Karnataka Budget Session: ಸದನದಲ್ಲಿ ಮುಖ್ಯಮಂತ್ರಿ ಯಾಕಿಲ್ಲವೆಂದ ಅಶ್ವಥ್, ಹುಷಾರಿಲ್ಲವೆಂದು ಕೈಮುಗಿದ ಚಲುವರಾಯಸ್ವಾಮಿ

Updated on: Mar 13, 2025 | 2:47 PM

ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅವರು ವಿರೋಧ ಪಕ್ಷದ ನಾಯಕರಿಗೆ ಸಮಯ ವ್ಯರ್ಥ ಮಾಡಬೇಡಿ, ಪ್ರಶ್ನೆ ಕೇಳಿ ಅಂತ ಹೇಳಿದರೂ ಆಶ್ವಥ್ ನಾರಾಯಣ, ಮುಖ್ಯಮಂತ್ರಿಯವರು ಬೇಕೇಬೇಕು ಎನ್ನುತ್ತಾರೆ. ಕೂಗಾಟದ ನಡುವೆ ಯಾರು ಏನು ಹೇಳುತ್ತಿದ್ದಾರೆ ಅನ್ನೋದು ಗೊತ್ತೇ ಆಗಲ್ಲ. ಕೊನೆಗೆ ಅರವಿಂದ್ ಬೆಲ್ಲದ್ ಮತ್ತು ಸುನೀಲ ಕುಮಾರ್ ಸುಮ್ಮನಿರುವಂತೆ ಅಶ್ವಥ್ ನಾರಾಯಣ್​ಗೆ ಹೇಳುತ್ತಾರೆ.

ಬೆಂಗಳೂರು, 13 ಮಾರ್ಚ್: ವಿಧಾನಸಭೆಯ ಇವತ್ತಿನ ಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಸದನದಲ್ಲಿ ಇಲ್ಲವೆಂಬ ಕಾರಣಕ್ಕೆ ಬಿಜೆಪಿ ಶಾಸಕ ಡಾ ಸಿಎನ್ ಅಶ್ವಥ್ ನಾರಾಯಣ ಮತ್ತು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ನಡುವೆ ವಾಗ್ವಾದ ನಡೆಯಿತು. ಬಜೆಟ್ ಮಂಡಿಸಿದ ಅವರೇ ಇಲ್ಲವೆಂದ ಮೇಲೆ ಬಜೆಟ್ ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಯಾರನ್ನು ಕೇಳೋದು ಅಂತ ಅಶ್ವಥ್ ಕೇಳಿದಾಗ ಚಲುವರಾಯಸ್ವಾಮಿ, ಇಂಥ ವಿಚಾರಗಳನ್ನು ಪ್ರಸ್ತಾಪಿಸಿ ಸದನದ ಸಮಯ ಹಾಳು ಮಾಡಬೇಡಿ, ನಿಮಗೆ ಕೈ ಮುಗೀತೀನಿ, ಮುಖ್ಯಮಂತ್ರಿಯವರಿಗೆ ಆರೋಗ್ಯ ಸರಿಯಿಲ್ಲ, ಹಾಗಾಗೇ ಅವರು ಬಂದಿಲ್ಲ, 15 ಜನ ಮಿನಿಸ್ಟ್ರುಗಳು ಸದನದಲ್ಲಿದ್ದೇವೆ. ಪ್ರಶ್ನೆ ಕೇಳಿ ಉತ್ತರಿಸುತ್ತೇವೆ ಅನ್ನುತ್ತಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Karnataka Budget Session: ಪ್ರಿಯಾಂಕ್ ಖರ್ಗೆ ಮತ್ತು ಅಶ್ವಥ್ ನಾರಾಯಣ ನಡುವೆ ಸದನದಲ್ಲಿ ಮಾತು ಜೋರು, ಸ್ಪೀಕರ್ ಪ್ರೇಕ್ಷಕ