ಪ್ರಾಮಾಣಿಕವಾಗಿ ದುಡಿದು ಸಂಬಳ ಕೇಳಿದ ಸಿಬ್ಬಂದಿಗೆ ಹೆದರಿಸಿದ ಅಧಿಕಾರಿಗಳ ಉದ್ಧಟತನಕ್ಕೆ ಶಿಕ್ಷೆಯಾಗುವುದೇ?

ಪ್ರಾಮಾಣಿಕವಾಗಿ ದುಡಿದು ಸಂಬಳ ಕೇಳಿದ ಸಿಬ್ಬಂದಿಗೆ ಹೆದರಿಸಿದ ಅಧಿಕಾರಿಗಳ ಉದ್ಧಟತನಕ್ಕೆ ಶಿಕ್ಷೆಯಾಗುವುದೇ?

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 04, 2021 | 10:03 PM

ಅವರ ಕೋಪಕ್ಕೆ ಮತ್ತೊಂದು ಕಾರಣವೇನೆಂದರೆ, ಈ ಜನ ಸಂಬಳ ಕೊಡಿ, ಜೀವನ ನಿರ್ವಹಣೆ ಕಷ್ಟವಾಗುತ್ತಿದೆ ಅಂತ ಕೇಳಿದಾಗ ಸಂಬಂಧಪಟ್ಟ ಅಧಿಕಾರಿಗಳು ಬೆದರಿಕೆ ಒಡ್ಡಿದ್ದಾರಂತೆ.

ಇಲ್ಲಿ ಪ್ರತಿಭಟನೆ ಮಾಡುತ್ತಿರುವರು ಕೋವಿಡ್ ವಾರಿಯರ್ಸ್ ಅನಿಸಿಕೊಳ್ಳದಿರಬಹುದು. ಆದರೆ ಕೊವಿಡ್-19 ಪಿಡುಗು ಬೆಂಗಳೂರು ನಗರದ ನಿವಾಸಿಗಳನ್ನು ತತ್ತರಿಸುವಂತೆ ಮಾಡಿದ್ದಾಗ, ಆರೋಗ್ಯ ಇಲಾಖೆಯ ಸಹಾಯ ವಾಣಿ 104 ಗೆ ಎಸ್ ಓ ಎಸ್ ಕರೆಮಾಡಿ ನೆರವು ಯಾಚಿಸಿ ಜನರ ನೋವಿಗೆ, ಸ್ಪಂದಿಸಿ ಅಗತ್ಯ ನೆರವು ಒದಗಿಸಿದವರೇ ಆ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಈ ಜನ. ಸೋಮವಾರದಂದು ಅವರು ಪ್ರತಿಭಟನೆಗಿಳಿದಿದ್ದರು. ಕೇಂದ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿ ವರ್ಗದ ಸುಮಾರು 150 ನೌಕರರಿಗೆ ಕಳೆದ ಎರಡು ತಿಂಗಳಿಂದ ಸಂಬಳ ನೀಡಿಲ್ಲವಂತೆ. ಹಾಗಾಗಿ, ತಮ್ಮ ಅಸಮಾಧಾನ, ಹತಾಷೆ ಮತ್ತು ಕೋಪವನ್ನು ಹೀಗೆ ಪ್ರತಿಭಟನೆ ಮೂಲಕ ಪ್ರದರ್ಶಿಸಿದರು.

ಅವರ ಕೋಪಕ್ಕೆ ಮತ್ತೊಂದು ಕಾರಣವೇನೆಂದರೆ, ಈ ಜನ ಸಂಬಳ ಕೊಡಿ, ಜೀವನ ನಿರ್ವಹಣೆ ಕಷ್ಟವಾಗುತ್ತಿದೆ ಅಂತ ಕೇಳಿದಾಗ ಸಂಬಂಧಪಟ್ಟ ಅಧಿಕಾರಿಗಳು ಬೆದರಿಕೆ ಒಡ್ಡಿದ್ದಾರಂತೆ. ತಮ್ಮ ಜೇಬಿನಿಂದ ಹಣ ಕೊಡುತ್ತಿರುವಂತೆ ಅವರು ವರ್ತಿಸಿದ್ದಾರೆ ಅಂತ ನೌಕರರು ಹೇಳಿದ್ದಾರೆ.

ಇದು ನಿಜಕ್ಕೂ ದುರಂತ ಮತ್ತು ಹೇವರಿಕೆ ಹುಟ್ಟಿಸುವ ಸಂಗತಿ. ಕೋವಿಡ್-19 ಪಿಡಗು ನಮ್ಮ ಬದುಕಿನ ವ್ಯವಸ್ಥೆಯನ್ನೇ ಬದಾಲಾಯಿಸಿದೆ. ಹಣದ ಸಮಸ್ಯೆ ಎಲ್ಲರಿಗೂ ಇದೆ. ಎಷ್ಟೋ ಜನ ಕೆಲಸ ಕಳೆದುಕೊಂಡು ದಿಕ್ಕೆಟ್ಟವರಂತಾಗಿದ್ದಾರೆ. ಒಂದ್ಹೊತ್ತಿನ ಊಟಕ್ಕೂ ಪರದಾಡಬೇಕಾದ ಸ್ಥಿತಿ ಕೆಲವರಿಗೆ ಎದುರಾಗಿದೆ. 104 ಸಹಾಯವಾಣಿ ಕೇಂದ್ರದ ಈ ಸಿಬ್ಬಂದಿಗೆ ಕೇವಲ ಹೇಳಿಕೊಳ್ಳಲು ಮಾತ್ರ ನೌಕರಿಯಿದೆ. ಸಂಬಳ ಮಾತ್ರ ಇಲ್ಲ.

ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಸಚಿವರು ಕೂಡಲೇ ಈ ಜನರ ಸಮಸ್ಯೆಗೆ ಸ್ಪಂದಿಸಬೇಕು. ಹಾಗೆಯೇ, ಪ್ರಾಮಾಣಿಕವಾಗಿ ದುಡಿದ ಕೆಲಸಗಾರರಿಗೆ ಸಂಬಳ ನೀಡದೆ ಹೆದರಿಸಿರುವ ಅಧಿಕಾರಿಗಳ ಹೆಡೆಮುರಿ ಕಟ್ಟಬೇಕು. ಅಧಿಕಾರಿಗಳ ಉದ್ಧಟತನವನ್ನು ಮಟ್ಟ ಹಾಕದಿದ್ದರೆ, ಇವತ್ತು ನೌಕರರನ್ನು ಹೆದರಿಸಿರುವವರು ನಾಳೆ ಅವರ ಮೇಲೆ ಕೈಮಾಡಲೂ ಹಿಂಜರಿಯಲಾರರು.

ಇದನ್ನೂ ಓದಿ:   ಡ್ರಗ್ಸ್​ ಕೇಸ್​: ಎನ್​ಸಿಬಿ ಕಚೇರಿಯಲ್ಲಿ ಗಪ್​ಚುಪ್​ ಆಗಿ ಕುಳಿತ ಶಾರುಖ್​ ಪುತ್ರ ಆರ್ಯನ್​ ಖಾನ್​; ಇಲ್ಲಿದೆ ವಿಡಿಯೋ