Aryavardhan Guruji: ಮಿಡ್ ವೀಕ್ ಎಲಿಮಿನೇಷನ್; ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆರ್ಯವರ್ಧನ್ ಗುರೂಜಿ
Bigg Boss Kannada Finale: ಬಿಗ್ ಬಾಸ್ ಸ್ಪರ್ಧಿಗಳಿಗೆ ಸರ್ಪ್ರೈಸ್ ನೀಡಲಾಗಿದೆ. ಮಿಡ್ ವೀಕ್ ಎಲಿಮಿನೇಷನ್ ನಡೆಯುವಾಗ ಆರ್ಯವರ್ಧನ್ ಗುರೂಜಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 9’ (Bigg Boss Kannada Season 9) ಕಾರ್ಯಕ್ರಮ ಈಗ ಅಂತಿಮ ಘಟ್ಟ ತಲುಪಿದೆ. ಫಿನಾಲೆ ವಾರದಲ್ಲಿ ರೂಪೇಶ್ ರಾಜಣ್ಣ, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ದೀಪಿಕಾ ದಾಸ್, ದಿವ್ಯಾ ಉರುಡುಗ, ಆರ್ಯವರ್ಧನ್ ಗುರೂಜಿ ಎಂಟ್ರಿ ಪಡೆದರು. ಆದರೆ ಮಿಡ್ ವೀಕ್ ಎಲಿಮಿನೇಷನ್ನಲ್ಲಿ (Mid-week Elimination) ಒಬ್ಬರು ಔಟ್ ಆಗಿದ್ದಾರೆ. ಅದು ಯಾರು ಎಂಬುದು ಡಿ.27 ಸಂಚಿಕೆಯಲ್ಲಿ ಬಯಲಾಗಲಿದೆ. ಅದರ ಪ್ರೋಮೋ ವೈರಲ್ ಆಗಿದೆ. ಮಿಡ್ ವೀಕ್ ಎಲಿಮಿನೇಷನ್ ವೇಳೆ ಆರ್ಯವರ್ಧನ್ ಗುರೂಜಿ (Aryavardhan Guruji) ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Dec 27, 2022 05:13 PM