3-day Bihu celebrations get  underway: ಅಸ್ಸಾಂನಲ್ಲಿ ಶುರುವಾಗಿದೆ ಸಂಭ್ರಮ ಸಡಗರಗಳ ರೊಂಗಾಲಿ ಬಿಹು ಹಬ್ಬ, ಮಹಿಳೆಯರೆಲ್ಲ ಬಿಹು ನೃತ್ಯದಲ್ಲಿ ವ್ಯಸ್ತ!

|

Updated on: Apr 13, 2023 | 1:55 PM

ಅಸ್ಸಾಮಿನ ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಬಿಹು ವರ್ಷದಲ್ಲಿ ಮೂರು ಬಾರಿ ಆಚರಿಸಲ್ಪಡುತ್ತದೆ. ಮಾಘ್ ಬಿಹುವನ್ನು ಜನೆವರಿಯಲ್ಲಿ ಆಚರಿಸಲಾಗುತ್ತದೆ, ರೊಂಗಾಲಿ ಬಿಹು ಏಪ್ರಿಲ್ ನಲ್ಲಿ ಮತ್ತು ಕಟಿ ಬಿಹು ಹಬ್ಬವನ್ನು ಅಕ್ಟೋಬರ್ ನಲ್ಲಿ ಆಚರಿಸಲಾಗುತ್ತದೆ.

ದಿಬ್ರೂಗಢ್:  ಅಸ್ಸಾಂನಲ್ಲಿ ಇಂದಿನಿಂದ ಆರಂಭಗೊಂಡಿರುವ ಮೂರುದಿನಗಳ ರೊಂಗಾಲಿ ಬಿಹು (Rongali Bihu) ಉತ್ಸವವನ್ನು ಸಂಭ್ರಮ ಸಡಗರದೊಂದಿಗೆ ಆಚರಿಸಲಾಗುತ್ತಿದೆ. ಬೊಹಾಗ್ ಬಿಹು (Bohag Bihu) ಅಂತಲೂ ಕರೆಸಿಕೊಳ್ಳುವ ಹಬ್ಬವು ಅಸ್ಸಾಂ ಹೊಸವರ್ಷದ (New Year) ಆಗಮನವನ್ನು ಸೂಚಿಸುತ್ತದೆ. ರೊಂಗಾಲಿ ಬಿಹು ಉತ್ಸವದ ಪ್ರಮುಖ ಆಕರ್ಷಣೆಯೆಂದರೆ ಸಾಂಪ್ರದಾಯಿಕ ಬಿಹು ನೃತ್ಯ.

‘ಬಹಳ ದಿನಗಳಿಂದ ನಾವು ಬಿಹು ಕಾರ್ಯಾಗಾರವನ್ನು ನಡೆಸುತ್ತಿದ್ದೇವೆ. ವಯಸ್ಸಿನ ಭೇದವಿಲ್ಲದೆ ಪ್ರತಿಯೊಬ್ಬರು ಇಲ್ಲಿ ಬಂದು ಕುಣಿಯುತ್ತಿದ್ದಾರೆ. ಏಪ್ರಿಲ್ 13, 14 ಮತ್ತು 15ರವರೆಗೆ ಬಿಹು ಆಚರಿಸಲ್ಪಡುತ್ತದೆ. ಈ ಹಬ್ಬ ಪ್ರತಿಯೊಬ್ಬರಿಗೆ ಸಂತೋಷ ಹೊತ್ತು ತರುತ್ತದೆ. ಸದ್ಯಕ್ಕೆ ಇವರೆಲ್ಲ ಕಾರ್ಯಾಗಾರದಲ್ಲಿ ನೃತ್ಯಾಭಾಸ ಮಾಡುತ್ತಿದ್ದಾರೆ,’ ಎಂದು ದಿಬ್ರೂಗಢ್ ನಿವಾಸಿ ಮೈನಿ ಸೋನೊವಾಲ್ ಹೇಳುತ್ತಾರೆ.

ಇದನ್ನೂ ಓದಿ:  Supreme Court : ಕೇಂದ್ರ ಸಚಿವರ ಕಾರಿನ ಮೇಲೆ ದಾಳಿ ಪ್ರಕರಣ, ಸಿಬಿಐ ತನಿಖೆಗೆ ನಿರ್ದೇಶಿಸಿದ ಕಲ್ಕತ್ತಾ ಹೈಕೋರ್ಟ್ ಆದೇಶ ರದ್ದುಗೊಳಿಸಿದ ಸುಪ್ರೀಂ

‘ಎಣೆಯಿಲ್ಲದೆ ಸಂತೋಷ ಮತ್ತು ಉತ್ಸಾಹದೊಂದಿಗೆ ನಾವು ಬಿಹು ನೃತ್ಯ ಅಭ್ಯಾಸ ಮಾಡುತ್ತಿದ್ದೇವೆ. ಇಲ್ಲಿ ನೃತ್ಯಾಭ್ಯಾಸ ಮಾಡುತ್ತಿರುವ ಚಿಕ್ಕ ಚಿಕ್ಕ ಬಾಲಕಿಯರು ತಮ್ಮ ಗುರಿ ಈಡೇರಿಸಿಕೊಳ್ಳುವ ನಿರೀಕ್ಷೆ ನಮಗಿದೆ,’ ಎಂದು ದಿಬ್ರೂಗಢ್ ಮತ್ತೊಬ್ಬ ನಿವಾಸಿ ಭಾರತಿ ಬೋರ್ ಸೈಕಿಯ ಹೇಳುತ್ತಾರೆ.

ಅಸ್ಸಾಮಿನ ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಬಿಹು ವರ್ಷದಲ್ಲಿ ಮೂರು ಬಾರಿ ಆಚರಿಸಲ್ಪಡುತ್ತದೆ. ಮಾಘ್ ಬಿಹುವನ್ನು ಜನೆವರಿಯಲ್ಲಿ ಆಚರಿಸಲಾಗುತ್ತದೆ, ರೊಂಗಾಲಿ ಬಿಹು ಏಪ್ರಿಲ್ ನಲ್ಲಿ ಮತ್ತು ಕಟಿ ಬಿಹು ಹಬ್ಬವನ್ನು ಅಕ್ಟೋಬರ್ ನಲ್ಲಿ ಆಚರಿಸಲಾಗುತ್ತದೆ.

‘ಮಹಿಳೆಯರು ಕೇವಲ ಅಡುಗೆ ಕೋಣೆಯ ಕೆಲಸಗಳಿಗೆ ಸೀಮಿತರಾಗಿಲ್ಲ. ಬಿಹು ಅಸ್ಸಾಂ ಜನರ ಜಾನಪದ ಹಬ್ಬವಾಗಿದ್ದು ನಮಗೆಲ್ಲ ಸಂಭ್ರಮದ ಸಮಯವಾಗಿದೆ. ನಾವೆಲ್ಲ ಒಂದುಗೂಡಿ ಬಿಹು ನೃತ್ಯವನ್ನು ಮಾಡುತ್ತೇವೆ,’ ಎಂದು ದಿಬ್ರೂಗಢ್ ನಿವಾಸಿ ರೀಟಾ ಸೈಕಿಯಾ ಹೇಳುತ್ತಾರೆ.

ಇದನ್ನೂ ಓದಿ: Viral Video: ಸ್ವತಃ ಬಾಳೆಹಣ್ಣಿನ ಸಿಪ್ಪೆ ತೆಗೆದು ತಿಂದ ಆನೆ, ಇಲ್ಲಿದೆ ವೈರಲ್​​ವೀಡಿಯೊ 

‘ಅಸ್ಸಾಂನ ಎಲ್ಲ ಮಹಿಳೆಯರು ಬಿಹು ಹಬ್ಬ ಆಚರಿಸುತ್ತಾರೆ. ಬಿಹಾಗ್ ಬಿಹು ಉತ್ಸವ ಆರಂಭವಾಗಿದೆ ಮತ್ತು ಮಹಿಳೆಯರೆಲ್ಲ ಸೇರಿ ಅದನ್ನು ಆಚರಿಸುತ್ತಿದ್ದೇವೆ. ನಮಗಿದು ಬಣ್ಣಗಳ ಹಬ್ಬ, ಹಾಗಾಗೇ ಇದನ್ನು ರೊಂಗಾಲಿ ಎಂದು ಕರೆಯುತ್ತಾರೆ,’ ಎಂದು ದಿಬ್ರೂಗಢ್ ನಗರದ ಇನ್ನೊಬ್ಬ ನಿವಾಸಿ ಹೇಳುತ್ತಾರೆ.

ಅಸಲಿಗೆ ರೊಂಗಾಲಿ ಬಿಹು ಮೂರು ದಿನಗಳ ಉತ್ಸವ ಎಂದು ಹೇಳಲಾಗುತ್ತದೆಯಾದರೂ ಅಸ್ಸಾಮ ಜನ ಪೂರ್ತಿ ಒಂದು ವಾರದವರೆಗೆ ಅದನ್ನು ಆಚರಿಸುತ್ತಾರೆ. ಅಸ್ಸಾಂ ಅಲ್ಲದೆ ಮಣಿಪುರ ಮತ್ತು ಪಶ್ಚಿಮ ಬಂಗಾಳದ ಕೆಲ ಭಾಗಗಳಲ್ಲೂ ಹಬ್ಬ ಆಚರಿಸಲಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ