ವಿರೋಧ ಪಕ್ಷದ ನಾಯಕನಾರು ಅಂತ ಕೇಳಿದರೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೀಡುವ ಉತ್ತರ ಗಾಬರಿ ಹುಟ್ಟಿಸುತ್ತದೆ!
ವಿರೋಧ ಪಕ್ಷ ನಾಯಕನ ಹುದ್ದೆಯನ್ನು ಶ್ಯಾಡೋ ಚೀಫ್ ಮಿನಿಸ್ಟರ್ ಅಂತಲೂ ಹೇಳುತ್ತಾರೆ. ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಅದು ಗೊತ್ತಿಲ್ಲದಿಲ್ಲ
ಬೆಂಗಳೂರು: ವಿರೋಧ ಪಕ್ಷದ ನಾಯಕ (Leader of Opposition) ಯಾರು ಅಂತ ಕಳೆದ ಎರಡೂವರೆ ತಿಂಗಳಿಂದ ಕೇಳಿಸಿಕೊಂಡು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ (Basavaraj Bommai) ರೋಸಿಹೋಗಿರಬಹುದು. ಮೊದಲೆಲ್ಲ ಏನೋ ಒಂದು ಹಾರಿಕೆ ಉತ್ತರ ನೀಡುತ್ತಿದ್ದರು. ಈಗ ಅದು ಸವಕಲು ನಾಣ್ಯ ಅಂತ ಅವರಿಗೂ ಗೊತ್ತು. ಹಾಗಾಗೇ ಬೇರೆ ಉತ್ತರ ರೆಡಿ ಮಾಡಿದ್ದಾರೆ. ಬಿಜೆಪಿಯ ಎಲ್ಲ 66 ಶಾಸಕರು ವಿರೋಧ ಪಕ್ಷದ ನಾಯಕರಂತೆ! ಇದ್ಯಾವ ಸೀಮೆ ಮಾತು ಸ್ವಾಮಿ? ಆಫ್ ಕೋರ್ಸ್, ನೀವೆಲ್ಲ ವಿರೋಧ ಪಕ್ಷದ ಸದಸ್ಯರು, ಆದರೆ ನಿಮಗೆ ಲೀಡರ್ ಅಂತ ಒಬ್ಬರು ಬೇಕು ಸಾರ್. ಸುಂಸುಮ್ನೇ ಏನೋ ಹೇಳಿ ಕನ್ನಡಿಗರನ್ನು ಯಾಮಾರಿಸಬೇಡಿ. ವಿರೋಧ ಪಕ್ಷದ ನಾಯಕನ ಹುದ್ದೆಗೆ ದೊಡ್ಡ ಗೌರವ, ಘನತೆ ಇದೆ. ಆ ಹುದ್ದೆಯನ್ನು ಶ್ಯಾಡೋ ಚೀಫ್ ಮಿನಿಸ್ಟರ್ (shadow chief minister) ಅಂತಲೂ ಹೇಳುತ್ತಾರೆ. ಮುಖ್ಯಮಂತ್ರಿಯಾಗಿದ್ದ ನಿಮಗೆ ಅದು ಗೊತ್ತಿಲ್ಲದಿಲ್ಲ. ಒಬ್ಬ ನಾಯಕನನ್ನು ಆರಿಸಿಕೊಳ್ಳುವ ಪ್ರಯತ್ನ ಮಾಡದೆ ಹೀಗೆ ಅಸಂಬದ್ಧವಾಗಿ ಮಾತಾಡಿದರೆ ನಿಮಗದು ಶೋಭಿಸದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ