ರೇವಣ್ಣರನ್ನು ಬಂಧಿಸಿದ್ದು ಒಂದು ರಾಜಕೀಯ ಪಿತೂರಿ ಅಂತ ರಾಜ್ಯದ ಜನತೆಗೆ ಗೊತ್ತಾಗಿದೆ: ಸಾರಾ ಮಹೇಶ್

|

Updated on: May 14, 2024 | 5:04 PM

ಎಲೆಕ್ಟ್ರಾನಿಕ್ ಮೀಡಿಯಾಗಳಲ್ಲಿ ದಿನಕ್ಕೊಂದು ಬಗೆಯ ಚರ್ಚೆಯನ್ನು ಜನ ನೋಡುತ್ತಿದ್ದಾರೆ. ಸರ್ಕಾರದ ಮುಂದಿನ ಯೋಜನೆ ಏನಾಗಬಹುದು ಅನ್ನೋದು ಸಹ ಚರ್ಚೆಯಾಗುತ್ತಿದೆ ಎಂದು ಮಹೇಶ್ ಹೇಳಿದರು. ಮಹಿಳೆಯೊಬ್ಬರ ಅಪಹರಣದ ಆರೋಪದಲ್ಲಿ ರೇವಣ್ಣ ಅವರನ್ನು ಸಿಲುಕಿಸಿದ್ದು ಒಂದು ರಾಜಕೀಯ ಪಿತೂರಿ ಅಂತ ನಿಷ್ಠಾವಂತ ಪೊಲಿಸರು ಸಹ ಅರ್ಥಮಾಡಿಕೊಂಡಿದ್ದಾರೆ ಎಂದು ಮಹೇಶ್ ಹೇಳಿದರು.

ಬೆಂಗಳೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣ (HD Revanna) ಜೈಲಿಂದ ಬಿಡುಗಡೆಯಾಗಿ ಅವರ ತಂದೆಯ ಮನೆಗೆ ಬಂದ ಸುದ್ದಿ ಕೇಳಿ ಅವರನ್ನು ನೋಡಲು ಮತ್ತು ಮಾತಾಡಿಸಲು ಹಲವಾರು ಜೆಡಿಎಸ್ ನಾಯಕರು ಹೆಚ್ ಡಿ ದೇವೇಗೌಡರ (HD Devegowda) ಮನೆಗೆ ಬರುತ್ತಿದ್ದಾರೆ. ಮಂಡ್ಯದಿಂದ ಅಗಮಿಸಿದ ಮಾಜಿ ಸಚಿವ ಸಾರಾ ಮಹೇಶ್ (Sa Ra Mahesh) ಮಾಜಿ ಪ್ರಧಾನಿಗಳ ಮನೆಯೊಳಗೆ ಹೋಗುವ ಮೊದಲು ಮಾಧ್ಯಮದವರೊಡನೆ ಮಾತಾಡಿದರು. ರೇವಣ್ಣ ಅವರನ್ನು ಬಂಧಿಸಿದ ದಿನದಿಂದ ತಾನು ಇದೊಂದು ರಾಜಕೀಯ ಪ್ರೇರಿತ ಸಂಚು ಎಂದು ಹೇಳುತ್ತಾ ಬಂದಿರುವೆ, ಅವರನ್ನು ಟಾರ್ಗೆಟ್ ಮಾಡಲಾಗಿತ್ತು ಅನ್ನೋದು ರಾಜ್ಯದ ಜನತೆಗೂ ಈಗ ಸ್ಪಷ್ಟವಾಗಿದೆ. ಎಲೆಕ್ಟ್ರಾನಿಕ್ ಮೀಡಿಯಾಗಳಲ್ಲಿ ದಿನಕ್ಕೊಂದು ಬಗೆಯ ಚರ್ಚೆಯನ್ನು ಜನ ನೋಡುತ್ತಿದ್ದಾರೆ. ಸರ್ಕಾರದ ಮುಂದಿನ ಯೋಜನೆ ಏನಾಗಬಹುದು ಅನ್ನೋದು ಸಹ ಚರ್ಚೆಯಾಗುತ್ತಿದೆ ಎಂದು ಮಹೇಶ್ ಹೇಳಿದರು. ಮಹಿಳೆಯೊಬ್ಬರ ಅಪಹರಣದ ಆರೋಪದಲ್ಲಿ ರೇವಣ್ಣ ಅವರನ್ನು ಸಿಲುಕಿಸಿದ್ದು ಒಂದು ರಾಜಕೀಯ ಪಿತೂರಿ ಅಂತ ನಿಷ್ಠಾವಂತ ಪೊಲಿಸರು ಸಹ ಅರ್ಥಮಾಡಿಕೊಂಡಿದ್ದಾರೆ ಎಂದು ಮಹೇಶ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಜೈಲಿಂದ ನೇರವಾಗಿ ದೇವೇಗೌಡರ ಮನೆಗೆ ಬಂದಿರುವ ಹೆಚ್ ಡಿ ರೇವಣ್ಣರನ್ನು ನೋಡಲು ಸಾವಿರಾರು ಜನರ ಜಮಾವಣೆ