ಪೀತೆಬೈಲ್ ಅರಣ್ಯಪ್ರದೇಶದಲ್ಲಿ ವಾಸವಾಗಿರುವ ಜನ ನಕ್ಸಲ್ ಚಲನವಲನಗಳ ಬಗ್ಗೆ ಹೇಳೋದೇನು?
ನಿನ್ನೆ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಹತನಾದ ವಿಕ್ರಂಗೌಡ ಕುದುರೆಮುಖ ರಾಷ್ಟ್ರೀಯ ಉದ್ಯಾನವಕ್ಕಾಗಿ ವಿಮೋಚನಾರಂಗದ ಜೊತೆ ಗುರುತಿಸಿಕೊಂಡಿದ್ದ, ವಿಮೋಚನಾರಂಗದವರು ಕುದುರೆ ಮುಖ ಹೋರಾಟದಲ್ಲಿ ತಮಗೆ ಬೆಂಬಲ ನೀಡುವಂತೆ ಒತ್ತಾಯಿಸುತ್ತಿದ್ದರು ಎಂದು ರಾಜುಗೌಡ ಹೇಳುತ್ತಾರೆ.
ಉಡುಪಿ: ಕಬ್ಬಿನಾಲೆ ಪೀತೆಬೈಲ್ ಅರಣ್ಯಪ್ರದೇಶದಲ್ಲಿ ಜನಸಾಮಾನ್ಯರೂ ವಾಸವಾಗಿದ್ದು ಅವರ ಮನೆಗಳಿಗೆ ನಕ್ಸಲರು ಭೇಟಿ ನೀಡಿದ ಸಂದರ್ಭಗಳಿವೆ. ಆದರೆ ಅವರು ನಕ್ಸಲರು ಅಂತ ಗೊತ್ತಾದ ಬಳಿಕ ಅವರನ್ನು ದೂರ ಇಟ್ಟಿದ್ದಾಗಿ ಅರಣ್ಯಪ್ರದೇಶದಲ್ಲಿ ವಾಸವಾಗಿರುವ ರಾಜುಗೌಡ ಹೆಸರಿನ ವ್ಯಕ್ತಿ ಹೇಳುತ್ತಾರೆ. ತಮ್ಮ ಭಾಗದ ಯಾವ ಹುಡುಗರೂ ನಕ್ಸಲರ ಜೊತೆ ಸೇರಲಿಲ್ಲ, ತಮ್ಮ ಬದುಕು ಕಂಡುಕೊಳ್ಳಲು ಅವರು ಮುಂಬೈ ಸೇರಿದರು ಎಂದು ಅವರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮತ್ತೆ ಆಕ್ಟಿವ್ ಆದ ನಕ್ಸಲರು: ಉಡುಪಿ, ಚಿಕ್ಕಮಗಳೂರಿನಲ್ಲಿ 5 ದಿನ ಹೈ ಅಲರ್ಟ್
Latest Videos