ಉಡುಪಿಗೆ ಬಂದ ಪವನ್ ಕಲ್ಯಾಣ್ ಭೇಟಿಗೆ ಬಿಜೆಪಿ ಎಂಪಿಗೆ ಸಿಗಲಿಲ್ಲ ಅವಕಾಶ, ಕಾರಣವೇನು?

Updated on: Dec 07, 2025 | 5:08 PM

ಕೃಷ್ಣಮಠದಲ್ಲಿ ವಿಶೇಷ ಪೂಜೆ ಹಾಗೂ ಗೀತೋತ್ಸವ ಸಮಾರೋಪ ಸಮಾರಂಭದಲ್ಲಿ ಬಾಗಿಯಾಗಲು ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಜನಪ್ರಿಯ ನಟರಾಗಿರುವ ಪವನ್ ಕಲ್ಯಾಣ್​ ಅವರು ಇಂದು (ಡಿಸೆಂಬರ್ 07) ಉಡುಪಿಗೆ ಆಗಮಿಸಿದ್ದಾರೆ. ಆದ್ರೆ, ಈ ವೇಳೆ ಪವನ್ ಕಲ್ಯಾಣ್​ ಭೇಟಿಗೆ ಉಡುಪಿ ಚಿಕ್ಕಮಗಳೂರು ಬಿಜೆಪಿ ಸಂಸದ ಶ್ರೀನಿವಾಸ ಪೂಜಾರಿ ಭೇಟಿಗೆ ಆಂಧ್ರ ಪೊಲೀಸರು ಅವಕಾಶ ನೀಡಿಲ್ಲ.

ಉಡುಪಿ, (ಡಿಸೆಂಬರ್ 07): ಕೃಷ್ಣಮಠದಲ್ಲಿ ವಿಶೇಷ ಪೂಜೆ ಹಾಗೂ ಗೀತೋತ್ಸವ ಸಮಾರೋಪ ಸಮಾರಂಭದಲ್ಲಿ ಬಾಗಿಯಾಗಲು ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಜನಪ್ರಿಯ ನಟರಾಗಿರುವ ಪವನ್ ಕಲ್ಯಾಣ್​ ಅವರು ಇಂದು (ಡಿಸೆಂಬರ್ 07) ಉಡುಪಿಗೆ ಆಗಮಿಸಿದ್ದಾರೆ. ಆದ್ರೆ, ಈ ವೇಳೆ ಪವನ್ ಕಲ್ಯಾಣ್​ ಭೇಟಿಗೆ ಉಡುಪಿ ಚಿಕ್ಕಮಗಳೂರು ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿಗೆ ಆಂಧ್ರ ಪೊಲೀಸರು ಅವಕಾಶ ನೀಡಿಲ್ಲ. ಭದ್ರತೆ ನೆಪವೊಡ್ಡಿ ವಿಶ್ರಾಂತಿ ಸ್ಥಳದಲ್ಲಿ ಕೂರುವಂತೆ ಪೊಲೀಸರು ಸೂಚಿಸಿದ್ದಾರೆ. ಹೀಗಾಗಿ ಪವನ್ ಕಲ್ಯಾಣ್ ಭೇಟಿಗೆ ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಾದು ಕುಳಿತ ಪ್ರಸಂಗ ನಡೆಯಿತು.