನ್ನಡ ಪರ ಹೋರಾಟಗಾರರು ಇವತ್ತಿನ ಕರ್ನಾಟಕ ಬಂದ್ ಯಶಸ್ವೀಯಾಗಿದೆ ಅಂತ ಹೇಳಿದರೂ, ಮೆಜೆಸ್ಟಿಕ್​ನಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಟರ್ಮಿನಸ್ ನಲ್ಲಿ ಕಾಣುವ ಚಿತ್ರಣ ಭಿನ್ನವಾಗಿದೆ. ಸಿಬ್ಬಂದಿ ಹೇಳುವ ಪ್ರಕಾರ ನಗರ ಬಸ್​​ ನಿಲ್ದಾಣದಿಂದ ಎಲ್ಲ ಶೆಡ್ಯೂಲ್ಡ್ ಬಸ್​​ಗಳು ನಿಗದಿತ ಸಮಯಕ್ಕೆ ಹೊರಟಿವೆ ಮತ್ತು ಆಗಮಿಸಿವೆ, ಎಲ್ಲೂ ಅಡಚಣೆ ಆಗಿಲ್ಲ. ಆದರೆ, ಪ್ರಯಾಣಿಕರ ಸಂಖ್ಯೆ ಮಾತ್ರ ಎಂದಿನಂತಿಲ್ಲ, ಬಸ್ ಗಳು ಓಡಾಡಲಾರವು ಅಂತ ಬಹಳಷ್ಟು ಜನ ತಮ್ಮ ಪ್ರಯಾಣವನ್ನು ಮುಂದೂಡಿದ್ದಾರೆ. ನಮ್ಮ ಪ್ರತಿನಿಧಿ ಸಿಬ್ಬಂದಿಯೊಂದಿಗೆ ಮಾತಾಡಿರುವ ವಿಡಿಯೋ ಇದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Karnataka Bandh: ಬೆಂಗಳೂರಿಗೆ ತಟ್ಟದ ಬಂದ್ ಬಿಸಿ: ಯಾವ ಜಿಲ್ಲೆಯಲ್ಲಿ ಹೇಗಿದೆ ಪರಿಸ್ಥಿತಿ? ಇಲ್ಲಿದೆ ವಿವರ