DK Shivakumar: ಭ್ರಷ್ಟಾಚಾರದ ಬಗ್ಗೆ ಮಾತಾಡುವ ಡಿಕೆ ಶಿವಕುಮಾರ್ ತಿಹಾರ್ ಜೈಲಿಗೆ ಹೋಗಿದ್ದು ಯಾಕಂತೆ? ಕೆ ಎಸ್ ಈಶ್ವರಪ್ಪ
ಶಿವಕುಮಾರ್ ಮನೆಯಲ್ಲಿ ಸಿಕ್ಕ ದಾಖಲೆರಹಿತ ಕೋಟಿಗಟ್ಟಲೆ ಹಣದ ಬಗ್ಗೆ ಅವರು ಯಾರಿಗಾದರೂ ಲೆಕ್ಕ ಕೊಟ್ಟಿದ್ದಾರಾ ಎಂದು ಈಶ್ವರಪ್ಪ ಕೇಳಿದರು.
ಚಾಮರಾಜನಗರ: ಜಿಲ್ಲೆಯಲ್ಲಿ ಇಂದಿನಿಂದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ (Vijay Sankalp Yatre) ಆರಂಭಗೊಂಡಿದ್ದು ಅದರಲ್ಲಿ ಭಾಗಿಯಾಗಲು ಶಿವಮೊಗ್ಗ ಶಾಸಕ ಕೆ ಎಸ್ ಈಶ್ವರಪ್ಪ (KS Eshwarappa) ಆಗಮಿಸಿದ್ದಾರೆ. ಯಾತ್ರೆಗೆ ಮೊದಲು ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಸಚಿವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರನ್ನು ತರಾಟೆಗೆ ತೆಗೆದುಕೊಂಡರು. ಮಾತೆತ್ತಿದ್ದರೆ ಭ್ರಷ್ಟಾಚಾರದ ಬಗ್ಗೆ ಮಾತಾಡುವ ಶಿವಕುಮಾರ್ ತಿಹಾರ್ ಜೈಲಿನ ಅತಿಥಿಯಾಗಿದ್ದು ಯಾಕೆ ಅನ್ನೋದನ್ನು ಹೇಳ್ತಾರಾ? ಅವರ ಮನೆಯಲ್ಲಿ ಸಿಕ್ಕ ದಾಖಲೆರಹಿತ ಕೋಟಿಗಟ್ಟಲೆ ಹಣದ ಬಗ್ಗೆ ಅವರು ಯಾರಿಗಾದರೂ ಲೆಕ್ಕ ಕೊಟ್ಟಿದ್ದಾರಾ ಎಂದು ಈಶ್ವರಪ್ಪ ಕೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 01, 2023 11:56 AM
Latest Videos