ಹೆಣ್ಣಿಗಾಗಿ ಬದುಕು ಹಾಳುಮಾಡಿಕೊಂಡೆಯಲ್ಲ ಎಂದ ಹುಬ್ಬಳ್ಳಿಯಿಂದ ಬಂದ ದರ್ಶನ್​ನ  ವೃದ್ಧೆ ಅಭಿಮಾನಿ

ಅರುಣ್​ ಕುಮಾರ್​ ಬೆಳ್ಳಿ

Updated on: Jul 01, 2024 | 1:59 PM

ದರ್ಶನ್ ಒಂದು ಹೆಣ್ಣಿನಿಂದ ತನ್ನ ಬದುಕು ಹಾಳು ಮಾಡಿಕೊಂಡಿದ್ದಾರೆ ಎಂದು ಹುಬ್ಬಳ್ಳಿಯಿಂದ ಬಂದಿರುವ ಮಹಿಳೆ ಹೇಳುತ್ತಾರೆ. ಅಫ್ ಕೋರ್ಸ್ ಅವರು ಪವಿತ್ರಾ ಗೌಡರನ್ನು ಉಲ್ಲೇಖಿಸಿ ಹೇಳುತ್ತಾರೆ. ಆದರೆ ಕೇವಲ ಪವಿತ್ರಾ ಗೌಡರನ್ನು ದೂರುವುವದರಿಂದ ಪ್ರಯೋಜನವಿಲ್ಲ, ಯಾಕೆಂದರೆ ಹೆಚ್ಚು ಕಡಿಮೆ 50-ವರ್ಷ ವಯಸ್ಸಿನ ದರ್ಶನ್ ಗೆ ಯಾವುದು ಸರಿ, ಯಾವುದು ತಪ್ಪೆಂಬ ವಿವೇಚನೆ ಇರಬೇಕಿತ್ತು.

ಆನೇಕಲ್ (ಬೆಂಗಳೂರು): ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಎಲ್ಲ ವಯೋಮಾನದ ಅಭಿಮಾನಿಗಳು ಇದ್ದಾರೆ. ದೃಶ್ಯಗಳಲ್ಲಿ ನಮ್ಮ ವರದಿಗಾರ್ತಿಯೊಂದಿಗೆ ಮಾತಾಡುತ್ತಿರುವ ಹಿರಿಯ ಮಹಿಳೆ ದರ್ಶನ್ ರನ್ನು ಕಂಡು ಮಾತಾಡಲು ಹುಬ್ಬಳ್ಳಿಯಿಂದ ಬಂದಿದ್ದಾರೆ. ತಾನು ದರ್ಶನ್ ಅಭಿನಯದ ಎಲ್ಲ ಸಿನಿಮಾಗಳನ್ನು ನೋಡಿದ್ದೇನೆ ಎಂದು ಹೇಳುವ ಮಹಿಳೆ ಉತ್ಕಟಾಭಿಮಾನದಲ್ಲಿ ಮತ್ತೇನೇನೋ ಹೇಳುತ್ತಾರೆ. ಆದರೆ ನಟನ ಬಗ್ಗೆ ಅವರಿಗೆ ಅತೀವ ಪ್ರೀತಿ,ವಾತ್ಸಲ್ಯ ಮತ್ತು ಮಮತೆ ಇರೋದು ಮಾತುಗಳಲ್ಲಿ ವ್ಯಕ್ತವಾಗುತ್ತದೆ. ತನ್ನನ್ನು ಜೈಲು ಅಧಿಕಾರಿಗಳು ಒಳಗಡೆ ಹೋಗಲು ಬಿಡುತ್ತಿಲ್ಲ, ನಮ್ಮ ವರದಿಗಾರ್ತಿಯೇ ಅವಕಾಶ ಮಾಡಿಸಿಕೊಡಬೇಕೆಂದು ಅವರು ಹೇಳುತ್ತಾರೆ. ಸರಿ ಒಳಗೆ ಬಿಟ್ಟರೆ ದರ್ಶನ್ ಜೊತೆ ಏನು ಮಾತಾಡ್ತೀರಾ? ಅಂತ ಕೇಳಿದರೆ, ಎಲ್ಲಾನೂ ಮಾತಾಡ್ತೀನಿ, ನಿಂಗೆ ಎಲ್ಲ್ಲವೂ ಇತ್ತು, ನನ್ನಂಥ ಕೋಟ್ಯಾಂತರ ಅಭಿಮಾನಿಗಳಿದ್ದಾರೆ, ನಿನ್ನ ಕೈಯಾರೆ ಜೀವನ ಹಾಳುಮಾಡಿಕೊಂಡೆಯಲ್ಲ? ಯಾಕೆ ಹೀಗೆ ಮಾಡಿದೆ ಮಗಾ ಅಂತ ಕೇಳ್ತೀನಿ ಎಂದು ಒಬ್ಬ ತಾಯಲ್ಲಿರುವ ಕಕ್ಕಲತೆಯನ್ನು ಮಹಿಳೆ ತೋರುತ್ತಾರೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ನಟ ದರ್ಶನ್ ರನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದಾಗ ಗೆಲುವಿನ ನಗೆ ಬೀರಿದ್ದು ಅವರನ್ನು ಬಂಧಿಸಿದ್ದ ಎಸಿಪಿ ಚಂದನ್!

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.