ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಕಚೇರಿಯಲ್ಲಿ 62 ಪ್ರಕರಣ ದಾಖಲಾಗಿವೆ: ಹೆಚ್ಡಿ ಕುಮಾರಸ್ವಾಮಿ
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಕಚೇರಿಯಲ್ಲಿ 62 ಪ್ರಕರಣಗಳು ದಾಖಲಾಗಿದ್ದರೆ ಅವುಗಳ ಪೈಕಿ ಕೇವಲ 12 ಪ್ರಕರಣಗಳ ತನಿಖೆಯಾಗಿದೆ ಎಂದು ಕುಮಾರಸ್ವಾಮಿ ಹೇಳಿದರು. ಈಗ ಉದ್ಭವಿಸುವ ಪ್ರಶ್ನೆಯೆಂದರೆ 12 ಪಪ್ರಕರಣಗಳ ತನಿಖೆಯಾಗಿದ್ದರೆ ಅವುಗಳಲ್ಲಿ ಗೊತ್ತಾಗಿರುವ ಸಂಗತಿಯೇನು ಅನ್ನೋದನ್ನು ಅವರು ಹೇಳುವುದಿಲ್ಲ, ದೂರುದಾರರ ಬಗ್ಗೆಯೂ ಅವರು ಮಾಹಿತಿ ನೀಡಲ್ಲ.
ಬೆಂಗಳೂರು: ರಾಜ್ಯ ಜೆಡಿಎಸ್ ಕಚೇರಿಯಲ್ಲಿ ಇಂದು ಸುದೀರ್ಘವಾದ ಪತ್ರಿಕಾ ಗೋಷ್ಠಿ ನಡೆಸಿ ಮಾತಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ವಿರುದ್ಧ ಅಗಿರುವ ಆರೋಪಗಳು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಗಿರುವ ಅರೋಪಗಳ ದಾಖಲೆಗಳನ್ನು ಹೊತ್ತುಕೊಂಡು ಸನ್ನದ್ಧರಾಗಿ ಬಂದಿದ್ದರು. ಮೈನ್ಸ್ ಲೀಸಿಂಗ್ ಸಂಬಂಧಿಸಿದಂತೆ ತನ್ನ ಮೇಲಿರುವ ಆರೋಪಗಳಿಗೆ ಸ್ಪಷ್ಟೀಕರಣ ನೀಡಿದ ಬಳಿಕ ಅವರು ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಅಗಿರುವ ಅರೋಪಗಳ ಬಗ್ಗೆ ವಿವರಣೆ ನೀಡಿದರು. ಮುಖ್ಯಮಂತ್ರಿ ವಿರುದ್ಧ ಇದುವರೆಗೆ 61 ದೂರುಗಳು ದಾಖಲಾಗಿದ್ದು ಮೊನ್ನೆಯಷ್ಟೇ 62ನೇ ದೂರು ದಾಖಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು. ತಾನು ಹೇಳುತ್ತಿರುವುದು ಫ್ಯಾಬ್ರಿಕೇಟೆಡ್ ಮಾಹಿತಿ ಅಲ್ಲ, ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸುದ್ದಿಗಳನ್ನು ಆಧರಿಸಿ ಹೇಳಿದ್ದು ಎಂದು ಹೇಳಿದ ಕುಮಾರಸ್ವಾಮಿ ಭ್ರಷ್ಟಾಚಾರ, ಕರ್ತವ್ಯಲೋಪ ಮತ್ತು ಇತರ ಹಲವು ಅಂಶಗಳಿಗೆ ಸಂಬಂಧಿಸಿದ ಪ್ರಕರಣಗಳು ಮುಖ್ಯಮಂತ್ರಿ ವಿರುದ್ಧ ದಾಖಲಾಗಿವೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪ್ರಾಸಿಕ್ಯೂಷನ್ ಸಂಕಷ್ಟ: ಹೆಚ್ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಪ್ರಕರಣಗಳ ವ್ಯತ್ಯಾಸವೇನು? ಇಲ್ಲಿದೆ ವಿವರ