ಜ್ಞಾನೇಂದ್ರ ಮತ್ತು ಸಿಟಿ ರವಿ ಮತೀಯ ಗಲಭೆಗೆ ಪ್ರಚೋದನೆಯಾಗುವ ಹೇಳಿಕೆ ನೀಡುತ್ತಿರುವುದರಿಂದ ಕೂಡಲೇ ಬಂಧಿಸಬೇಕು: ಡಿಕೆ ಶಿವಕುಮಾರ್
ಹಾಗೆಯೇ, ಜ್ಞಾನೇಂದ್ರ ಅವರು ಸಂಪುಟದಲ್ಲಿರುವುದು ಸರ್ಕಾರಕ್ಕೆ ಶೋಭೆಯಲ್ಲ ಅವರನ್ನು ಕೂಡಲೇ ವಜಾ ಮಾಡಬೇಕೆಂದು ಶಿವಕುಮಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿದರು.
ಕರ್ನಾಟಕ ಗೃಹ ಸಚಿವ ಅರಗ ಜ್ಞಾನೇಂದ್ರ (Araga Jnanendra) ಮತ್ತು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ (CT Ravi)-ಇಬ್ಬರೂ ಕೋಮು ಗಲಭೆಗೆ ಪ್ರಚೋದನೆಯಾಗುವ (provocative) ಹೇಳಿಕೆಗಳನ್ನು ನೀಡುತ್ತಿರುವುದರಿಂದ ಅವರನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ಡಿಕೆ ಶಿವಕುಮಾರ ಅವರು ಗುರುವಾರದಂದು ಬೆಂಗಳೂರಲ್ಲಿ ಪೊಲೀಸ ಇಲಾಖೆಯನ್ನು ಒತ್ತಾಯಿಸಿದರು. ಹಾಗೆಯೇ, ಜ್ಞಾನೇಂದ್ರ ಅವರು ಸಂಪುಟದಲ್ಲಿರುವುದು ಸರ್ಕಾರಕ್ಕೆ ಶೋಭೆಯಲ್ಲ ಅವರನ್ನು ಕೂಡಲೇ ವಜಾ ಮಾಡಬೇಕೆಂದು ಶಿವಕುಮಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿದರು.
ಸೋಮವಾರ ತಡರಾತ್ರಿ ಬೆಂಗಳೂರಿನ ಜೆಜೆ ನಗರದ ಗೋರಿಪಾಳ್ಯದಲ್ಲಿ 22 ವರ್ಷ ವಯಸ್ಸಿನ ಚಂದ್ರು ಹೆಸರಿನ ಯುವಕನೊಬ್ಬನ ಕೊಲೆಯಾಗಿತ್ತು. ಕೊಲೆ ಮಾಡಿರುವ ಆರೋಪದಲ್ಲಿ ಈಗಾಗಲೇ ಶಾಹಿದ್ ಮತ್ತು ಅವನೊಂದಿಗೆ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಚಂದ್ರು ಮತ್ತು ಶಾಹಿದ್ ಬೈಕ್ ಗಳ ನಡುವೆ ಢಿಕ್ಕಿಯಾದ ಮೇಲೆ ಶುರುವಾದ ಜಗಳ ಚಂದ್ರುನ ಕೊಲೆಯೊಂದಿಗೆ ಮುಕ್ತಾಯಗೊಂಡಿತ್ತು. ಪೊಲೀಸರ ಹೇಳಿಕೆ ಅದೇ ಆಗಿತ್ತು. ಆದರೆ, ಚಂದ್ರುಗೆ ಉರ್ದು ಮಾತಾಡಲು ಬಾರದ ಕಾರಣಕ್ಕೆ ಕೊಲೆ ಮಾಡಲಾಯಿತು ಎಂದು ಜ್ಞಾನೇಂದ್ರ ಹಾಗೂ ರವಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ಅವರಿಬ್ಬರ ಹೇಳಿಕೆಗಳು ಮತೀಯ ಗಲಭೆ ಸೃಷ್ಟಿ ಮಾಡುವಂಥವು ಎಂದು ಹೇಳಿದ ಶಿವಕುಮಾರ ಅವರು, ಗೃಹ ಮಂತ್ರಿಗಳು ತಮ್ಮ ಹೇಳಿಕೆಗಾಗಿ ಕ್ಷಮಾಪಣೆ ಕೇಳಿದ ಮೇಲೂ ಚಂದ್ರು ತಾಯಿಯನ್ನು ಭೇಟಿಯಾಗಿದ್ದ ರವಿ ಅವರು ತಮಗೆ ಅನುಕೂಲವಾಗುವಂಥ ಮಾತನ್ನು ಆಕೆಯಿಂದ ಹೇಳಿಸಲು ಪ್ರಯತ್ನಿಸಿದರು ಎಂದು ಶಿವಕುಮಾರ ಹೇಳಿದರು.
ಇದನ್ನೂ ಓದಿ: ಅಧಿಕಾರಿಗಳು ಗೃಹ ಸಚಿವರಿಗೆ ಹೀಗೆ ಮಾಹಿತಿಯನ್ನೇ ನೀಡಿಲ್ಲ; ಚಂದ್ರು ಕೊಲೆ ಪ್ರಕರಣದಲ್ಲಿ ಆರಗ ಜ್ಞಾನೇಂದ್ರ ಯುಟರ್ನ್!