Tanuja Movie Review: ತನುಜಾ ಬದುಕಿನ ಸ್ಫೂರ್ತಿಯ ಕಥೆಗೆ ಸಿನಿಮೀಯ ಸ್ಪರ್ಶ

Tanuja Kannada Movie | Saptha Pavoor: ಬಡ ಮಕ್ಕಳ ಬದುಕಿನಲ್ಲಿ ಒಂದು ಸ್ಫೂರ್ತಿಯ ಕಿಡಿ ಹೊತ್ತಿಸುವಂತಹ ರಿಯಲ್​ ಘಟನೆಯನ್ನು ‘ತನುಜಾ’ ಸಿನಿಮಾ ಮೂಲಕ ರೋಚಕವಾಗಿ ತೆರೆಗೆ ತರಲಾಗಿದೆ. ಅಲ್ಲಲ್ಲಿ ಈ ಸಿನಿಮಾ ಒಂದು ಸಾಕ್ಷ್ಯಚಿತ್ರದ ರೀತಿ ಭಾಸವಾಗುತ್ತದೆ.

Tanuja Movie Review: ತನುಜಾ ಬದುಕಿನ ಸ್ಫೂರ್ತಿಯ ಕಥೆಗೆ ಸಿನಿಮೀಯ ಸ್ಪರ್ಶ
ಸಪ್ತಾ ಪಾವೂರು
Follow us
ಮದನ್​ ಕುಮಾರ್​
|

Updated on:Feb 02, 2023 | 7:55 PM

ಚಿತ್ರ: ತನುಜಾ

ನಿರ್ಮಾಣ: ಚಂದ್ರಶೇಖರ್​ ಗೌಡ, ಮನೋಜ್​ ಬಿ.ಜಿ.

ನಿರ್ದೇಶನ: ಹರೀಶ್​ ಎಂ.ಡಿ. ಹಳ್ಳಿ

ಇದನ್ನೂ ಓದಿ
Image
Triple Riding Movie Review: ‘ತ್ರಿಬಲ್​ ರೈಡಿಂಗ್​’ ರೇಸ್​ನಲ್ಲಿ ಓವರ್​ಟೇಕ್​ ಮಾಡಿದ ಸಾಧುಕೋಕಿಲ, ರಂಗಾಯಣ ರಘು
Image
Shubhamangala: ‘ಶುಭಮಂಗಳ’ ಸಿನಿಮಾ ವಿಮರ್ಶೆ; ಇದು ಆರು ಪ್ರೇಮಕಥೆಗಳ ಸುಂದರ ಸಂಕಲನ
Image
Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
Image
Guru Shishyaru Review: ರೋಚಕ ಖೊಖೊ ಪಂದ್ಯದ ಜೊತೆ ಹಿತ-ಮಿತವಾದ ಕಾಮಿಡಿ

ಪಾತ್ರವರ್ಗ: ಸಪ್ತಾ ಪಾವೂರು, ರಾಜೇಶ್​ ನಟರಂಗ, ವಿಶ್ವೇಶ್ವರ ಭಟ್​, ಡಾ. ಕೆ. ಸುಧಾಕರ್​, ಬಿ.ಎಸ್​. ಯಡಿಯೂರಪ್ಪ ಮುಂತಾದವರು.

ಸ್ಟಾರ್​: 3/5

ಕಟ್ಟುಕಥೆ ಹೇಳುವ ಸಿನಿಮಾಗಳಿಗೆ ಲೆಕ್ಕವಿಲ್ಲ. ಆದರೆ ನೈಜ ಘಟನೆಗಳನ್ನು ಇಟ್ಟುಕೊಂಡು ಸಿದ್ಧವಾಗುವ ಚಿತ್ರಗಳು ವಿರಳ. ಒಂದು ವೇಳೆ ಅಂಥ ಪ್ರಯತ್ನಗಳು ನಡೆದರೂ ಕೂಡ ಅವುಗಳಲ್ಲಿ ಕ್ರೈಂ ಕಥೆಗಳು, ಲವ್​ ಸ್ಟೋರಿಗಳೇ ಪ್ರಮುಖವಾಗಿರುತ್ತವೆ. ಆದರೆ ಕನ್ನಡದ ‘ತನುಜಾ’ ಸಿನಿಮಾ ಭಿನ್ನವಾಗಿ ನಿಲ್ಲುತ್ತದೆ. ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯಲು ಕಷ್ಟಪಡುವ ಗ್ರಾಮೀಣ ಭಾಗದ ಹುಡುಗಿಯೊಬ್ಬಳ ರಿಯಲ್​ ಕಥೆಯನ್ನು ಈ ಸಿನಿಮಾ ಜನರ ಮುಂದಿಡುತ್ತದೆ. ಈ ಸಿನಿಮಾದಲ್ಲಿ ತನುಜಾ ಪಾತ್ರವನ್ನು ಸಪ್ತಾ ಪಾವೂರು ಮಾಡಿದ್ದಾರೆ. ಪತ್ರಕರ್ತ ವಿಶ್ವೇಶ್ವರ ಭಟ್​, ಸಚಿವ ಡಾ. ಕೆ. ಸುಧಾಕರ್​ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ತಮ್ಮ ನೈಜ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..

‘ಸ.ಹಿ.ಪ್ರಾ. ಶಾಲೆ ಕಾಸರಗೋಡು’ ಸಿನಿಮಾದಲ್ಲಿ ನಟಿ ಸಪ್ತಾ ಪಾವೂರು ಅವರು ವಿದ್ಯಾರ್ಥಿನಿ ಪಾತ್ರ ಮಾಡಿ ಗಮನ ಸೆಳೆದಿದ್ದರು. ಆ ಪಾತ್ರಕ್ಕಿಂತಲೂ ಹತ್ತು ಪಟ್ಟು ಹೆಚ್ಚು ನಟನೆಗೆ ಅವಕಾಶ ಇರುವಂತಹ ಪಾತ್ರವು ‘ತನುಜಾ’ ಚಿತ್ರದಲ್ಲಿದೆ. ಅದನ್ನು ಅವರು ತುಂಬ ಚೆನ್ನಾಗಿ ನಿಭಾಯಿಸಿದ್ದಾರೆ. ಇಡೀ ಕಥೆಯ ಕೇಂದ್ರವೇ ಆ ಪಾತ್ರ. ಕನಸು, ಹತಾಷೆ, ಧಾವಂತ ತುಂಬಿದ ತನುಜಾಳ ಪಾತ್ರಕ್ಕೆ ಸಪ್ತಾ ಅವರು ನ್ಯಾಯ ಒದಗಿಸಿದ್ದಾರೆ.

ಇದನ್ನೂ ಓದಿ: Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್​’; ಶಾರುಖ್​ ಫ್ಯಾನ್ಸ್​ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ

ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ವ್ಯವಸ್ಥೆ ಎಷ್ಟು ದುಸ್ತರವಾಗಿದೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಅಂಥ ಪ್ರದೇಶದ ಹೆಣ್ಣು ಮಗಳೊಬ್ಬಳು (ತನುಜಾ) ವೈದ್ಯಕೀಯ ಕಾಲೇಜಿನಲ್ಲಿ ಸೀಟ್​ ಪಡೆಯಲು ಕಷ್ಟಪಟ್ಟು ಓದುತ್ತಾಳೆ. ಆದರೆ ಕೊವಿಡ್​ ನಿಯಮಗಳ ಕಾರಣದಿಂದ, ತಾಂತ್ರಿಕ ಅಡೆಚಣೆ ಉಂಟಾಗಿ ಆಕೆಗೆ ಎಂಟ್ರೆನ್ಸ್​ ಎಕ್ಸಾಂ ಬರೆಯಲು ಹಾಲ್​ ಟಿಕೆಟ್​ ಸಿಗುವುದಿಲ್ಲ. ಕೊನೇ ದಿನದಲ್ಲಿ ಈ ಸಮಸ್ಯೆ ಪರಿಹರಿಸುವಲ್ಲಿ ಅಂದಿನ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್​, ತನುಜಾಳ ಶಿಕ್ಷಕರು ಮತ್ತು ಪಾಲಕರು ಹೇಗೆಲ್ಲ ಶ್ರಮಿಸಿದ್ದರು ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ: Veera Simha Reddy Review: ಬಾಲಯ್ಯ ಸಿನಿಮಾದಲ್ಲಿ ಅಲ್ಪ ಸ್ವಲ್ಪ ಎಮೋಷನ್​; ಮಿಕ್ಕಿದ್ದೆಲ್ಲವೂ ಆ್ಯಕ್ಷನ್​

ಬಡ ಮಕ್ಕಳ ಬದುಕಿನಲ್ಲಿ ಒಂದು ಸ್ಫೂರ್ತಿಯ ಕಿಡಿ ಹೊತ್ತಿಸುವಂತಹ ಈ ರಿಯಲ್​ ಘಟನೆಯನ್ನು ರೋಚಕವಾಗಿ ತೆರೆಗೆ ತರಲಾಗಿದೆ. ಅಲ್ಲಲ್ಲಿ ಒಂದಷ್ಟು ಕೊರತೆಗಳು ಕಾಣಿಸಿದರೂ ಕೂಡ ಚಿತ್ರದ ಒಟ್ಟಾರೆ ಆಶಯದ ಮುಂದೆ ಅವುಗಳನ್ನು ಮಾಫಿ ಮಾಡಬಹುದು. ಯಡಿಯೂರಪ್ಪ, ಸುಧಾಕರ್​, ಪತ್ರಕರ್ತ ವಿಶ್ವೇಶ್ವರ್​​ ಭಟ್​ ಅವರ ಪಾತ್ರಗಳನ್ನು ನೈಜವಾಗಿ ತೋರಿಸಲಾಗಿದೆ. ಅಂಥ ಕಡೆಗಳಲ್ಲೆಲ್ಲ ಇದೊಂದು ಸಾಕ್ಷ್ಯಚಿತ್ರದ ರೀತಿ ಭಾಸವಾಗುತ್ತದೆ.

ಇದನ್ನೂ ಓದಿ: Jamaligudda Review: ಜಮಾಲಿಗುಡ್ಡ ಸಹಜ-ಸುಂದರ; ಪ್ರೇಕ್ಷಕ ನಿರೀಕ್ಷಿಸೋದು ಅದಕ್ಕಿಂತಲೂ ಎತ್ತರ

ಇದೊಂದು ಸ್ಫೂರ್ತಿಯ ಕಥೆ. ಅದಕ್ಕೆ ತಕ್ಕಂತೆಯೇ ಪ್ರದ್ಯೋತನ್​ ಅವರು ಸಂಗೀತ ನೀಡಿದ್ದಾರೆ. ‘ಮುಗಿಸಾಯಿತು ಕಾಲು ದಾರಿಯ.. ತಲುಪಾಯಿತು ಹೆದ್ದಾರಿಯ..’ ಹಾಗೂ ‘ಕೆತ್ತಿ ಬಿಡು ಕನಸುಗಳ ಕಣ್ಣುಗಳ ಒಳಗೆ..’ ಹಾಡುಗಳಿಂದಾಗಿ ಸಿನಿಮಾದ ಮೆರುಗು ಹೆಚ್ಚಿದೆ. ಹಿನ್ನೆಲೆ ಸಂಗೀತದಲ್ಲೂ ಪ್ರದ್ಯೋತನ್​ ಗಮನ ಸೆಳೆಯುತ್ತಾರೆ. ರವೀಂದ್ರನಾಥ್​ ಟಿ. ಅವರ ಛಾಯಾಗ್ರಹಣ ಅಚ್ಚುಕಟ್ಟಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:55 pm, Thu, 2 February 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ