ಆನೇಕಲ್: ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ, ಇಲ್ಲಿದೆ ವಿಡಿಯೋ

ಬೆಂಗಳೂರು ಹೊರವಲಯ ಚಿಕ್ಕ ತೋಗೂರಿನಲ್ಲಿ ಮನೆಯೊಂದರ ಹಿತ್ತಲಿನಲ್ಲಿ ಬಲೆಯಲ್ಲಿ ಸಿಲುಕಿದ್ದ ನಾಗರಹಾವನ್ನು ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾ ತಂಡದವರು ರಕ್ಷಿಸಿದ್ದಾರೆ.

Follow us
TV9 Web
| Updated By: Ganapathi Sharma

Updated on: Nov 30, 2023 | 3:27 PM

ಆನೇಕಲ್, ನವೆಂಬರ್ 30: ಬಲೆಯಲ್ಲಿ ಸಿಲುಕಿ ನರಳಾಡುತ್ತಿದ್ದ, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ನಾಗರಹಾವನ್ನು (Cobra) ರಕ್ಷಣೆ ಮಾಡಲಾಗಿದೆ. ಬೆಂಗಳೂರು (bengaluru) ಹೊರವಲಯ ಚಿಕ್ಕ ತೋಗೂರಿನಲ್ಲಿ ಮನೆಯ ಹಿತ್ತಲಿನಲ್ಲಿ ಕೋಳಿಗಳಿಗಾಗಿ ಹಾಕಿದ್ದ ಬಲೆಯಲ್ಲಿ ನಾಗರಹಾವು ಸಿಲುಕಿತ್ತು. ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾ ಸಮಿತಿ ತಂಡ ಹಾವನ್ನು ರಕ್ಷಣೆ ಮಾಡಿದೆ.

ನಾಗರಹಾವು ಹಿತ್ತಲಿನಲ್ಲಿದ್ದ ಕೋಳಿಗಳನ್ನು ಅರಸುತ್ತಾ ಬಂದಿತ್ತು. ಈ ವೇಳೆ ಬಲೆಯಲ್ಲಿ ಸಿಲುಕಿ ದಾರಗಳು ಸುತ್ತಿಕೊಂಡು ನರಳಾಡತೊಡಗಿದೆ. ನಂತರ ಬಲೆಯಿಂದ ಹೊರಬರಲಾಗದೆ ನರಳಾಡುತ್ತಿತ್ತು. ಇದನ್ನು ಕಂಡ ಸ್ಥಳೀಯ ನಿವಾಸಿ ಮಹದೇವ್ ಅವರು ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾ ತಂಡ ಬಲೆಯ ದಾರದಲ್ಲಿ ಸಿಲುಕಿದ್ದ ಹಾವಿನ ರಕ್ಷಣೆ ಮಾಡಿದೆ.

ಕತ್ತರಿಯ ಮೂಲಕ ಬಲೆಯ ದಾರಗಳನ್ನ ಕಟ್ ಮಾಡಿ ಸುರಕ್ಷಿತವಾಗಿ ಹಾವಿನ ರಕ್ಷಣೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್​ ಮಾಡಿ