Assembly session; ಬದುಕಿರುವವರೆಗೆ ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿರುತ್ತೇನೆ: ಸಿದ್ದರಾಮಯ್ಯ

Assembly session; ಬದುಕಿರುವವರೆಗೆ ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿರುತ್ತೇನೆ: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on:Jul 18, 2024 | 6:11 PM

ಮುಖ್ಯಮಂತ್ರಿ ಸಿದ್ದರಾಮಯ್ಯ ಶೋಷಿತರ, ದಮನಿತರ, ಪರಿಶಿಷ್ಟ ಜಾತಿ/ ಪಂಗಡ ಮತ್ತು ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಹೊಂದಿರುವ ಬಗ್ಗೆ ಅನುಮಾನವಿಲ್ಲ. ಚುನಾವಣೆಯ ಸಮಯ ಮತ್ತು ಸರ್ಕಾರ ರಚಿಸಿದ ಬಳಿಕ ಅವರು ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡಿದ್ದಾರೆ. ಗ್ಯಾರಂಟಿ ಯೋಜನೆಗಳ ಮೂಲಕ ಬಡ ಜನತೆಗೆ ತಮ್ಮ ಸರ್ಕಾರ ನೆರವಾಗುತ್ತಿದ್ದರೆ ವಿರೋಧ ಪಕ್ಷಗಳಿಂದ ಯಾಕೆ ಅಡ್ಡಿ ಎಂದು ಅವರು ಸದನದಲ್ಲಿ ಪ್ರಶ್ನಿಸಿದರು.

ಬೆಂಗಳೂರು: ಲಂಚ್ ಅವರ್ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಹೆಚ್ಚು ಕಡಿಮೆ ವನ್ ಮ್ಯಾನ್ ಶೋ ನಡೆಸಿದರು. ಬಿಜೆಪಿ ನಾಯಕರು ಕೇಳಿದ ಪ್ರಶ್ನೆಗಳಿಗೆ ಅವೇಶಕ್ಕೀಡಾಗದೆ ಶಾಂತರಾಗಿ ಉತ್ತರಿಸಿದರು. ಸಾಮಾಜಿಕ ನ್ಯಾಯದ ವಿಷಯ ಬಂದಾಗ ಮಾತ್ರ ಅವರು ಉತ್ತೇಜಿತ ಮತ್ತು ಭಾವುಕ ಸ್ವರದಲ್ಲಿ ಮಾತಾಡಿದರು. ಸದಾ ಸೋಶಿಯಲ್ ಜಸ್ಟಿಸ್ ಬಗ್ಗೆ ಮಾತಾಡುವ ಮುಖ್ಯಮಂತ್ರಿಯವರಿಗೆ ಈಗ್ಯಾಕೋ ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಕಡಿಮೆಯಾದಂತಿದೆ ಅಂತ ಅರವಿಂದ್ ಬೆಲ್ಲದ್ ಹೇಳಿದಾಗ ಕೋಪ ಬಂದರೂ ಅದನ್ನು ಹೊರಹಾಕದ ಸಿದ್ದರಾಮಯ್ಯ ಪರಿಶಿಷ್ಟ ಜಾತಿ/ಪಂಗಡ ಮತ್ತು ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಹಿಂದೆ ಇತ್ತು ಇವತ್ತೂ ಇದೆ, ನಾಳೆಯೂ ಇರಲಿದೆ, ತಾನು ಬದುಕಿರುವವರೆಗೆ ಇರುತ್ತದೆ, ತಮ್ಮ ಪಕ್ಷ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ ಅದು ನಮ್ಮ ಕಮಿಟ್ ಮೆಂಟ್ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಸಾಮಾಜಿಕ ನ್ಯಾಯದ ಬಗ್ಗೆ ತಾವು ಬಿಜೆಪಿ ಏನನ್ನೂ ಕಲಿಯಬೇಕಿಲ್ಲ ಎಂದು ಹೇಳುವ ಸಿಎಂ, ನಂತರ ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿದ ವಿವರಣೆಗಳನ್ನು ನೀಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Assembly Session; ಆಡಳಿತ ನಡೆಸುವುದನ್ನು ಬಿಜೆಪಿಯಿಂದ ಕಲಿಯುವ ಅವಶ್ಯಕತೆಯಿಲ್ಲ: ಸಿದ್ದರಾಮಯ್ಯ

 

Published on: Jul 18, 2024 06:09 PM