ಕೋರ್ಟ್ ಆದೇಶ ಪಾಲಿಸುವುದು ಹೇಗೆ ಅಂತ ಬೇರೆಯವರಿಗೆ ತೋರಿಸಿಕೊಟ್ಟು ಮಾದರಿಯಾದರು ಮಂಡ್ಯದ ವಿದ್ಯಾರ್ಥಿನಿಯರು!
ವಿದ್ಯಾರ್ಥಿನಿಯರಿಗೆ ಬುರ್ಖಾ ಹೀಗೆ ಬಯಲು ಪ್ರದೇಶದಲ್ಲಿ ತೆಗೆಯಲು ಖಂಡಿತ ಮುಜುಗರ ಆಗುತ್ತದೆ. ಇದನ್ನು ತೋರಿಸುತ್ತಿರುವುದು ಸಭ್ಯತೆ ಅಲ್ಲ ಅಂತ ನಮಗೆ ಗೊತ್ತಿದೆ. ಶಾಲಾ ಕಾಲೇಜುಗಳು ವಿದ್ಯಾರ್ಥಿನಿಯರಿಗೆ ತಾವು ಧರಿಸಿದ ಬುರ್ಖಾ ಮತ್ತು ಹಿಜಾಬ್ ತೆಗೆದು ಬ್ಯಾಗ್ ನಲ್ಲಿ ಇಟ್ಟುಕೊಳ್ಳಲು ಒಂದು ಕೋಣೆಯ ವ್ಯವಸ್ಥೆ ಮಾಡಲೇಬೇಕು.
ಮಂಡ್ಯದ ವಿದ್ಯಾರ್ಥಿನಿಯರು ವಯಸ್ಸಿಗೂ ಮೀರಿದ ಪ್ರೌಢಿಮೆ ಮತ್ತು ವಿವೇಕ ಪ್ರದರ್ಶಿಸುತ್ತಿದ್ದಾರೆ. ಇದೇ ಮಂಡ್ಯದ ಯುವತಿ ಮುಸ್ಕಾನ್ ಖಾನ್ (Muskaan Khan) ಬಗ್ಗೆ ನಾವು ಕಳೆದ ವಾರವೇ ಚರ್ಚೆ ಮಾಡಿದ್ದೇವೆ. ನಾವಿಲ್ಲಿ ಮಂಡ್ಯದ (Mandya) ಮತ್ತೊಂದು ಕಾಲೇಜಿನ ವಿದ್ಯಾರ್ಥಿನಿಯರ (girl students) ಬಗ್ಗೆ ಮಾತಾಡುತ್ತಿದ್ದೇವೆ. ಈ ವಿಡಿಯೋದ ಮುನ್ನೆಲೆಯಲ್ಲಿ ಇಬ್ಬರು ಮುಸ್ಲಿಂ ವಿದ್ಯಾರ್ಥಿನಿಯರು ನಮಗೆ ಕಾಣುತ್ತಾರೆ. ಹಿನ್ನೆಲೆಯಲ್ಲೂ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜು ಆವರಣದಲ್ಲಿ ತಮ್ಮ ಹಿಜಾಬ್ ಮತ್ತು ಬುರ್ಕಾ ತೆಗೆದು ಬ್ಯಾಗಿನಲ್ಲಿ ಇಟ್ಟುಕೊಳ್ಳುವುದು ಕಾಣುತ್ತದೆ. ಈ ವಿದ್ಯಾರ್ಥಿನಿಯರು ನಿಸ್ಸಂದೇಹವಾಗಿ ರಾಜ್ಯದ ಎಲ್ಲ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹೈಕೋರ್ಟ್ ಅದೇಶ ಹೇಗೆ ಪಾಲಿಸಬೇಕೆಂದು ತೋರಿಸಿಕೊಟ್ಟಿದ್ದಾರೆ. ಇದು ಗುಡ್ಡ ಕಟೆಯುವ ಕೆಲಸವೇನೂ ಅಲ್ಲ. ಶಾಲೆಯ ಅವರಣದವರೆಗೆ ಹಿಜಾಬ್ ಧರಿಸಿ ಬರಲು ಅವರಿಗೆ ಯಾವುದೇ ಅಭ್ಯಂತರವಿಲ್ಲ. ಆದರೆ ತರಗತಿಗಳಿಗೆ ಹೋಗುವಾಗ ಅದನ್ನು ತೆಗೆದಿಡಿ ಅಂತ ನ್ಯಾಯಾಲಯ ಹೇಳಿದೆ. ಮಂಡ್ಯದ ಈ ಕಾಲೇಜಿನ ವಿದ್ಯಾರ್ಥಿನಿಯರು ಅದನ್ನೇ ಮಾಡುತ್ತಿದ್ದಾರೆ.
ಅದರೆ, ಒಂದು ವಿಷಯವನ್ನು ನಾವಿಲ್ಲಿ ಹೇಳಲೇಬೇಕು. ವಿದ್ಯಾರ್ಥಿನಿಯರಿಗೆ ಬುರ್ಖಾ ಹೀಗೆ ಬಯಲು ಪ್ರದೇಶದಲ್ಲಿ ತೆಗೆಯಲು ಖಂಡಿತ ಮುಜುಗರ ಆಗುತ್ತದೆ. ಇದನ್ನು ತೋರಿಸುತ್ತಿರುವುದು ಸಭ್ಯತೆ ಅಲ್ಲ ಅಂತ ನಮಗೆ ಗೊತ್ತಿದೆ. ಶಾಲಾ ಕಾಲೇಜುಗಳು ವಿದ್ಯಾರ್ಥಿನಿಯರಿಗೆ ತಾವು ಧರಿಸಿದ ಬುರ್ಖಾ ಮತ್ತು ಹಿಜಾಬ್ ತೆಗೆದು ಬ್ಯಾಗ್ ನಲ್ಲಿ ಇಟ್ಟುಕೊಳ್ಳಲು ಒಂದು ಕೋಣೆಯ ವ್ಯವಸ್ಥೆ ಮಾಡಲೇಬೇಕು.
ಇದು ವಿದ್ಯಾರ್ಥಿನಿಯರಿಗೆ ಮಾತ್ರ ಮೀಸಲಾದ ಕಾಲೇಜು ಅಂತ ಅನಿಸುತ್ತದೆ. ಸಹ-ಶಿಕ್ಷಣ ಪದ್ಧತಿ ಇರುವ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಬುರ್ಖಾ ತೆಗೆಯಲು ತೀವ್ರ ಸ್ವರೂಪದ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಕಾಲೇಜಿನ ಆಡಳಿತ ಮಂಡಳಿ ಈ ಸಂಗತಿಯನ್ನು ಗಮನಿಸಿ ಪ್ರತ್ಯೇಕ ಕೋಣೆಯ ವ್ಯವಸ್ಥೆ ಮಾಡಿದರೆ ಮಕ್ಕಳಿಗೆ ಬಹಳ ಅನುಕೂಲವಾಗುತ್ತದೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು ಪ್ರವೇಶ ನಿರಾಕರಿಸಿದಾಗ ಪ್ರತಿಭಟನೆಗೆ ಕೂತರು!