ಧಾರವಾಡದ ನುಗ್ಗೇಕೇರಿ ಆಂಜನೇಯನ ದೇವಸ್ಥಾನಕ್ಕೆ ಭೇಟಿ ನೀಡಿದರೆ ಸಂಕಷ್ಟಗಳು ಪರಿಹಾರ ಅಂತಾರೆ ಭಕ್ತರು
ಪ್ರತಿ ಶನಿವಾರ ನುಗ್ಗೇಕೇರಿ ದೇವಸ್ಥಾನ ಭಕ್ತರಿಂದ ತುಂಬಿರುತ್ತದೆ. ಸಾವಿರಾರು ಜನ ಆಂಜನೇಯನ ಸನ್ನಿಧಿಗೆ ಬಂದು ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ. ಸಂಕಷ್ಟಗಳು ಪರಿಹಾರಗೊಳ್ಳುತ್ತವೆ ಎಂಬ ನಂಬಿಕೆ ದಟ್ಟವಾಗಿರುವುದರಿಂದಲೇ ಅನೇಕ ಭಕ್ತರು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ.
ಧಾರವಾಡ ತಾಲ್ಲೂಕಿನ ನುಗ್ಗೇಕೇರಿ ಆಂಜನೇಯ ದೇವಸ್ಥಾನದ ಪ್ರಸಿದ್ಧಿ ಎಂಥದ್ದು ಅಂತ ಅರ್ಥ ಮಾಡಿಕೊಳ್ಳಲು ದೇಗುಲು ಮುಂದೆ ಪಾರ್ಕ್ ಮಾಡಿರುವ ವಾಹನಗಳನ್ನು ನೋಡಿದರೆ ಸಾಕು. ಧಾರವಾಡ ಸುತ್ತಮುತ್ತಲಿನವರಲ್ದದೆ ದೂರದ ಪ್ರದೇಶಗಳಿಂದಲೂ ಜನ ಬಂದು ನುಗ್ಗೇಕೇರಿ ಹನುಮನ ದರ್ಶನ ಪಡೆಯುತ್ತಾರೆ. ಧಾರವಾಡ ಮತ್ತು ಕಲಘಟಗಿ ರಸ್ತೆ ನಡುವೆ ನಿಮಗೆ ನುಗ್ಗೇಕೇರಿ ಗ್ರಾಮ ಸಿಗುತ್ತದೆ. ಸುಂದರ ಮತ್ತು ಪ್ರಶಾಂತ ಪ್ರದೇಶದಲ್ಲಿರುವ ಕೆರೆಯೊಂದರ ದಡದ ಮೇಲೆ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಗುಡಿಯ ಸುತ್ತಲಿನ ದಟ್ಟ ಹಸಿರು ಹುಲ್ಲುಗಾವಲು ಮತ್ತು ಬಗೆಬಗೆಯ ಸಸ್ಯರಾಶಿ ನೋಡುಗರಿಗೆ ಬಹಳ ಆಹ್ಲಾದಕರವೆನಿಸಿ ಮನಸ್ಸಿಗೆ ಮುದ ನೀಡುತ್ತದೆ.
ನುಗ್ಗೇಕೇರಿ ಹನುಮನ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಸರ್ಪಪರಿಹಾರ ದೋಷಕ್ಕಾಗಿ ಜಯಮೇಜಯ ಗುಡಿಯನ್ನು ಕಟ್ಟಿಸಿದ ಎಂದು ಹೇಳುತ್ತಾರೆ. ಹಿಂದಿನ ಅರಸುಗಳ ಕಾಲದಲ್ಲೇ ದೇಗುಲದ ಜೀರ್ಣೋದ್ಧಾರ ಕಾರ್ಯವೂ ನಡೆದಿದೆಯಂತೆ.
ಪ್ರತಿ ಶನಿವಾರ ನುಗ್ಗೇಕೇರಿ ದೇವಸ್ಥಾನ ಭಕ್ತರಿಂದ ತುಂಬಿರುತ್ತದೆ. ಸಾವಿರಾರು ಜನ ಆಂಜನೇಯನ ಸನ್ನಿಧಿಗೆ ಬಂದು ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ. ಸಂಕಷ್ಟಗಳು ಪರಿಹಾರಗೊಳ್ಳುತ್ತವೆ ಎಂಬ ನಂಬಿಕೆ ದಟ್ಟವಾಗಿರುವುದರಿಂದಲೇ ಅನೇಕ ಭಕ್ತರು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ.
ಈ ದೇವಸ್ಥಾನಕ್ಕೆ ಬಲಭೀಮ ಪ್ರಸನ್ನ ಅಂತಲೂ ಹೆಸರಿದ್ದು, ಹನುಮನ ಕಣ್ಣುಗಳಲ್ಲಿ ಸಾಲಗ್ರಾಮವಿದೆ, ಅದರಿಂದಲೇ ರಾಮನ ಪರಮ ಭಕ್ತ ತನ್ನ ಭಕ್ತರ ಕಷ್ಟಗಳನ್ನು ಪರಿಹರಿಸುತ್ತಾನೆ ಅಂತ ಇಲ್ಲಿಗೆ ಬರುವ ಜನ ಹೇಳುತ್ತಾರೆ.
ಇದನ್ನೂ ಹೇಳಿ: Viral Video: ಸಾರ್ವಜನಿಕ ಶೌಚಾಲಯದಿಂದ ಹೊರಬರುತ್ತಿರುವ ದೈತ್ಯ ಸಿಂಹವನ್ನು ನೋಡಿ ಬೆಚ್ಚಿಬಿದ್ದ ನೆಟ್ಟಿಗರು; ವಿಡಿಯೋ ವೈರಲ್