ಕದರಮಂಡಲಗಿ ಆಂಜನೇಯ ದೇವಸ್ಥಾನಕ್ಕೆ ಹಲವಾರು ವಿಶೇಷತೆಗಳಿವೆ, ಇಲ್ಲಿ ಪಾದರಕ್ಷೆಗಳನ್ನೂ ಪೂಜಿಸಲಾಗುತ್ತದೆ!

ದೇವಸ್ಥಾನ ಇನ್ನೊಂದು ವೈಶಿಷ್ಟ್ಯತೆ ಎಂದರೆ, ಪಾದರಕ್ಷೆಗಳಿಗೆ ಪೂಜೆ ಮಾಡುವುದು. ದೇವಸ್ಥಾನದ ಮುಂದೆ ರಾತ್ರಿ ಪೂಜೆಗಳನ್ನು ಬಿಟ್ಟು ಹೋದರೆ, ಆಂಜನೇಯ ಅವುಗಳನ್ನು ತೊಟ್ಟು ಊರೆಲ್ಲ ಸುತ್ತುತ್ತಾನೆ ಎಂಬ ನಂಬಿಕೆ ಗ್ರಾಮದ ಜನರಲ್ಲಿದೆ.

ಹಾವೇರಿ ಜಿಲ್ಲೆಯ ಕದರಮಂಡಲಗಿ ಒಂದು ಚಿಕ್ಕ ಗ್ರಾಮ ಆದರೆ, ಗ್ರಾಮದ ಹೆಸರನ್ನು ಬೇರೆ ಬೇರೆ ಜಿಲ್ಲೆಗಳಿಗೂ ಗೊತ್ತಾಗುವಂತೆ ಮಾಡಿದ್ದು ಪಾಂಡವರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ. ಇದನ್ನು ಕಾಂತೇಶ ದೇವಸ್ಥಾನ ಅಂತಲೂ ಕರೆಯುತ್ತಾರೆ. ಈ ಆಂಜನೇಯ ಗುಡಿಯ ವಿಶೇಷತೆ ಎಂದರೆ, ಆಂಜನೇಯ ನೇರವಾಗಿ ನಿಂತಿರುವುದು, ಬೇರೆಲ್ಲ ದೇವಸ್ಥಾನಗಳಲ್ಲಿ ಹನುಮ ಎಡ ಮಗ್ಗುಲಿಗೋ ಇಲ್ಲವೇ ಬಡ ಮಗ್ಗುಲಿಗೋ ತಿರುಗಿಕೊಂಡು ನಿಂತಿರುತ್ತಾನೆ. ಈ ದೇವಸ್ಥಾನಕ್ಕೆ ಪೌರಾಣಿಕ ಹಿನ್ನೆಲೆ ಇರೋದು ಮತ್ತೊಂದು ವಿಶೇಷ. ಪಾಂಡವರ ಕೊನೆಯ ಅರಸನಾಗಿದ್ದ ಜಯಮೇಜಯ ಈ ದೇವಸ್ಥಾನವನ್ನು ಕಟ್ಟಿಸಿದನೆಂಬ ಪ್ರತೀತಿ ಇದೆ.

ದೇವಸ್ಥಾನದಲ್ಲಿ ಪ್ರತಿದಿನ ಬೆಳಗ್ಗೆ ಆರು ಗಂಟೆಗೆ ಪೂಜಾ ಕೈಂಕರ್ಯಗಳು ಆರಂಭವಾಗುತ್ತವೆ ಮತ್ತು ಸರಿಯಾಗಿ 11 ಗಂಟೆಗೆ ಮಹಾ ಮಂಗಳಾರತಿ ಜರುಗುತ್ತದೆ. ಹರಕೆ ಹೊತ್ತು ಬರುವ ಕೆಲ ಭಕ್ತಾದಿಗಳು ಕಾಂತೇಶನಿಗೆ ದೀರ್ಘ ದಂಡ ನಮಸ್ಕಾರ ಹಾಕಿ ತಮ್ಮ ನಿಷ್ಠೆ ತೋತುತ್ತಾರೆ. ಪ್ರತಿ ಅಮವಾಸ್ಯೆ, ಹುಣ್ಣಿಮೆ ಮತ್ತು ವಿಶೇಷ ದಿನಗಳಂದು ಅಭಿಷೇಕ ಕಾರ್ಯ ನಡೆಯುತ್ತದೆ.

ದೇವಸ್ಥಾನ ಇನ್ನೊಂದು ವೈಶಿಷ್ಟ್ಯತೆ ಎಂದರೆ, ಪಾದರಕ್ಷೆಗಳಿಗೆ ಪೂಜೆ ಮಾಡುವುದು. ದೇವಸ್ಥಾನದ ಮುಂದೆ ರಾತ್ರಿ ಪೂಜೆಗಳನ್ನು ಬಿಟ್ಟು ಹೋದರೆ, ಆಂಜನೇಯ ಅವುಗಳನ್ನು ತೊಟ್ಟು ಊರೆಲ್ಲ ಸುತ್ತುತ್ತಾನೆ ಎಂಬ ನಂಬಿಕೆ ಗ್ರಾಮದ ಜನರಲ್ಲಿದೆ. ಹಾಗಾಗೇ ಪಾದರಕ್ಷೆಗಳಿಗೆ ಪೂಜೆ ಮಾಡಿ ದೇವಸ್ಥಾನ ಮುಂದೆ ಇಡಲಾಗುತ್ತದೆ.

ಇದನ್ನೂ ಓದಿ: Puneeth Rajkumar: ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ; ಅಪ್ಪು ಜೊತೆ ಹಾಡಿದ ಕೊನೆಯ ವಿಡಿಯೋಗಳಲ್ಲಿ ಒಂದನ್ನು ಹಂಚಿಕೊಂಡ ರಾಘವೇಂದ್ರ ರಾಜಕುಮಾರ್

Click on your DTH Provider to Add TV9 Kannada