ಬುಧವಾರ ದೆಹಲಿ ಹೈಕಮಾಂಡ್ ಸಭೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ನಾಯಕರೆಲ್ಲ ಭ್ರಷ್ಟಾಚಾರದ ಆರೋಪಗಳ ಮೇಲೆ ಚರ್ಚೆ ನಡೆಯಲಿಲ್ಲ ಎನ್ನುತ್ತಾರೆ!
ಭ್ರಷ್ಟಾಚಾರದ ಆರೋಪಗಳ ಬಗ್ಗೆ ಮಂತ್ರಿಗಳನ್ನು ರಾಹುಲ್ ಆಗಲೀ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆವರಾಗಲೀ ಪ್ರಶ್ನಿಸಿದರೇ ಅಂತ ಕೇಳಿದರೆ ಗುಂಡೂರಾವ್ ಆ ಬಗ್ಗೆ ಚರ್ಚೆ ನಡೆದಿಲ್ಲ ಎಂದಿದ್ದರು.
ಯಾದಗಿರಿ: ನಿನ್ನೆ ದೆಹಲಿಯಲ್ಲಿ ಹೈಕಮಾಂಡ್ (high command) ಕರೆದ ಸಭೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಶಾಸಕರು, ರಾಜ್ಯ ಸಚಿವ ಸಂಪುಟದ ಸದಸ್ಯರಿಗೆ ಸಭೆಯಲ್ಲಿ ಏನು ಚರ್ಚೆ ನಡೆಯಿತು ಅಂತ ಕೇಳಿದರೆ ಎಲ್ಲರದ್ದೂ ಒಂದೇ ಉತ್ತರ, ಸಿಂಗಲ್ ಪಾಯಿಂಟ್ ಪ್ರೋಗ್ರಾಮ್ ನಂತೆ! ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕನಿಷ್ಟ 20 ಸೀಟ್ ಗೆಲ್ಲಲು ಕಾರ್ಯಕರ್ತರ ಜೊತೆ ಸೇರಿ ಹೆಚ್ಚು ಶ್ರಮವಹಿಸಿ ಕೆಲಸ ಮಾಡಬೇಕು!! ಬೆಂಗಳೂರಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಇದೇ ಮಾತನ್ನು ಹೇಳಿದರು. ಇಲ್ಲಿ ಯಾದಗಿರಿಯಲ್ಲಿ ಸಣ್ಣ ಕೈಗಾರಿಕೆಗಳ ಸಚಿವ ಶರಣಬಸ್ಸಪ್ಪ ದರ್ಶನಾಪುರ (Sharanabasappa Darshanapur) ಸಹ ಆ ವಾಕ್ಯಗಳನ್ನೇ ಪುನರುಚ್ಛರಿಸುತ್ತಿದ್ದಾರೆ. ರಾಹುಲ್ ಗಾಂಧಿಯವರು ಕೋಪ ಪ್ರದರ್ಶಿಸಿದ್ದು ಯಾಕೆ, ಭ್ರಷ್ಟಾಚಾರದ ಆರೋಪಗಳ ಬಗ್ಗೆ ಮಂತ್ರಿಗಳನ್ನು ಅವರಾಗಲೀ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆವರಾಗಲೀ ಪ್ರಶ್ನಿಸಿದರೇ ಅಂತ ಕೇಳಿದರೆ ಗುಂಡೂರಾವ್ ಆ ಬಗ್ಗೆ ಚರ್ಚೆ ನಡೆದಿಲ್ಲ ಎಂದಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ