ಮೆರವಣಿಗೆಯಲ್ಲಿದ್ದ ಎಲ್ಲ ಬೆಂಬಲಿಗರು ರಾಜ್ಯ ಬಿಜೆಪಿಯನ್ನು ಅಪ್ಪ-ಮಕ್ಕಳಿಂದ ಮುಕ್ತಮಾಡಲು ಪಣತೊಟ್ಟಿದ್ದಾರೆ: ಈಶ್ವರಪ್ಪ

|

Updated on: Apr 12, 2024 | 4:15 PM

ಅಪ್ಪ ಮಕ್ಕಳಿಂದ ರಾಜ್ಯ ಬಿಜೆಪಿಯನ್ನು ಮುಕ್ತಮಾಡಬೇಕೆಂದು ಸಂಕಲ್ಪ ತೊಟ್ಟವರೆಲ್ಲ ತನ್ನೊಂದಿದ್ದಾರೆ, ತನ್ನ ಬೆಂಬಲಿಗರು ಇಲ್ಲಿಗೆ ಬರದಂತೆ ತಡೆಯಲು ಹಲವಾರು ಪ್ರಯತ್ನಗಳನ್ನು ಮಾಡಿದ್ದಾರೆ, ಆದರೂ ಅವರೆಲ್ಲ ಬಹಳ ಕಷ್ಟಪಟ್ಟು ಬಂದಿದ್ದಾರೆ ಮತ್ತು ಇವರೆಲ್ಲ ವಾಪಸ್ಸು ಹೋಗಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ತನಗೆ ಯಾಕೆ ವೋಟು ನೀಡಬೇಕೆಂದು ಜನರಿಗೆ ವಿವರಿಸಲಿದ್ದಾರೆ ಎಂದು ಈಶ್ವರಪ್ಪ ಹೇಳಿದರು

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೆತ್ರಕ್ಕೆ (Shivamogga Lok Sabha seat) ಸಂಬಂಧಿಸಿದಂತೆ ಹೇಳುವುದಾದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆಎಸ್ ಈಶ್ವರಪ್ಪನವರಿಗೆ (KS Eshwarappa) ಮೊದಲ ಹಂತದ ಜಯ ದಕ್ಕಿದೆ. ಖುದ್ದು ಅವರೇ ಹೇಳುವಂತೆ ನಾಮಪತ್ರ ಸಲ್ಲಿಸುವಾಗ ನಡೆದ ಮೆರವಣಿಗೆಯಲ್ಲಿ (rally) ಸುಮಾರು 35,000 ಬೆಂಬಲಿಗರು ಪಾಲ್ಗೊಂಡಿದ್ದರು. ಯಾರೇ ತಡೆಯಲು ಬಂದರೂ ನಾಮಪತ್ರ ಸಲ್ಲಿಸುವುದು ನಿಶ್ಚಿತ ಅಂತ ಪದೇಪದೆ ಹೇಳಿದ್ದೆ, ತನ್ನ ಮಾತು ಮತ್ತು ಹಟದಂತೆ ಇಂದು ನಾಮಪತ್ರ ಸಲ್ಲಿಸಿದ್ದೇನೆ ಎಂದು ಈಶ್ವರಪ್ಪ ಟಿವಿ9 ವರದಿಗಾರನಿಗೆ ಹೇಳಿದರು. ಅಪ್ಪ ಮಕ್ಕಳಿಂದ ರಾಜ್ಯ ಬಿಜೆಪಿಯನ್ನು ಮುಕ್ತಮಾಡಬೇಕೆಂದು ಸಂಕಲ್ಪ ತೊಟ್ಟವರೆಲ್ಲ ತನ್ನೊಂದಿದ್ದಾರೆ, ತನ್ನ ಬೆಂಬಲಿಗರು ಇಲ್ಲಿಗೆ ಬರದಂತೆ ತಡೆಯಲು ಹಲವಾರು ಪ್ರಯತ್ನಗಳನ್ನು ಮಾಡಿದ್ದಾರೆ, ಆದರೂ ಅವರೆಲ್ಲ ಬಹಳ ಕಷ್ಟಪಟ್ಟು ಬಂದಿದ್ದಾರೆ ಮತ್ತು ಇವರೆಲ್ಲ ವಾಪಸ್ಸು ಹೋಗಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ತನಗೆ ಯಾಕೆ ವೋಟು ನೀಡಬೇಕೆಂದು ಜನರಿಗೆ ವಿವರಿಸಲಿದ್ದಾರೆ ಎಂದು ಈಶ್ವರಪ್ಪ ಹೇಳಿದರು, ರಾಜ್ಯ ಬಿಜೆಪಿಯನ್ನು ಅಪ್ಪ ಮಕ್ಕಳ ಮುಷ್ಟಿಯಿಂದ ಬಿಡಿಸಲು, ಹಿಂದೂತ್ವವನ್ನು ಪ್ರಖರವಾಗಿ ಪ್ರತಿಪಾದಿಸಲು ಮತ್ತು ರಾಜ್ಯ ಬಿಜೆಪಿಯನ್ನು ಶುದ್ಧೀಕರಿಸಲು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವೆ ಎಂದು ಈಶ್ವರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸೋಮಶೇಖರ್ ಜಾಮೂನು ತಿಂದಿದ್ದು ನಿಜ ಆದರೆ ವಿಷ ಕುಡಿಯುವ ಪ್ರಶ್ನೆ ಎಲ್ಲಿಂದ ಬಂತು? ಕೆಎಸ್ ಈಶ್ವರಪ್ಪ