ನಟ ಸಾರ್ಥಕ್ (Saarthak) ಅವರು ‘ಸೌತ್ ಇಂಡಿಯನ್ ಹೀರೋ’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈ ಚಿತ್ರ ನೋಡಲು ಹೊರ ರಾಜ್ಯಗಳ ಪ್ರೇಕ್ಷಕರು ಬೆಂಗಳೂರಿಗೆ ಬಂದಿದ್ದಾರೆ. ಕೇರಳ, ತಮಿಳುನಾಡು, ಆಂಧ್ರ ಪ್ರದೇಶದಿಂದ ಬಂದಿರುವ ಅಭಿಮಾನಿಗಳು ಬೆಂಗಳೂರಿನಲ್ಲಿ ‘ಸೌತ್ ಇಂಡಿಯನ್ ಹೀರೋ’ (South Indian Hero) ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ಪರ ಭಾಷಿಕರಿಂದ ಈ ಪರಿ ಬೆಂಬಲ ಸಿಕ್ಕಿರುವುದಕ್ಕೆ ಚಿತ್ರತಂಡದವರಿಗೆ ಖುಷಿ ಆಗಿದೆ. ಕನ್ನಡದ ಸಿನಿಮಾಗಳು (Kannada movies) ಇಷ್ಟರಮಟ್ಟಿಗೆ ಶೈನ್ ಆಗುತ್ತಿವೆ. ‘ಸೌತ್ ಇಂಡಿಯನ್ ಹೀರೋ’ ಚಿತ್ರಕ್ಕೆ ನರೇಶ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಕಾಶಿಮಾ, ಊರ್ವಶಿ ಜಯನ್, ವಿಜಯ್ ಚಂಡೂರು ಮುಂತಾದವರು ನಟಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.