Asia Cup 2025: 0,0,0.. ಸತತ 3ನೇ ಪಂದ್ಯದಲ್ಲೂ ಸೊನ್ನೆ ಸುತ್ತಿದ ಸೈಮ್ ಅಯೂಬ್
Saim Ayub Three Ducks in a Row: ಒಂದು ಗಂಟೆ ತಡವಾಗಿ ಆರಂಭವಾದ ಪಂದ್ಯದಲ್ಲಿ, ಪಾಕಿಸ್ತಾನ ತಂಡವು ಸತತ ಮೂರನೇ ಪಂದ್ಯದಲ್ಲೂ ಕಳಪೆ ಆರಂಭ ಪಡೆಯಿತು. ಆರಂಭಿಕ ಸೈಮ್ ಅಯೂಬ್ ಸತತ ಮೂರನೇ ಪಂದ್ಯದಲ್ಲೂ ಶೂನ್ಯಕ್ಕೆ ಔಟ್ ಆದರು. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ಬಾರಿ ಡಕ್ ಔಟ್ ಆದ ವಿಚಾರದಲ್ಲಿ ಶಾಹಿದ್ ಅಫ್ರಿದಿ ಅವರ ದಾಖಲೆಯನ್ನು ಸರಿಗಟ್ಟಿದರು.
2025 ರ ಏಷ್ಯಾಕಪ್‌ನ 10ನೇ ಪಂದ್ಯ ಪಾಕಿಸ್ತಾನ ಮತ್ತು ಆತಿಥೇಯ ಯುನೈಟೆಡ್ ಅರಬ್ ಎಮಿರೇಟ್ಸ್ ನಡುವೆ ಕೊನೆಗೂ ಆರಂಭವಾಗಿದೆ. ವಿವಾದಗಳೆಲ್ಲವನ್ನು ಬಗೆಹರಿಸಿಲು ತಡವಾದ್ದರಿಂದ ಪಂದ್ಯ ಒಂದು ಗಂಟೆ ತಡವಾಗಿ ಅಂದರೆ, ಪಂದ್ಯವು ಈ ಮೊದಲು ಭಾರತೀಯ ಕಾಲಮಾನ ರಾತ್ರಿ 8:00 ಗಂಟೆಗೆ ಆರಂಭವಾಗಬೇಕಿತ್ತು. ಆದರೆ ಪಾಕಿಸ್ತಾನ ತಂಡವು ಕ್ರೀಡಾಂಗಣಕ್ಕೆ ತಡವಾಗಿ ಬಂದ ಕಾರಣ ರಾತ್ರಿ 9:00 ಗಂಟೆಗೆ ಪ್ರಾರಂಭವಾಯಿತು.
ಒಂದು ಗಂಟೆ ತಡವಾಗಿ ಪ್ರಾರಂಭವಾದ ಈ ಪಂದ್ಯದಲ್ಲಿ, ಯುಎಇ ನಾಯಕ ಮೊಹಮ್ಮದ್ ವಾಸಿಮ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಪಾಕಿಸ್ತಾನ ತನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಎರಡು ಬದಲಾವಣೆಗಳನ್ನು ಮಾಡಿದರೆ, ಯುಎಇ ಒಂದು ಬದಲಾವಣೆಯನ್ನು ಮಾಡಿತು. ಇತ್ತ ಟಾಸ್ ಸೋತ ನಂತರ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡಕ್ಕೆ ಸತತ ಮೂರನೇ ಪಂದ್ಯದಲ್ಲೂ ಕಳಪೆ ಆರಂಭ ಸಿಕ್ಕಿತು.
ವಾಸ್ತವವಾಗಿ, ಸೈಮ್ ಅಯೂಬ್ ಮತ್ತು ಸಾಹಿಬ್ಜಾದಾ ಫರ್ಹಾನ್ ಪಾಕಿಸ್ತಾನ ತಂಡದ ಪರ ಎಂದಿನಂತೆ ಇನ್ನಿಂಗ್ಸ್ ಆರಂಭಿಸಿದರು. ಆದರೆ ಈ ಮೊದಲು ನಡೆದಿದ್ದ ಎರಡು ಪಂದ್ಯಗಳಂತೆ ಈ ಪಂದ್ಯದಲ್ಲೂ ಪಾಕ್ ತಂಡಕ್ಕೆ ಮೊದಲ ಓವರ್ನಲ್ಲೇ ಆಘಾತ ಎದುರಾಯಿತು. ಆರಂಭಿಕ ಸೈಮ್ ಅಯೂಬ್ ಸತತ ಮೂರನೇ ಪಂದ್ಯದಲ್ಲೂ ಖಾತೆ ತೆರೆಯದೆ ಔಟಾದರು. ಇದರಲ್ಲಿ ವ್ಯತ್ಯಾವೆನೆಂದರೆ ಮೊದಲ ಎರಡು ಪಂದ್ಯಗಳಲ್ಲಿ ಮೊದಲ ಎಸೆತದಲ್ಲೇ ಔಟಾಗಿದ್ದ ಸೈಮ್ ಅಯೂಬ್, ಮೂರನೇ ಪಂದ್ಯದಲ್ಲಿ ಒಂದು ಎಸೆತವನ್ನು ಹೆಚ್ಚಾಗಿ ಆಡಿ ಎರಡನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.
ಈ ಮೂಲಕ ಅಂತರರಾಷ್ಟ್ರೀಯ ಟಿ20ಪಂದ್ಯಗಳಲ್ಲಿ ಅತಿ ಹೆಚ್ಚು ಡಕ್ ಔಟ್ ಆದ ಪಾಕ್ ಆಟಗಾರರ ಪಟ್ಟಿಯಲ್ಲಿ ಶಾಹಿದ್ ಅಫ್ರಿದಿ ಅವರ ದಾಖಲೆಯನ್ನು ಸ್ಯಾಮ್ ಅಯೂಬ್ ಸರಿಗಟ್ಟಿದ್ದಾರೆ. ಅಯೂಬ್ ಮತ್ತು ಅಫ್ರಿದಿ ಇಬ್ಬರೂ ತಲಾ ಎಂಟು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಅಯೂಬ್ ಈಗ ಅತಿ ಹೆಚ್ಚು ಡಕ್ ಔಟ್ ಮಾಡಿದ ದಾಖಲೆಯಿಂದ ಕೇವಲ ಮೂರು ಹೆಜ್ಜೆ ದೂರದಲ್ಲಿದ್ದಾರೆ.
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

