ಕರ್ನಾಟಕದಲ್ಲಿ 30 ಸಾವಿರ ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ; ಸದನದಲ್ಲಿ ಅಮಿತ್ ಶಾ ಪ್ರಸ್ತಾಪ

Updated on: Apr 02, 2025 | 9:09 PM

Waqf Amendment Bill: ಮೋದಿ ಸರ್ಕಾರ ವೋಟ್ ಬ್ಯಾಂಕ್​ಗಾಗಿ ಕೆಲಸ ಮಾಡುವುದಿಲ್ಲ. ನಮ್ಮ ಸರ್ಕಾರ ದೇಶದ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ. ವಿರೋಧ ಪಕ್ಷಗಳು ಅಲ್ಪಸಂಖ್ಯಾತರಿಗೆ ಪ್ರಚೋದನೆ ನೀಡುತ್ತಿವೆ. 1913-2013ರವರೆಗೆ ವಕ್ಫ್​ ಬೋರ್ಡ್​​ ಆಸ್ತಿ 18 ಲಕ್ಷ ಎಕರೆ ಇತ್ತು. 2013ರ ಬಳಿಕ 21 ಲಕ್ಷ ಎಕರೆ ವಕ್ಫ್​ ಬೋರ್ಡ್​ಗೆ ಸೇರ್ಪಡೆಯಾಗಿದೆ. ಈ ಮಸೂದೆಯಿಂದ ಸಾರ್ವಜನಿಕರ ಹೆಸರಿನಲ್ಲಿರುವ ನೈಜ ಸಂಪತ್ತು ಸುರಕ್ಷಿತವಾಗಿ ಇರಲಿದೆ ಎಂದು ಇಂದು ಸಂಜೆ ಲೋಕಸಭಾ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ನವದೆಹಲಿ, ಏಪ್ರಿಲ್ 2: ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ (Waqf Amendment Bill) ಮೇಲಿನ ಚರ್ಚೆಯ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕದಲ್ಲಿ ವಕ್ಫ್ ಭೂಕಬಳಿಕೆಯ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಕರ್ನಾಟಕದ ಬಗ್ಗೆ ಉಲ್ಲೇಖಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ಮಾಣಿಪ್ಪಾಡಿ ವರದಿಯ ಪ್ರಕಾರ ಕರ್ನಾಟಕದ 30,000 ಎಕರೆ ವಕ್ಫ್ ಆಸ್ತಿಯನ್ನು ವಿದೇಶದ ಸಂಸ್ಥೆಗಳಿಗೆ ಬಾಡಿಗೆ ನೀಡಲಾಗಿದೆ ಎಂದು ಹೇಳಿದೆ. ಇದರಿಂದ ಭಾರೀ ಆದಾಯ ನಷ್ಟವಾಗುತ್ತಿದೆ. ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ 1500 ಎಕರೆಯನ್ನ ವಕ್ಫ್ ಆಸ್ತಿ ಎಂದು ಘೋಷಿಸಿ ವಿವಾದ ಮಾಡಲಾಯ್ತು. ಕರ್ನಾಟಕದ ವಿಜಯಪುರದ ಹೊನ್ವಾಡ್ ಗ್ರಾಮದಲ್ಲಿ, ವಕ್ಫ್ ಮಂಡಳಿಯು ಹಕ್ಕು ಮಂಡಿಸಿದ ನಂತರ 1,500 ಎಕರೆ ಭೂಮಿ ವಿವಾದಕ್ಕೆ ಒಳಗಾಯಿತು. ಇದು ಕಾನೂನು ಮತ್ತು ಆಡಳಿತಾತ್ಮಕ ಸಂಘರ್ಷಗಳಿಗೆ ಕಾರಣವಾಯಿತು. ಈ ವಿವಾದಿತ ಭೂಮಿ 5000 ಕೋಟಿ ರೂ. ಬೆಲೆ ಬಾಳುತ್ತದೆ. ಆದರೆ, ಎಕರೆಗೆ 12,000 ರೂಪಾಯಿಯಂತೆ ಗುತ್ತಿಗೆಗೆ ನೀಡಲಾಗಿದೆ. ಈ ಹಣ ದೇಶದ ಬಡ ಮುಸ್ಲಿಮರದ್ದು. ಕರ್ನಾಟಕದ ದತ್ತ ಪೀಠದ ಮೇಲೂ ಹಕ್ಕು ಸ್ಥಾಪನೆ ಮಾಡಿದ್ದಾರೆ . ಬೇರೆ ಬೇರೆ ಸಮುದಾಯದ ಭೂಮಿಯನ್ನ ಅತಿಕ್ರಮಿಸಿಕೊಳ್ಳಲಾಗಿದೆ. ಕ್ರಿಶ್ಚಿಯನ್ನರು ಸಹ ವಕ್ಫ್ ಮಸೂದೆಗೆ ಸಹಮತ ನೀಡಿದ್ದಾರೆ. ಈ ಮಸೂದೆ ಮುಸ್ಲಿಮರ ಲಾಭಕ್ಕೆ ಇದೆ ಎಂದು ಮುಂದೆ ಮುಸ್ಲಿಮರಿಗೆ ಗೊತ್ತಾಗಲಿದೆ ಎಂದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Apr 02, 2025 09:08 PM