ಕುಮಟಾ ಬಳಿ ಗುಡ್ಡಕುಸಿತದ ದೃಶ್ಯ ಮೊಬೈಲ್ ಫೋನ್ ಕೆಮೆರಾದಲ್ಲಿ ಸೆರೆ, ಅನಾಹುತಗಳಿಗೆ ಕೊನೆ ಯಾವಾಗ?

ಕುಮಟಾ ಬಳಿ ಗುಡ್ಡಕುಸಿತದ ದೃಶ್ಯ ಮೊಬೈಲ್ ಫೋನ್ ಕೆಮೆರಾದಲ್ಲಿ ಸೆರೆ, ಅನಾಹುತಗಳಿಗೆ ಕೊನೆ ಯಾವಾಗ?

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 18, 2024 | 7:59 PM

ಗುಡ್ಡ ಕುಸಿತ ದುರ್ಘಟನೆಗಳ ಬಗ್ಗೆ ಸರ್ಕಾರ ನಿರ್ಲಿಪ್ತ ಭಾವ ತಳೆದಿರುವುದು ಸೋಜಿಗ ಮೂಡಿಸುತ್ತದೆ. ಮೊನ್ನೆ ಇದೇ ಜಿಲ್ಲೆಯ ಶಿರೂರು ಬಳಿ ನಡೆದ ಗುಡ್ಡಕುಸಿತದ ದುರ್ಘಟನೆಯಲ್ಲಿ ಸುಮಾರು 20 ಜನ ಬಲಿಯಾಗಿರುವ ಶಂಕೆ ಇದೆ. ಮಳೆಯಿಂದಾಗಿ ಅಲ್ಲೂ ತೆರವು ಕಾರ್ಯಾಚರಣೆ ಸ್ಥಗಿತಗೊಂಡಿದೆ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿತದ ಪರ್ವ ಮುಂದುವರಿದಿದೆ ಮತ್ತು ಗುಡ್ಡಗಳ ಕೆಳಗಿನ ರಸ್ತೆ ಮತ್ತು ಹೆದ್ದಾರಿಗಳ ಮೇಲೆ ಸಂಚರಿಸುವ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಗುಡ್ಡಗಾಡು ಪ್ರದೇಶವನ್ನು ದಾಟುತ್ತಿದ್ದಾರೆ. ಯಾವ ನಿಮಿಷ ಗುಡ್ಡ ಕುಸಿಯುತ್ತದೆಯೋ? ಇಲ್ನೋಡಿ, ಜಿಲ್ಲೆಯ ಕುಮಟಾ ತಾಲ್ಲುಕಿನ ಬರ್ಗಿ ಎಂಬಲ್ಲಿ ಗುಡ್ಡದ ಒಂದು ಭಾಗ ಕುಸಿಯುತ್ತಿರುವ ದೃಶ್ಯ ಕೆಮೆರಾದಲ್ಲಿ ಸೆರೆಯಾಗಿದೆ. ಗುಡ್ಡದ ಕೆಳಗೆ ನಿಂತಿರುವ ಕೆಲ ಜನರ ಪೈಕಿ ಒಬ್ಬರು ತಮ್ಮ ಮೊಬೈಲ್ ಫೋನಲ್ಲಿ ಕುಸಿಯುತ್ತಿರುವ ಗುಡ್ಡದ ದೃಶ್ಯ ಸೆರೆ ಹಿಡಿದಿದ್ದಾರೆ. ಗುಡ್ಡ ಕುಸಿತದ ಹಲವಾರು ಪ್ರಕರಣಗಳು ಈ ಮಳೆಗಾಲದಲ್ಲ್ಲಿ ಜರುಗುತ್ತಿವೆ. ನಮ್ಮ ಉತ್ತರ ಕನ್ನಡ ಜಿಲ್ಲಾ ವರದಿಗಾರ ನೀಡಿರುವ ಮಾಹಿತಿಯ ಪ್ರಕಾರ ಕಾರವಾರ ಮತ್ತು ಕುಮಟಾ ನಡುವಿವ ರಸ್ತೆ ಬಂದ್ ಆಗಿ ವಾಹನಗಳ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗಿದೆ. ಒಂದೇ ಸಮ ಸುರಿಯುತ್ತಿರುವ ಮಳೆಯ ಕಾರಣ ತೆರವು ಕಾರ್ಯಾಚರಣೆ ಪ್ರಭಾವಕ್ಕೊಳಗಾಗಿದೆ. ಅವೈಜ್ಞಾನಿಕ ರಸ್ತೆ ಕಾಮಗಾರಿಗಳಿಂದಾಗಿ ಅಮಾಯಕರು ಬಲಿಯಾಗುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಮಂಗಳೂರು: ಭಾರೀ ಮಳೆಯಿಂದ ಮನೆ ಮೇಲೆ ಗುಡ್ಡ ಕುಸಿತ ಪ್ರಕರಣ: ಮೃತಪಟ್ಟವರ ಸಂಖ್ಯೆ 3 ಕ್ಕೇರಿಕೆ