ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಆ್ಯಪಲ್ ಐಫೋನ್ 12 ಸೆಟ್ಗಳನ್ನು ಭಾರಿ ಡಿಸ್ಕೌಂಟ್ ನಲ್ಲಿ ಮಾರಾಟ ಮಾಡುತ್ತಿವೆ!
ಆ್ಯಪಲ್ 2020 ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ವಿನ್ಯಾಸ ಬಗ್ಗೆ ಯಾರಿಗೂ ವಿವರಣೆ ಬೇಕಿಲ್ಲ, ಅದು ಅಷ್ಟು ಸೊಗಸಾಗಿದೆ ಮತ್ತು 5ಜಿಯನ್ನು ಸಪೋರ್ಟ್ ಮಾಡುತ್ತದೆ. 2020 ರಲ್ಲಿ, ಮಾರ್ಕೆಟ್ಗೆ ಬಿಡುಗಡೆಯಾದಾಗಿನಿಂದ ಅದಕ್ಕಿಂತ ಉತ್ತಮವಾದ ಐಫೋನ್ ಮತ್ತೊಂದಿಲ್ಲ ಅಂತ ಹಲವಾರು ಜನರ ಅಂಬೋಣ.
ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಪೈಪೋಟಿಗೆ ಬಿದ್ದಂತೆ ಆ್ಯಪಲ್ ಐಫೋನ್ಗಳನ್ನು ರಿಯಾಯಿತಿ ದರದಲ್ಲಿ ಮಾರುತ್ತಿವೆ. ನಿಮಗೆ ಗೊತ್ತಿರುವ ಹಾಗೆ ಅಮೆಜಾನನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಜಾರಿಯಲ್ಲಿದ್ದರೆ ಫ್ಲಿಪ್ಕಾರ್ಟ್ನಲ್ಲಿ ಬಿಗ್ ಬಿಲಿಯನ್ ಡೇ ಸೇಲ್ ನಡೆಯುತ್ತಿದೆ. ಈ ಎರಡು ಇ-ಕಾಮರ್ಸ್ ದೈತ್ಯರು ಭಾರಿ ಡಿಸ್ಕೌಂಟ್ ನಲ್ಲಿ ಬಹಳಷ್ಟು ವಸ್ತುಗಳನ್ನು ಮಾರುತ್ತಿದ್ದು ಅದರರಲ್ಲಿ ಐಫೋನ್ ಗಳೂ ಸೇರಿವೆ. ಸ್ಪಾರ್ಟ್ ಫೋನ್ ಅಪ್ ಗ್ರೇಡ್ ಮಾಡಲಿಚ್ಛಿಸುವರಿಗೆ ಇದೊಂದು ಸುವರ್ಣಾವಕಾಶ. ರೂ. 65,990 ಬೆಲೆಯ ಐಫೋನ್ 12 ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ರೂ. 49,999 ಗಳಿಗೆ ಮಾರಾಟವಾಗುತ್ತಿದೆ. ಎಕ್ಸ್ಚೇಂಜ್ ಆಫರ್ನಲ್ಲಿ ರೂ. 15,800 ವರೆಗೆ ಹೆಚ್ಚುವರಿ ಆಫರ್ ಫ್ಲಿಫ್ ಕಾರ್ಟ್ ನೀಡುತ್ತಿದೆ. ಅಮೆಜಾನ್ ನಲ್ಲಿ ಐಪೋನ್ 12 ಸ್ಟಾಕ್ಸ್ ಮುಗಿದು ಹೋಗಿದೆಯಂತೆ.
ಆ್ಯಪಲ್ 2020 ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ವಿನ್ಯಾಸ ಬಗ್ಗೆ ಯಾರಿಗೂ ವಿವರಣೆ ಬೇಕಿಲ್ಲ, ಅದು ಅಷ್ಟು ಸೊಗಸಾಗಿದೆ ಮತ್ತು 5ಜಿಯನ್ನು ಸಪೋರ್ಟ್ ಮಾಡುತ್ತದೆ. 2020 ರಲ್ಲಿ, ಮಾರ್ಕೆಟ್ಗೆ ಬಿಡುಗಡೆಯಾದಾಗಿನಿಂದ ಅದಕ್ಕಿಂತ ಉತ್ತಮವಾದ ಐಫೋನ್ ಮತ್ತೊಂದಿಲ್ಲ ಅಂತ ಹಲವಾರು ಜನರ ಅಂಬೋಣ.
ಈ ಫೋನ್ 6.1-ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್‌ಪ್ಲೇ ಜೊತೆಗೆ ಸೆರಾಮಿಕ್ ಶೀಲ್ಡ್ ಲೇಪನವನ್ನು ಹೊಂದಿದ್ದು, ಆಪಲ್ ಯಾವುದೇ ಇತರ ಸ್ಮಾರ್ಟ್‌ಫೋನ್‌ಗಳಿಗಿಂತ ಗಟ್ಟಿಯಾದ ಗಾಜಿನೊಂದಿಗೆ ಬರುತ್ತದೆ ಎಂದು ಹೇಳಲಾಗುತ್ತದೆ. ಇದರ ಜೊತೆಯಲ್ಲಿ, ಇದು 64 ಜಿಬಿ ಸಂಗ್ರಹಣೆಯನ್ನು ಹೊಂದಿದೆ. ಐಫೋನ್ 12 ನಲ್ಲಿ 64 ಜಿಬಿ ಸ್ಟೋರೇಜ್ ಸಾಮರ್ಥ್ಯ ಲಭ್ಯವಿದೆ.
ಐಫೋನ್ 12 ಆಪಲ್‌ನ ಎ 14 ಬಯೋನಿಕ್ ಚಿಪ್‌ನಿಂದ ಚಾಲಿತವಾಗಿದೆ ಮತ್ತು ಹಿಂಭಾಗದಲ್ಲಿ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಮತ್ತು 12 ಮೆಗಾಪಿಕ್ಸೆಲ್ ಅಗಲ ಕೆಮೆರಾದೊಂದಿಗೆ ಸುಧಾರಿತ ಡ್ಯುಯಲ್ ಕೆಮೆರಾ ವ್ಯವಸ್ಥೆಯನ್ನು ಹೊಂದಿದೆ. ಇದು ನೈಟ್ ಮೋಡ್, ಡೀಪ್ ಫ್ಯೂಷನ್, ಸ್ಮಾರ್ಟ್ ಎಚ್ ಡಿ ಆರ್ 3, 4ಕೆ ಡಾಲ್ಬಿ ವಿಷನ್ ಎಚ್ ಡಿ ಆರ್ ರೆಕಾರ್ಡಿಂಗ್ ಸಾಮರ್ಥ್ಯವನ್ನು ಹೊಂದಿದೆ.
ಮುಂಭಾಗದ ಕ್ಯಾಮರಾ 12 ಮೆಗಾಪಿಕ್ಸೆಲ್ ಟ್ರೂಡೆಪ್ತ್ ಜೊತೆಗೆ ನೈಟ್ ಮೋಡ್ ಮತ್ತು 4ಕೆ ಡಾಲ್ಬಿ ವಿಷನ್ ಎಚ್ ಡಿ ಆರ್ ಬೆಂಬಲವನ್ನು ಹೊಂದಿದೆ. ಇದು ಐಪಿ68 ವಾಟರ್ ಪ್ರೂಫ್ ಆಗಿದೆ. ಐಫೋನ್ 12 ಕ್ಷಿಪ್ರ ವೈರ್‌ಲೆಸ್ ಚಾರ್ಜಿಂಗ್‌ಗಾಗಿ ಮ್ಯಾಗ್‌ಸಾಫ್ ಆಕ್ಸೆಸರೀಸ್ ಅನ್ನು ಬೆಂಬಲಿಸುತ್ತದೆ. ತೂಕ್ಕದಲ್ಲಿ ಫೋನು ಹಗುರವಾಗಿದ್ದ್ದು ಕೇವಲ 320 ಗ್ರಾಂ ತೂಗುತ್ತದೆ
ಇದನ್ನೂ ಓದಿ: ಆರ್ಯನ್ ಮತ್ತೊಂದು ಮುಖ ಬಯಲು; ವೈರಲ್ ಆಯ್ತು ಹಳೇ ವಿಡಿಯೋ