South Indian Hero Review: ಸಿನಿಮಾ ಮಾಡೋರಿಗೂ, ನೋಡೋರಿಗೂ ಆಪ್ತ ಎನಿಸುವ ‘ಸೌತ್​ ಇಂಡಿಯನ್​ ಹೀರೋ’

New Kannada Movie | South Indian Hero: ಸಿನಿಮಾವನ್ನು ಪ್ರೀತಿಸುವವರಿಗೆ ‘ಸೌತ್​ ಇಂಡಿಯನ್​ ಹೀರೋ’ ಚಿತ್ರ ವಿಶೇಷವಾಗಿ ಇಷ್ಟವಾಗುತ್ತದೆ. ಚಿತ್ರರಂಗದ ಒಳಗಿನ ಹಲವು ವಿಚಾರಗಳನ್ನು ಈ ಸಿನಿಮಾ ತೆರೆದಿಡುತ್ತದೆ.

South Indian Hero Review: ಸಿನಿಮಾ ಮಾಡೋರಿಗೂ, ನೋಡೋರಿಗೂ ಆಪ್ತ ಎನಿಸುವ ‘ಸೌತ್​ ಇಂಡಿಯನ್​ ಹೀರೋ’
ಊರ್ವಶಿ, ಸಾರ್ಥಕ್
Follow us
ಮದನ್​ ಕುಮಾರ್​
|

Updated on: Feb 22, 2023 | 7:00 PM

ಚಿತ್ರ: ಸೌತ್​ ಇಂಡಿಯನ್​ ಹೀರೋ

ನಿರ್ಮಾಣ: ಶಿಲ್ಪಾ ಎಲ್​.ಎಸ್​.

ನಿರ್ದೇಶನ: ನರೇಶ್​ ಕುಮಾರ್​ ಎಚ್​.ಎನ್​.

ಇದನ್ನೂ ಓದಿ
Image
Triple Riding Movie Review: ‘ತ್ರಿಬಲ್​ ರೈಡಿಂಗ್​’ ರೇಸ್​ನಲ್ಲಿ ಓವರ್​ಟೇಕ್​ ಮಾಡಿದ ಸಾಧುಕೋಕಿಲ, ರಂಗಾಯಣ ರಘು
Image
Shubhamangala: ‘ಶುಭಮಂಗಳ’ ಸಿನಿಮಾ ವಿಮರ್ಶೆ; ಇದು ಆರು ಪ್ರೇಮಕಥೆಗಳ ಸುಂದರ ಸಂಕಲನ
Image
Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
Image
Guru Shishyaru Review: ರೋಚಕ ಖೊಖೊ ಪಂದ್ಯದ ಜೊತೆ ಹಿತ-ಮಿತವಾದ ಕಾಮಿಡಿ

ಪಾತ್ರವರ್ಗ: ಸಾರ್ಥಕ್​, ಕಾಶಿಮಾ, ಊರ್ವಶಿ ಜಯನ್​, ಅಶ್ವಿನ್​ ರಾವ್​ ಪಲ್ಲಕ್ಕಿ, ವಿಜಯ್​ ಚಂಡೂರು ಮುಂತಾದವರು.

ಸ್ಟಾರ್: 3/5

ಸಿನಿಮಾ ಎಂಬುದು ಜಗತ್ತಿನಾದ್ಯಂತ ಹರಡಿಕೊಂಡಿದೆ. ಎಲ್ಲ ಪ್ರಮುಖ ಭಾಷೆಯಲ್ಲೂ ಸಿನಿಮಾಗಳು ಮೂಡಿಬರುತ್ತವೆ. ಪ್ರತಿ ಭಾಷೆಯ ಚಿತ್ರರಂಗಕ್ಕೂ ಅದರದ್ದೇ ಆದಂತಹ ಸಂಸ್ಕೃತಿ ಇರುತ್ತದೆ. ಸೌತ್​ ಇಂಡಿಯಾದಲ್ಲಿ ತಯಾರಾಗುವ ಚಿತ್ರಗಳ ಶೈಲಿಯೇ ಬೇರೆ. ಇಲ್ಲಿನ ಹೀರೋಗಳನ್ನು ಜನರು ಆರಾಧಿಸುತ್ತಾರೆ. ಹುಚ್ಚು ಅಭಿಮಾನವನ್ನು ಪ್ರದರ್ಶಿಸುತ್ತಾರೆ. ನೆಚ್ಚಿನ ನಟನ ಮೇಲಿನ ಪ್ರೀತಿಗಾಗಿ ಅಭಿಮಾನಿಗಳು ಯಾವ ಹಂತಕ್ಕೆ ಬೇಕಾದರೂ ಹೋಗಲು ತಯಾರಿರುತ್ತಾರೆ. ಗೆಲುವಿಗಾಗಿ ಚಿತ್ರರಂಗದಲ್ಲಿ ಹಲವು ಬಗೆಯ ಜಟಾಪಟಿಗಳು ನಡೆಯುತ್ತವೆ. ಗೆದ್ದಾಗ ಒಂದು ಥರ, ಸೋತಾಗ ಇನ್ನೊಂದು ಥರ. ಈ ರೀತಿಯ ವಿಚಾರಗಳನ್ನೇ ಇಟ್ಟುಕೊಂಡು ನಿರ್ದೇಶಕ ನರೇಶ್​ ಕುಮಾರ್​ ಅವರು ‘ಸೌತ್​ ಇಂಡಿಯನ್​ ಹೀರೋ’ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ವಿಮರ್ಶೆ ಇಲ್ಲಿದೆ..

ನಿರ್ದೇಶಕ ನರೇಶ್​ ಕುಮಾರ್​ ಅವರು ಈ ಹಿಂದೆ ‘ಫಸ್ಟ್​ ರ‍್ಯಾಂಕ್ ರಾಜು’ ಮತ್ತು ‘ರಾಜು ಕನ್ನಡ ಮೀಡಿಯಂ’ ಸಿನಿಮಾ ಮಾಡಿ ಗಮನ ಸೆಳೆದಿದ್ದರು. ಕಾಮಿಡಿ ಮೂಲಕ ಜನರನ್ನು ರಂಜಿಸುವುದು ಅವರ ಸಾಮರ್ಥ್ಯ. ‘ಸೌತ್​ ಇಂಡಿಯನ್​ ಹೀರೋ’ ಸಿನಿಮಾದಲ್ಲಿ ಕೂಡ ಅವರು ಭರ್ಜರಿಯಾಗಿ ನಗಿಸುವ ಪ್ರಯತ್ನ ಮಾಡಿದ್ದಾರೆ. ಚಿತ್ರದ ಆರಂಭದಿಂದ ಕೊನೆವರೆಗೂ ಭರಪೂರ ನಗು ಗ್ಯಾರಂಟಿ.

ಇದನ್ನೂ ಓದಿ: Tanuja Movie Review: ತನುಜಾ ಬದುಕಿನ ಸ್ಫೂರ್ತಿಯ ಕಥೆಗೆ ಸಿನಿಮೀಯ ಸ್ಪರ್ಶ

ದಕ್ಷಿಣ ಭಾರತದ ಸಿನಿಮಾಗಳ ಫೈಟಿಂಗ್​ ದೃಶ್ಯಗಳಲ್ಲಿ ಲಾಜಿಕ್​ ಇರೋದಿಲ್ಲ ಎಂದು ಹಲವರು ಟೀಕೆ ಮಾಡುತ್ತಾರೆ. ಇದೇ ಅಂಶವನ್ನು ಮುಖ್ಯವಾಗಿ ಇಟ್ಟುಕೊಂಡು ಹಲವು ಕಾಮಿಡಿ ದೃಶ್ಯಗಳನ್ನು ‘ಸೌತ್​ ಇಂಡಿಯನ್​ ಹೀರೋ’ ಚಿತ್ರದಲ್ಲಿ ಹೆಣೆಯಲಾಗಿದೆ. ಪ್ರತಿಯೊಂದಕ್ಕೂ ಲಾಜಿಕ್​ ಕೇಳುವ ಸಿನಿಮಾದ ಹೀರೋಗೆ ಏನೆಲ್ಲ ತೊಂದರೆ ಆಗುತ್ತದೆ ಎಂಬುದನ್ನು ತೋರಿಸಲಾಗಿದೆ.

ಹೊಸ ನಟ ಸಾರ್ಥಕ್​ ಅವರು ಲಾಜಿಕ್​ ಲಕ್ಷ್ಮಣ್ ರಾವ್​ ಅಲಿಯಾಸ್​ ಲಕ್ಕಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸೌತ್​ ಇಂಡಿಯನ್​ ಹೀರೋ ಆಗಿ ಅವರು ಹಲವು ಗೆಟಪ್​ನಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರ ಅಭಿನಯ ಮೆಚ್ಚುವಂತಿದೆ. ಕಾಮಿಡಿ, ಆ್ಯಕ್ಷನ್​, ಸೆಂಟಿಮೆಂಟ್​ ಸೇರಿದಂತೆ ಎಲ್ಲದರಲ್ಲೂ ತಾವು ಹೀರೋ ಮಟೀರಿಯಲ್​ ಎಂಬುದನ್ನು ಅವರು ಸಾಬೀತು ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ನಟಿ ಕಾಶಿಮಾ ಅವರು ಗಮನಾರ್ಹವಾಗಿ ನಟಿಸಿದ್ದಾರೆ. ಬೋಲ್ಡ್​ ನಡೆ-ನುಡಿಯ ಹುಡುಗಿಯಾಗಿ ಅವರು ಪ್ರೇಕ್ಷಕರಿಗೆ ಇಷ್ಟ ಆಗುತ್ತಾರೆ. ಮತ್ತೋರ್ವ ನಟಿ ಊರ್ವಶಿ ನಟನೆಗೂ ಮೆಚ್ಚುಗೆ ಸಿಗುತ್ತದೆ.

ಇದನ್ನೂ ಓದಿ: Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್​’; ಶಾರುಖ್​ ಫ್ಯಾನ್ಸ್​ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ

ಹೀರೋ ಸ್ನೇಹಿತರ ಪಾತ್ರದಲ್ಲಿ ನಟಿಸಿರುವ ಅಮಿತ್​ ಮತ್ತು ಅಶ್ವಿನ್​ ರಾವ್​ ಪಲ್ಲಕ್ಕಿ ಅವರು ತೆರೆಮೇಲೆ ಇದ್ದಷ್ಟು ಹೊತ್ತು ನಗಿಸುತ್ತಾರೆ. ನಿರ್ದೇಶಕನ ಪಾತ್ರದಲ್ಲಿ ವಿಜಯ್​ ಚಂಡೂರ್​ ಅವರು ಕಾಮಿಡಿ ಕಚಗುಳಿ ಇಡುತ್ತಾರೆ. ಪಂಚಿಂಗ್​ ಡೈಲಾಗ್​ಗಳು ಈ ಸಿನಿಮಾದ ಪ್ರಮುಖ ಆಕರ್ಷಣೆ. ಸೌತ್​ ಇಂಡಿಯನ್​ ಸಿನಿಮಾಗಳಲ್ಲಿ ಹೇಗೆ ಇಂಥ ಡೈಲಾಗ್​ಗಳು ಶಿಳ್ಳೆ ಗಿಟ್ಟಿಸುತ್ತವೆ ಎಂಬುದನ್ನು ತಿಳಿಸುವ ಸಲುವಾಗಿ ಹಲವು ಪಂಚಿಂಗ್​ ಸಂಭಾಷಣೆಗಳನ್ನು ಬರೆಯಲಾಗಿದೆ.

ಸಿನಿಮಾವನ್ನು ಪ್ರೀತಿಸುವವರಿಗೆ ‘ಸೌತ್​ ಇಂಡಿಯನ್​ ಹೀರೋ’ ಚಿತ್ರ ವಿಶೇಷವಾಗಿ ಇಷ್ಟವಾಗುತ್ತದೆ. ಚಿತ್ರರಂಗದ ಒಳಗಿನ ಹಲವು ವಿಚಾರಗಳನ್ನು ಈ ಸಿನಿಮಾ ತೆರೆದಿಡುತ್ತದೆ. ಅವುಗಳನ್ನು ವಿಮರ್ಶೆ ಮಾಡುತ್ತದೆ. ಪ್ರೇಕ್ಷಕರನ್ನು ಕೂಡ ಆಲೋಚನೆಗೆ ಹಚ್ಚುತ್ತದೆ. ಅಭಿಮಾನಿಗಳ ವರ್ತನೆಯನ್ನು ಪ್ರಶ್ನಿಸುತ್ತದೆ. ನಿಜವಾದ ಅಭಿಮಾನ ಯಾವ ರೀತಿ ಇರಬೇಕು ಎಂಬುದನ್ನು ತಿಳಿಸಿಕೊಡುತ್ತದೆ. ಸೆಲೆಬ್ರಿಟಿಗಳ ವಿಚಾರದಲ್ಲಿ ಮಾಧ್ಯಮಗಳು ನಡೆದುಕೊಳ್ಳುವ ರೀತಿಯನ್ನು ಈ ಚಿತ್ರದಲ್ಲಿನ ಹಲವು ದೃಶ್ಯಗಳು ವಿಡಂಬನಾತ್ಮಕವಾಗಿ ವಿವರಿಸುತ್ತವೆ. ಈ ಎಲ್ಲ ಕಾರಣಕ್ಕಾಗಿ ‘ಸೌತ್​ ಇಂಡಿಯನ್​ ಹೀರೋ’ ವಿಶೇಷ ಎನಿಸಿಕೊಳ್ಳುತ್ತದೆ. ಹಾಗಾಗಿ ಸಿನಿಮಾ ಮಾಡೋರಿಗೂ, ನೋಡೋರಿಗೂ ಇದು ಆಪ್ತವೆನಿಸುತ್ತದೆ.

ಇದನ್ನೂ ಓದಿ: Veera Simha Reddy Review: ಬಾಲಯ್ಯ ಸಿನಿಮಾದಲ್ಲಿ ಅಲ್ಪ ಸ್ವಲ್ಪ ಎಮೋಷನ್​; ಮಿಕ್ಕಿದ್ದೆಲ್ಲವೂ ಆ್ಯಕ್ಷನ್​

ಇದು ಚಿತ್ರರಂಗಕ್ಕೆ ಸಂಬಂಧಿಸಿದ ಕಥೆಯಾದರೂ ಅದರಲ್ಲಿ ಒಂದು ಲವ್​ ಸ್ಟೋರಿಯನ್ನು ಕೂಡ ಹೈಲೈಟ್​ ಮಾಡುವ ಪ್ರಯತ್ನ ಆಗಿದೆ. ಒಂದಷ್ಟು ದೃಶ್ಯಗಳನ್ನು ಟ್ರಿಮ್​ ಮಾಡಿದ್ದರೆ ಚಿತ್ರದ ಅಂದ ಹೆಚ್ಚುತ್ತಿತ್ತು. ಮೇಕಿಂಗ್​ ಗುಣಮಟ್ಟಕ್ಕೆ ತುಸು ಒತ್ತು ನೀಡಿದ್ದರೆ ಚಿತ್ರ ಇನ್ನೂ ಆಕರ್ಷಕ ಎನಿಸಿಕೊಳ್ಳುತ್ತಿತ್ತು. ಲಾಜಿಕ್​ ಇದ್ದರೂ, ಇಲ್ಲದಿದ್ದರೂ ಪ್ರೇಕ್ಷಕರ ಹೃದಯಕ್ಕೆ ಸಿನಿಮಾ ಮುಟ್ಟುವಂತಿರಬೇಕು ಎಂಬ ಥೀಮ್​ ಈ ಚಿತ್ರದಲ್ಲಿದೆ. ಆ ಆಶಯಕ್ಕೆ ತಕ್ಕಂತೆಯೇ ‘ಸೌತ್​ ಇಂಡಿಯನ್​ ಹೀರೋ’ ಸಿನಿಮಾ ಮೂಡಿಬಂದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ