ಐದಾರು ನಕ್ಸಲರಿಗೆ ಶೋಧ: ಶರಣಾಗತಿಗೆ ಆದ್ಯತೆ.. ಇಲ್ಲದಿದ್ರೆ ಮತ್ತಷ್ಟು ಎನ್‌ಕೌಂಟರ್ ಸಾಧ್ಯತೆ
ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂ ಗೌಡ ನಕ್ಸಲ್ ನಿಗ್ರಹ ಪಡೆಯ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ. ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಪಿತ್ತ ಬೈಲ್ ಪ್ರದೇಶದಲ್ಲಿ ನಡೆದ ಗುಂಡಿನಚಕಮಕಿಯಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಮೃತಪಟ್ಟಿದ್ದು, ಇನ್ನುಳಿದ ಐದಾರು ನಕ್ಸಲರಿಗಾಗಿ ಎನ್ಎಫ್ಐ ಶೋಧ ನಡೆಸಿದೆ.
ಉಡುಪಿ, (ನವೆಂಬರ್ 19): ನಕ್ಸಲ್ ನಾಯಕ ವಿಕ್ರಂ ಗೌಡ ನಕ್ಸಲ್ ನಿಗ್ರಹ ಪಡೆಯ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದಾನೆ. ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಪಿತ್ತ ಬೈಲ್ ಪ್ರದೇಶದಲ್ಲಿ ನಕ್ಸಲರು ಬೀಡುಬಿಟ್ಟಿದ್ದಾರೆ ಎನ್ನುವ ಮಾಹಿತಿ ಮೇರೆಗೆ ಹಲವು ದಿನಗಳಿಂದ ಎನ್ಎಫ್ಐ ನಡೆಸಿದ ಕಾರ್ಯಚರಣೆ ನಡೆಸಿತ್ತು. ಅದರಂತೆ ಇಂದು(ನವೆಂಬರ್ 19) ಎರಡೂ ಕಡೆಯಿಂದ ಗುಂಡಿನಚಕಮಕಿ ನಡೆದಿದ್ದು , ಇದರಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಹತನಾಗಿದ್ದಾನೆ. ಇನ್ನುಳಿದಂತೆ ಐದಾರು ನಕ್ಸರ್ ಇರುವ ಶಂಕೆ ವ್ಯಕ್ತವಾಗಿದ್ದು, ಅವರಿಗಾಗಿ ಕಬ್ಬಿನಾಲೆಯ ಪಿತ್ತಬೈಲ್ ನಲ್ಲಿ ಎನ್ಎಫ್ಐ ಶೋಧ ಕಾರ್ಯ ನಡೆಸಿದೆ. ಇನ್ನು ಈ ಬಗ್ಗೆ ಐಎಸ್ಡಿ ಐಜಿಪಿ ಡಿ.ರೂಪಾ ಪ್ರತಿಕ್ರಿಯಿಸಿದ್ದು, ಇನ್ನೂ 5-6 ಜನ ನಕ್ಸಲರು ಇದ್ದಾರೆ, ಅವರ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ. ನಕ್ಸಲರಿಗಾಗಿ ನಿರಂತರವಾಗಿ ಶೋಧ ನಡೆಸುತ್ತೇವೆ. ನಕ್ಸಲರ ಶರಣಾಗತಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 19, 2024 04:39 PM
Latest Videos