Daily Devotional: ಮರಣ ಹೊಂದಿದವರ ಹೆಸರಲ್ಲಿ ಅರ್ಚನೆ ಮಾಡಿಸಬಹುದಾ?

Updated on: Apr 12, 2026 | 6:56 AM

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮರಣ ಹೊಂದಿದವರ ಹೆಸರಲ್ಲಿ ಅರ್ಚನೆ ಮಾಡಿಸಬಹುದಾ ಎಂದು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಅನೇಕರಿಗೆ ಮರಣ ಹೊಂದಿದವರ ಹೆಸರಿನಲ್ಲಿ ದೇವಾಲಯಗಳಲ್ಲಿ ಅರ್ಚನೆ ಮಾಡಿಸಬಹುದೇ ಎಂಬ ಪ್ರಶ್ನೆ ಕಾಡುತ್ತದೆ. ಸಾಮಾನ್ಯವಾಗಿ, ಬದುಕಿರುವವರ ಹೆಸರು, ಗೋತ್ರ, ನಕ್ಷತ್ರ ಹೇಳಿ ಅರ್ಚನೆ ಮಾಡಿಸುವ ಪದ್ಧತಿ ಇದೆ, ಅವರಿಗೆ ಆಯುರಾರೋಗ್ಯ ಪ್ರಾಪ್ತಿಗಾಗಿ ಪ್ರಾರ್ಥಿಸಲಾಗುತ್ತದೆ.

ಆದರೆ, ಮರಣ ಹೊಂದಿದವರ ಹೆಸರಿನಲ್ಲಿ ಅರ್ಚನೆ ಮಾಡಿಸುವುದು ಅಷ್ಟು ಶುಭವಲ್ಲ ಎಂದು ಹಲವು ಧಾರ್ಮಿಕ ಕೇಂದ್ರಗಳು ಹೇಳುತ್ತವೆ. ಕೆಲವು ದೇವಾಲಯಗಳಲ್ಲಿ ಇದನ್ನು ಒಪ್ಪಿಕೊಂಡರೂ, ಎಲ್ಲೆಡೆ ಇದು ವಾಡಿಕೆಯಲ್ಲ. ಅವರ ಆತ್ಮ ಶಾಂತಿಗಾಗಿ ಬೇರೆ ಮಾರ್ಗಗಳಿವೆ. ಹೂವಿನ ಅಲಂಕಾರ, ಹಣ್ಣುಗಳ ಅಲಂಕಾರ, ಅಭಿಷೇಕಗಳು ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಅನ್ನದಾನ ಮಾಡುವುದು ಹೆಚ್ಚು ಸೂಕ್ತ ಎಂದು ಗುರೂಜಿ ಹೇಳಿದ್ದಾರೆ.

Follow Us