ಮೈಸೂರು ಸಾಧನಾ ಸಮಾವೇಶ: ಪ್ರಚಾರದ ಗೀಳಿಗೆ ಮತ್ತೊಂದು ಸಜ್ಜಿಕೆ ತಯಾರು, ಕನ್ನಡಿಗನ ದುಡ್ಡು ಪೋಲು
ಅಧಿಕಾರ ಹಂಚಿಕೆ ವಿಷಯದಲ್ಲೂ ಸಾಧನಾ ಸಮಾವೇಶ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ತಮ್ಮ ಪ್ರಯೋಜನಕ್ಕೆ ಬಳಸಿಕೊಳ್ಳುತ್ತಿದ್ದಾರೆ ಅನ್ನೋದು ಸ್ಪಷ್ಟವಾಗಿ ಕಾಣುತ್ತಿದೆ. ಇಲ್ಲಿ ವ್ಯವಸ್ಥೆಗೊಳಿಸಿರುವ ಪ್ರತಿ ಕುರ್ಚಿಯ ಮೇಲೂ ಸಿಎಂ ಫೋಟೋಗಳು! ಇದೆಂಥ ಪ್ರಚಾರದ ಗೀಳು ಸ್ವಾಮಿ? ಪ್ರಚಾರದ ಗೀಳೋ ಅಥವಾ ಅಭದ್ರತೆಯ ಸೂಚನೆಯೋ? ಈ ಸಮಾವೇಶಕ್ಕೆ ತಗುಲಲಿರುವ ಖರ್ಚನ್ನು ಕನ್ನಡಿಗ ತನ್ನ ಜೇಬಿಂದ ಭರಿಸುತ್ತಿದ್ದಾನೆ.
ಮೈಸೂರು, ಜುಲೈ 19: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಶಕ್ತಿ ಪ್ರದರ್ಶನಕ್ಕೆ ನಗರದಲ್ಲಿ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ ಮತ್ತು ಇನ್ನೇನು ಕೆಲ ನಿಮಿಷಗಳಲ್ಲಿ ಕಾರ್ಯಕ್ರಮವೂ ಆರಂಭವಾಗಲಿದೆ. ಇದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ (Congress government) ಅಧಿಕಾರದಲ್ಲಿ ಎರಡು ವರ್ಷ ಪೂರೈಸಿದ ಸಾಧನಾ ಸಮಾವೇಶ. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಸಿದ್ದರಾಮಯ್ಯ ತಮ್ಮ ಶಕ್ತಿ ಮತ್ತು ಜನಪ್ರಿಯತೆ ಪ್ರದರ್ಶಿಸಲು ಬಳಸುತ್ತಿರುವುದು ಅಚ್ಚರಿ ಹುಟ್ಟಿಸುತ್ತದೆ. ಕೇವಲ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಿ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿರುವ ಸಿದ್ದರಾಮಯ್ಯ ಈ ಕಾರ್ಯಕ್ರಮ ಆಯೋಜಿಸಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಟೀಕೆಗೆ ಗುರಿಯಾಗುವುದು ನಿಶ್ಚಿತ. ಆದರೆ ವ್ಹೂ ಕೇರ್ಸ್?
ಇದನ್ನೂ ಓದಿ: Congress MLA Grants: ಕಾಂಗ್ರೆಸ್ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಕೊಡುಗೆ! ಅಭಿವೃದ್ಧಿಗೆ ಅನುದಾನ ಘೋಷಣೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ