ಕನಕಪುರ: ಜನವಸತಿ ಪ್ರದೇಶಕ್ಕೆ ಬಂತು ತಾಯಿ ಆನೆಯಿಂದ ಬೇರ್ಪಟ್ಟ ಮತ್ತೊಂದು ಆನೆಮರಿ!

ಕನಕಪುರ: ಜನವಸತಿ ಪ್ರದೇಶಕ್ಕೆ ಬಂತು ತಾಯಿ ಆನೆಯಿಂದ ಬೇರ್ಪಟ್ಟ ಮತ್ತೊಂದು ಆನೆಮರಿ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 09, 2022 | 5:15 PM

ದನಕರುಗಳ ಜೊತೆ ಅದು ಬಂತು ಅಂತ ಜನ ಹೇಳುತ್ತಿದ್ದಾರೆ. ಸದ್ಯಕ್ಕೆ ಮರಿಯನ್ನು ಮುತ್ತತ್ತಿ ಬಳಿಯಿರುವ ಭೀಮೇಶ್ವರಿ ಶಿಬಿರಕ್ಕೆ ಕರೆದೊಯ್ದು ಆರೈಕೆ ಮಾಡಲಾಗುತ್ತಿದೆ.

ರಾಮನಗರ: ತಾಯಿ ಆನೆಗಳಿಗೆ (mother elephant) ತಮ್ಮ ಮರಿಗಳ ಮೇಲೆ ಮಮತೆ ಕಡಿಮೆಯಾಗತ್ತಿದೆಯಾ ಎಂಬ ಸಂಶಯ ಉಂಟಾಗುತ್ತಿದೆ ಮಾರಾಯ್ರೇ. ನಮ್ಮ ಅನುಮಾನಕ್ಕೆ ಕಾರಣವೂ ಇದೆ. ಮೊನ್ನೆಯಷ್ಟೇ ಚಾಮರಾಜನಗರ (Chamarajanagar) ಜಿಲ್ಲೆಯ ಗ್ರಾಮವೊಂದರಲ್ಲಿ ಅನೆಮರಿಯೊಂದು ತಾಯಿಯಿಂದ ಬೇರ್ಪಟ್ಟು ಜನವಸತಿ ಪ್ರದೇಶಕ್ಕೆ ಬಂದಿತ್ತು. ಶುಕ್ರವಾರ ರಾಮನಗರ ಜಿಲ್ಲೆ ಕನಕಪುರ (Kanakapura) ತಾಲ್ಲೂಕಿನ ಒಂದು ಗ್ರಾಮದಲ್ಲಿ ಮತ್ತೊಂದು ಮರಿ (ಅಥವಾ ಅದೇ ಇದ್ದೀತೆ?) ತಪ್ಪಿಸಿಕೊಂಡು ಊರೊಳಗೆ ಬಂದುಬಿಟ್ಟಿದೆ. ದನಕರುಗಳ ಜೊತೆ ಅದು ಬಂತು ಅಂತ ಜನ ಹೇಳುತ್ತಿದ್ದಾರೆ. ಸದ್ಯಕ್ಕೆ ಮರಿಯನ್ನು ಮುತ್ತತ್ತಿ ಬಳಿಯಿರುವ ಭೀಮೇಶ್ವರಿ ಶಿಬಿರಕ್ಕೆ ಕರೆದೊಯ್ದು ಆರೈಕೆ ಮಾಡಲಾಗುತ್ತಿದೆ.