‘ನನ್ನ ಪತ್ನಿಗೆ ಅಪ್ಪು ತುಂಬ ಕ್ಲೋಸ್’; ಪುನೀತ್ ನಿವಾಸಕ್ಕೆ ಭೇಟಿ ನೀಡಿದ ಅರ್ಜುನ್ ಸರ್ಜಾ ಭಾವುಕ ಮಾತು
ನಟ ಅರ್ಜುನ್ ಸರ್ಜಾ ಮತ್ತು ಅವರ ಪತ್ನಿ ನಿವೇದಿತಾ (ಆಶಾ ರಾಣಿ) ಅವರು ಪುನೀತ್ ರಾಜ್ಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅಪ್ಪು ಕುರಿತು ಅರ್ಜುನ್ ಸರ್ಜಾ ಮಾತನಾಡಿದ್ದಾರೆ.
ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡ ನೋವು ಎಂದಿಗೂ ಕೊನೆ ಆಗುವಂಥದ್ದಲ್ಲ. ಅಪ್ಪು ನೆನಪು ಪ್ರತಿದಿನ ಕಾಡುತ್ತಲೇ ಇರುತ್ತದೆ. ಇಂದಿಗೂ ಅವರ ನಿವಾಸಕ್ಕೆ ಅನೇಕ ಸೆಲೆಬ್ರಿಟಿಗಳು ಭೇಟಿ ನೀಡುತ್ತಿದ್ದಾರೆ. ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಅನೇಕರು ಸಾಂತ್ವನ ಹೇಳುತ್ತಿದ್ದಾರೆ. ಇಂದು (ಫೆ.16) ಖ್ಯಾತ ನಟ ಅರ್ಜುನ್ ಸರ್ಜಾ (Arjun Sarja) ಹಾಗೂ ಅವರ ಪತ್ನಿ ನಿವೇದಿತಾ (Niveditha Arjun) ಅವರು ಪುನೀತ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅಪ್ಪು ಜೊತೆಗಿನ ಒಡನಾಟವನ್ನು ಅರ್ಜುನ್ ಸರ್ಜಾ ನೆನಪಿಸಿಕೊಂಡಿದ್ದಾರೆ. ‘ಪುನೀತ್ ನಿಧನರಾಗಿ ಮೂರು ತಿಂಗಳು ಆಯ್ತು. ಈ ಹಿಂದೆ ನಾನು ಬಂದು ಹೋಗಿದ್ದೆ. ಆದರೆ ನನ್ನ ಹೆಂಡತಿ ಬಂದಿರಲಿಲ್ಲ. ಅಪ್ಪು ಅವರಿಗೆ ನನ್ನ ಹೆಂಡತಿ ತುಂಬ ಕ್ಲೋಸ್. ಚಿಕ್ಕ ವಯಸ್ಸಿನಿಂದಲೂ ಜೊತೆಯಲ್ಲಿ ಬೆಳೆದವರು. ಹಾಗಾಗಿ ಪತ್ನಿ ಜೊತೆ ಬಂದು ಪುನೀತ್ ಕುಟುಂಬದವರ ಯೋಗಕ್ಷೇಮ ವಿಚಾರಿಸಿದ್ದೇನೆ. ಅಪ್ಪು ಬಗ್ಗೆ ಎಷ್ಟು ಹೇಳಿದರೂ ಅದು ಕಮ್ಮಿ. ಇಷ್ಟು ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿರುವ ಹುಡುಗನನ್ನು ಎಷ್ಟು ನೆನಪಿಸಿಕೊಂಡರೂ ಅದು ಕಮ್ಮಿ ಎನಿಸುತ್ತದೆ. ಅಪ್ಪು ನಿಧನದ ಬಳಿಕ ಬದುಕು ಡಿಪ್ರೆಸ್ ಆಯಿತು. ನಮಗೆ ಹೀಗಾಗಿರುವಾಗ ಅವರ ಕುಟುಂಬಕ್ಕೆ ಎಷ್ಟು ನೋವಾಗಿರುತ್ತದೆ ಎಂಬುದನ್ನು ನಾವು ಊಹಿಸಬಹುದು. ಕಷ್ಟದಲ್ಲಿ ನಾವಿದ್ದೇವೆ ಅಂತ ಹೇಳಬಹುದು. ಇನ್ನೇನೂ ಹೇಳಲು ಸಾಧ್ಯವಿಲ್ಲ’ ಎಂದು ಅರ್ಜುನ್ ಸರ್ಜಾ ಹೇಳಿದ್ದಾರೆ.
ಇದನ್ನೂ ಓದಿ:
‘ದ್ವಿತ್ವ’ ಸಿನಿಮಾದಲ್ಲಿ ಪುನೀತ್ ಬದಲು ಬೇರೆಯವರು ನಟಿಸ್ತಾರಾ? ತಂಡದಿಂದ ಸಿಕ್ತು ಉತ್ತರ
ಪುನೀತ್ ಅಭಿನಯದ ‘ಜೇಮ್ಸ್’ ಟೀಸರ್ ನೋಡಿ ವಿಶೇಷ ಸಾಲುಗಳನ್ನು ಬರೆದುಕೊಂಡ ನಟ ಪ್ರಭಾಸ್