ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಎಲ್ಲ ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್

ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಎಲ್ಲ ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್

ಮದನ್​ ಕುಮಾರ್​
|

Updated on: Oct 18, 2024 | 6:25 PM

ಅಮೂಲ್ಯ ಸಹೋದರ ದೀಪಕ್ ಅರಸ್ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಳೆದ ಎರಡು ದಿನದಿಂದ ಅವರು ಕೋಮಾದಲ್ಲಿ ಇದ್ದರು. ಅವರಿಗೆ ನಿಜಕ್ಕೂ ಯಾವ ರೀತಿಯ ಸಮಸ್ಯೆ ಆಗಿತ್ತು ಎಂಬುದನ್ನು ಅಮೂಲ್ಯ ಪತಿ ಜಗದೀಶ್ ವಿವರಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ದೀಪಕ್ ಅರಸ್​ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ.

‘ಸಿನಿಮಾ ಬಗ್ಗೆ ಜಗದೀಶ್ ಅವರಿಗೆ ಕನಸು ಇತ್ತು. ಅದಕ್ಕಾಗಿ ಆರೋಗ್ಯವನ್ನೂ ಲೆಕ್ಕಸದೇ ಅವರು ಕೆಲಸ ಮಾಡಿದ್ದರು. ಆಗಲೇ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು. ಇತ್ತೀಚೆಗೆ ಎರಡೂ ಕಿಡ್ನಿ ವೈಫಲ್ಯ ಆಗಿತ್ತು. ಡಯಾಲಿಸಿಸ್​ ಮಾಡಿಸುತ್ತಿದ್ದರು. ಡಯಾಲಿಸಿಸ್​ ವೇಳೆ ಬ್ರೇನ್​ನಲ್ಲಿ ರಕ್ತಸ್ರಾವ ಆಯಿತು. ಎರಡು ದಿನಗಳಿಂದ ಕೋಮಾದಲ್ಲಿ ಇದ್ದರು. ಇಂದು (ಅ.18) ಬೆಳಗ್ಗೆ ಅವರು ನಮ್ಮನ್ನು ಅಗಲಿದ್ದಾರೆ. ಅವರಿಗೆ ಆರೋಗ್ಯದ ಅದೃಷ್ಟ ಕೈ ಹಿಡಿಯಲಿಲ್ಲ. ಅಮೂಲ್ಯ ಅವರು ಚಿತ್ರರಂಗದಲ್ಲಿ ಯಶಸ್ಸು ಕಾಣಲು ದೀಪಕ್​ ಮತ್ತು ತಾಯಿ ಶ್ರಮಪಟ್ಟಿದ್ದರು’ ಎಂದು ಅಮೂಲ್ಯ ಪತಿ ಜಗದೀಶ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.