Appu Birthday: ಫ್ರೆಂಡ್ಸ್​ ಜೊತೆ ಪುನೀತ್​ ರಾಜ್​ಕುಮಾರ್​ ಖುಷಿಯಾಗಿ ಕಾಲ ಕಳೆದ ಆ ದಿನಗಳ ವಿಡಿಯೋ ವೈರಲ್​

Appu Birthday: ಫ್ರೆಂಡ್ಸ್​ ಜೊತೆ ಪುನೀತ್​ ರಾಜ್​ಕುಮಾರ್​ ಖುಷಿಯಾಗಿ ಕಾಲ ಕಳೆದ ಆ ದಿನಗಳ ವಿಡಿಯೋ ವೈರಲ್​

ಮದನ್​ ಕುಮಾರ್​
|

Updated on: Mar 17, 2023 | 5:22 PM

Puneeth Rajkumar Viral Video: ಗೆಳೆಯರ ಜೊತೆ ಸೇರಿ ಪುನೀತ್​ ರಾಜ್​ಕುಮಾರ್​ ಸೈಕ್ಲಿಂ​ಗ್​ ಮಾಡಿದ್ದರು. ಹಲವು ಬಗೆಯ ಸಾಹಸ ಮಾಡುತ್ತ ಎಲ್ಲ ಜೊತೆ ಬೆರೆತಿದ್ದರು. ಆ ಕ್ಷಣಗಳ ವಿಡಿಯೋ ಇಲ್ಲಿದೆ..

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರಿಗೆ ಇಷ್ಟ ಆಗುತ್ತಿದ್ದ ವಿಚಾರಗಳು ಹಲವು. ಸ್ನೇಹಿತರ ಜೊತೆ ಸೇರಿ ಅವರು ಅಡ್ವೆಂಚರ್​ ಟ್ರಿಪ್​ ಮಾಡುತ್ತಿದ್ದರು. ಶೂಟಿಂಗ್​ ಬಿಡುವಿನಲ್ಲಿ ಜಾಲಿಯಾಗಿ ಕಾಲ ಕಳೆಯುತ್ತಿದ್ದರು. ಅದೆಲ್ಲವೂ ಈಗ ನೆನಪು ಮಾತ್ರ. ಇಂದು (ಮಾರ್ಚ್​ 17) ಪುನೀತ್​ ರಾಜ್​ಕುಮಾರ್​ ಬರ್ತ್​ಡೇ (Appu Birthday). ಅವರ ನೆನಪುಗಳನ್ನು ಅಭಿಮಾನಿಗಳು ಮೆಲುಕು ಹಾಕುತ್ತಿದ್ದಾರೆ. ನಿಧನರಾಗುವುದಕ್ಕೂ ಮುನ್ನ ಅಪ್ಪು ಮಾಡಿದ್ದ ಸಾಹಸದ ವಿಡಿಯೋಗಳು ಈಗ ವೈರಲ್​ ಆಗುತ್ತಿವೆ. ಫ್ರೆಂಡ್ಸ್​ ಜೊತೆ ಸೇರಿ ಸೈಕ್ಲಿಂ​ಗ್​ ಮಾಡಿದ್ದರು ಪುನೀತ್​. ತೆಂಗಿನ ಮರ ಏರಲು ಪ್ರಯತ್ನಿಸಿದ್ದರು. ಆ ಕ್ಷಣಗಳ ವಿಡಿಯೋ (Puneeth Rajkumar Viral Video) ಇಲ್ಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.