AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SIT Arrests HD Revanna: ನಿರೀಕ್ಷೆಯಂತೆ ಮಹಿಳೆ ಅಪಹರಣ ಪ್ರಕರಣದಲ್ಲಿ ಹೆಚ್ ಡಿ ರೇವಣ್ಣರನ್ನು ಬಂಧಿಸಿದ ಎಸ್ಐಟಿ

SIT Arrests HD Revanna: ನಿರೀಕ್ಷೆಯಂತೆ ಮಹಿಳೆ ಅಪಹರಣ ಪ್ರಕರಣದಲ್ಲಿ ಹೆಚ್ ಡಿ ರೇವಣ್ಣರನ್ನು ಬಂಧಿಸಿದ ಎಸ್ಐಟಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 04, 2024 | 7:51 PM

SIT Arrests HD Revanna: ಅಧಿಕಾರಿಗಳು ರೇವಣ್ಣರನ್ನು ಬೆಂಗಳೂರು ಅರಮನೆ ರಸ್ತೆಯಲ್ಲಿರುವ ಸಿಐಡಿ ಕಚೇರಿ ಕಾರ್ಲಟನ್‌ ಭವನಕ್ಕೆ ಕರೆದೊಯ್ದರು. ಇಲ್ಲಿರುವ ಸಿಐಡಿ ಕಚೇರಿಯಲ್ಲೇ ಎಸ್ಐಟಿ ಕಚೇರಿ ಇದೆ. ಭವನದ ಸುತ್ತ ಬ್ಯಾರಿಕೇಡ್ ಗಳನ್ನು ಹಾಕಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಬೆಂಗಳೂರು: ಇದನ್ನು ನಿರೀಕ್ಷಿಸಲಾಗಿತ್ತು ಮತ್ತು ಬೆಳಗ್ಗೆ ಇಂಥದೊಂದು ಸಾಧ್ಯತೆ ಬಗ್ಗೆ ನಾವು ಹೇಳಿದ್ದೆವು. ಮಹಿಳೆ ಅಪಹರಣದ ಪ್ರಕರಣವೊಂದರಲ್ಲಿ (woman kidnapping case) ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ (HD Revanna) ಅವರನ್ನು ಎಸ್ಐಟಿ (SIT) ಬಂಧಿಸಿ ವಿಚಾರಣೆಗಾಗಿ ತನ್ನ ಕಚೇರಿಗೆ ಕರೆದೊಯ್ದಿದೆ. ಬೆಳಗ್ಗೆ ಹೊಳೆನರಸೀಪುರದ ತಮ್ಮ ಮನೆಯಲ್ಲಿದ್ದ ರೇವಣ್ಣ ಸಾಯಂಕಾಲದ ಹೊತ್ತಿದೆ ನಗರದ ಪದ್ಮನಾಭನಗರದಲ್ಲಿರುವ ತಮ್ಮ ತಂದೆ ಹೆಚ್ ಡಿ ದೇವೇಗೌಡರ ಮನೆಗೆ ಬಂದಿದ್ದರು. ಮಹಿಳೆ ಅಪಹರಣ ಪ್ರಕರಣದಲ್ಲಿ ರೇವಣ್ಣರ ನಿರೀಕ್ಷಣಾ ಜಾಮೀನು ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದ ಕೂಡಲೇ ಎಸ್ಐಟಿ ಅಧಿಕಾರಿಗಳು, ರೇವಣ್ಣ ಮಾಜಿ ಪ್ರಧಾನಿಯವರ ಮನೆಯಲ್ಲಿರುವ ಮಾಹಿತಿ ಪಡೆದು ಅವರನ್ನು ತಮ್ಮ ವಶಕ್ಕೆ ಪಡೆದರು. ಅಧಿಕಾರಿಗಳು ರೇವಣ್ಣರನ್ನು ಬೆಂಗಳೂರು ಅರಮನೆ ರಸ್ತೆಯಲ್ಲಿರುವ ಸಿಐಡಿ ಕಚೇರಿ ಕಾರ್ಲಟನ್‌ ಭವನಕ್ಕೆ ಕರೆದೊಯ್ದರು. ಇಲ್ಲಿರುವ ಸಿಐಡಿ ಕಚೇರಿಯಲ್ಲೇ ಎಸ್ಐಟಿ ಕಚೇರಿ ಇದೆ. ಭವನದ ಸುತ್ತ ಬ್ಯಾರಿಕೇಡ್ ಗಳನ್ನು ಹಾಕಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಹೆಚ್ ಡಿ ರೇವಣ್ಣ ಹೊಳೆನರಸೀಪುರ ಮನೆಗೆ ಮತ್ತೊಮ್ಮೆ ಭೇಟಿ ನೀಡಿದ ಪೊಲೀಸ್ ತಂಡ, ಬಂಧನ ಸನ್ನಿಹಿತ?