ಮಾರಿಕಾಂಬೆಯ ಅಶೀರ್ವಾದ ಪಡೆದ ಈಶ್ವರಪ್ಪನವರಿಗೆ ಬೆಂಬಲಿಗನ ಆಶ್ವಾಸನೆಯೂ ಸಿಕ್ಕಿತು!
ಅಭಿಮಾನಿ ಆಡುವ ಮಾತು ಸ್ಪಷ್ಟವಾಗಿ ಕೇಳಲ್ಲ ಆದರೆ ಈಶ್ವರಪ್ಪನವರ ಪ್ರತಿಕ್ರಿಯೆಯಿಂದ ಏನು ಹೇಳಿರಬಹುದೆಂದು ಅರ್ಥ ಮಾಡಿಕೊಳ್ಳಬಹುದು. ಕೊನೆಯಲ್ಲಿ ಆತ ನಾವು ನಿಮ್ಮ ಕೈ ಬಿಡಲ್ಲ ಸರ್ ಅಂತ ಹೇಳುವುದು ಮಾತ್ರ ಕೇಳಿಸುತ್ತದೆ. ಈಶ್ವರಪ್ಪ ಬಹಳ ಸಂತಸದಿಂದ ಥ್ಯಾಂಕ್ಯೂ, ಥ್ಯಾಂಕ್ಯೂ! ಅನ್ನುತ್ತಾರೆ.
ಶಿವಮೊಗ್ಗ: ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕುಟುಂಬದೊಂದಿಗೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ (KS Eshwarappa ) ನಗರದ ಮಾರಿಕಾಂಬ (Marikamba temple) ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರು. ಪರಮ ದೈವಭಕ್ತರಾಗಿರುವ ಈಶ್ವರಪ್ಪ ಕುಟುಂಬದೊಂದಿಗೆ ಪೂಜೆ ಸಲ್ಲಿಸುತ್ತಿರುವ ದೃಶ್ಯಗಳಲ್ಲಿ ನೋಡಬಹುದು. ನಂತರ ಅವರು ಮನೆಗೆ ಹೋಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ (independent candidate) ನಾಮಪತ್ರ ಫೈಲ್ ಮಾಡಲು ಜಿಲ್ಲಾಧಿಕಾರಿಗಳ ಕಚೇರಿಗೆ ಭಾರೀ ಮೆರವಣಿಗೆಯಲ್ಲಿ ಹೋದರು. ಇಲ್ಲಿ ವಿಷಯ ಅದಲ್ಲ, ಅವರು ದೇವಸ್ಥಾನದಿಂದ ಹೊರಬಂದು ಕಾರು ಹತ್ತಿ ಕುಳಿತ ಬಳಿಕ ಅಭಿಮಾನಿಯೊಬ್ಬ ಅವರ ಬಳಿಗೆ ಧಾವಿಸಿ ಬಂದು ಶುಭ ಹಾರೈಸುತ್ತಾನೆ. ಅಭಿಮಾನಿ ಆಡುವ ಮಾತು ಸ್ಪಷ್ಟವಾಗಿ ಕೇಳಲ್ಲ ಆದರೆ ಈಶ್ವರಪ್ಪನವರ ಪ್ರತಿಕ್ರಿಯೆಯಿಂದ ಏನು ಹೇಳಿರಬಹುದೆಂದು ಅರ್ಥ ಮಾಡಿಕೊಳ್ಳಬಹುದು. ಕೊನೆಯಲ್ಲಿ ಆತ ನಾವು ನಿಮ್ಮ ಕೈ ಬಿಡಲ್ಲ ಸರ್ ಅಂತ ಹೇಳುವುದು ಮಾತ್ರ ಕೇಳಿಸುತ್ತದೆ. ಈಶ್ವರಪ್ಪ ಬಹಳ ಸಂತಸದಿಂದ ಥ್ಯಾಂಕ್ಯೂ, ಥ್ಯಾಂಕ್ಯೂ! ಅನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಶಿವಮೊಗ್ಗ: ಪ್ರಧಾನಿ ಜೊತೆ ವೇದಿಕೆ ಹಂಚಿಕೊಳ್ಳುವ ಗಣ್ಯರ ಪಟ್ಟಿಯಿಂದ ಕೆಎಸ್ ಈಶ್ವರಪ್ಪ ಹೆಸರು ಕೈ ಬಿಟ್ಟ ಬಿಜೆಪಿ