AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿ ಖಾತಾ ಹೊಂದಿದವರು ಎ ಖಾತಾಗೆ ಪರಿವರ್ತಿಸಿಕೊಳ್ಳುವ ಸೌಲಭ್ಯವನ್ನು ನಮ್ಮ ಸರ್ಕಾರ ನೀಡುತ್ತಿದೆ: ಕೃಷ್ಣ ಭೈರೇಗೌಡ

ಬಿ ಖಾತಾ ಹೊಂದಿದವರು ಎ ಖಾತಾಗೆ ಪರಿವರ್ತಿಸಿಕೊಳ್ಳುವ ಸೌಲಭ್ಯವನ್ನು ನಮ್ಮ ಸರ್ಕಾರ ನೀಡುತ್ತಿದೆ: ಕೃಷ್ಣ ಭೈರೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 18, 2025 | 4:13 PM

Share

ಬಿ ಖಾತಾವನ್ನು ಎ ಖಾತಾವನ್ನಾಗಿ ಪರಿವರ್ತಿಸಿಕೊಳ್ಳುವ ಪ್ರಸ್ತಾವನೆಗೆ ನಿನ್ನೆ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ, ಆದಷ್ಟು ಬೇಗ ಈ ಸೌಲಭ್ಯವನ್ನು ಜಾರಿಗೆ ತರಲಾಗುವುದು ಮತ್ತು ಸೈಟನ್ನು ಹೊಂದಿದಾಗ್ಯೂ ಅನಧಿಕೃತ ನಿವೇಶನ ಹೊಂದಿದಿರುವ ಸ್ಥಿತಿಗತಿಯಲ್ಲಿರುವ ಬೆಂಗಳೂರು ನಿವಾಸಿಗಳು ಸೌಲಭ್ಯದ ಸದುಪಯೋಗ ಮಾಡಿಕೊಳ್ಳಬೇಕೆಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ಬೆಂಗಳೂರು, ಜುಲೈ 18: ಸೈಟು ಮತ್ತು ಕಟ್ಟಡಗಳ ಬಿ ಖಾತಾ ಹೊಂದಿರುವವರು ಅದನ್ನು ಎ ಖಾತಾವಾಗಿ (A Khata) ಮಾರ್ಪಡಿಸಿಕೊಳ್ಳಲು ರಾಜ್ಯ ಸರ್ಕಾರ ಒಂದು ದಾರಿಯನ್ನು ಸಿದ್ಧ ಮಾಡಿದೆ, ಜನ ಸೌಲಭ್ಯದ ಸದುಪಯೋಗ ಮಾಡಿಕೊಳ್ಳಬೇಕೆಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು. ಸೈಟಿನ ಬಿ ಖಾತಾ ಹೊಂದಿರುವವರಿಗೆ ಮನೆ ಕಟ್ಟಿಕೊಳ್ಳಲು ಪ್ಲ್ಯಾನ್ ಅಪ್ರೂವಲ್ ಸಿಗಲ್ಲ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳು ಗೃಹಸಾಲವನ್ನೂ ನೀಡಲ್ಲ, ಈ ಹಿನ್ನೆಲೆಯಲ್ಲೇ ನಗರದಲ್ಲಿ ಅನೇಕ ಕಡೆ ಅನಧಿಕೃತ ಬಡಾವಣೆಗಳು ತಲೆಯೆತ್ತಿವೆ, ಜನ ಪರವಾನಗಿಯಿಲ್ಲದೆ ಮನೆಗಳನ್ನು ಕಟ್ಟಿಕೊಂಡಿದ್ದಾರೆ ಎಂದು ಹೇಳಿದ ಕೃಷ್ಣ ಭೈರೇಗೌಡ ಇಂಥ ಅನಧಿಕೃತ ಬಡಾವಣೆ ಮತ್ತು ಮನೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗೋದಿಲ್ಲ ಎಂದರು. ಹಾಗಾಗೇ, ಬಿ ಖಾತಾ ಹೊಂದಿರುವ ಸೈಟುಗಳ ಮಾಲೀಕರು ಎ ಖಾತಾಗಳಾಗಿ ಪರಿವರ್ತಿಸಿಕೊಳ್ಳಲು ಸರ್ಕಾರ ಏರ್ಪಾಟು ಮಾಡಿಕೊಡುತ್ತಿದೆ ಎಂದರು.

ಇದನ್ನೂ ಓದಿ:  ಭೂ ಸುಧಾರಣಾ ಯೋಜನೆ ಬಗ್ಗೆ ವಿವರವಾದ ಮಾಹಿತಿ ಒದಗಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ